ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಲಸಿಕೆ ತೆಗೆದುಕೊಂಡ್ರಾ?; ಬಿಬಿಎಂಪಿಯಿಂದ ಮನೆ-ಮನೆ ಸಮೀಕ್ಷೆ

|
Google Oneindia Kannada News

ಬೆಂಗಳೂರು, ಜುಲೈ 15; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲರಿಗೂ ಲಸಿಕೆ ನೀಡಬೇಕು ಎಂದು ಪಣತೊಟ್ಟಿದೆ. ಇದಕ್ಕಾಗಿ ಲಸಿಕೆ ಪಡೆಯದ ಜನರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಲಸಿಕೆ ಪಡೆದವರ ಮಾಹಿತಿ ಸಂಗ್ರಹ ಮಾಡಲು ಮನೆ-ಮನೆ ಸಮೀಕ್ಷೆ ಆರಂಭಿಸಲಿದೆ.

ಕರ್ನಾಟಕದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿರುವ ಹೆಗ್ಗಳಿಕೆ ಬೆಂಗಳೂರು ನಗರ ಜಿಲ್ಲೆಯದ್ದಾಗಿದೆ. ಬಿಬಿಎಂಪಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದು ಅಭಿಯಾನವನ್ನು ನಡೆಸುತ್ತಿದೆ.

ಕರ್ನಾಟಕ; ದಿನಕ್ಕೆ 5 ಲಕ್ಷ ಡೋಸ್ ಲಸಿಕೆಗೆ ಬೇಡಿಕೆ, ಪೂರೈಕೆ ಎಷ್ಟು? ಕರ್ನಾಟಕ; ದಿನಕ್ಕೆ 5 ಲಕ್ಷ ಡೋಸ್ ಲಸಿಕೆಗೆ ಬೇಡಿಕೆ, ಪೂರೈಕೆ ಎಷ್ಟು?

ನಗರದಲ್ಲಿ ಯಾರು ಲಸಿಕೆ ಪಡೆದಿದ್ದಾರೆ, ಯಾರು ಪಡೆದಿಲ್ಲ? ಎಂಬ ಮಾಹಿತಿ ಸಂಗ್ರಹ ಮಾಡಲು ಬಿಬಿಎಂಪಿ ಮನೆ-ಮನೆ ಸಮೀಕ್ಷೆ ಕೈಗೊಳ್ಳಲಿದೆ. ಇನ್ನೂ ಲಸಿಕೆಯನ್ನು ಯಾರು ಪಡೆದಿಲ್ಲವೋ ಅವರಿಗೆ ಲಸಿಕೆ ನೀಡಲು ಕಾರ್ಯಕ್ರಮ ರೂಪಿಸಲಿದೆ.

ಭಾರತದಲ್ಲಿ ಲಸಿಕೆ ವಿತರಣೆಯಲ್ಲಿ 18-44 ವಯೋಮಾನವರಿಗೆ ಆದ್ಯತೆ ಏಕೆ? ಭಾರತದಲ್ಲಿ ಲಸಿಕೆ ವಿತರಣೆಯಲ್ಲಿ 18-44 ವಯೋಮಾನವರಿಗೆ ಆದ್ಯತೆ ಏಕೆ?

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಈ ಕುರಿತು ಮಾಹಿತಿ ನೀಡಿದ್ದಾರೆ. "ನಾವು ಮನೆ-ಮನೆ ಸಮೀಕ್ಷೆಗೆ ಯೋಜನೆ ರೂಪಿಸುತ್ತಿದ್ದೇವೆ. ಸಮೀಕ್ಷೆಯಿಂದ ನಮಗೆ ಲಸಿಕೆ ಪಡೆಯದ ಜನರ ಮಾಹಿತಿ ಲಭ್ಯವಾಗಲಿದೆ" ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ಸೃಷ್ಟಿಗೆ ಅಸಲಿ ಕಾರಣ ಯಾರು?ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ಸೃಷ್ಟಿಗೆ ಅಸಲಿ ಕಾರಣ ಯಾರು?

ನಗರದಲ್ಲಿ ವ್ಯಾಕ್ಸಿನ್ ಕೊರತೆ

ನಗರದಲ್ಲಿ ವ್ಯಾಕ್ಸಿನ್ ಕೊರತೆ

ಲಸಿಕೆ ಕೊರತೆಯ ಕಾರಣ ಕೆಲವು ಜನರು ಇನ್ನೂ ಲಸಿಕೆ ಪಡೆದಿಲ್ಲ. ಕೋವಿಡ್ ಲಸಿಕೆ ಪಡೆಯಲು ಬಂದ ಅವರನ್ನು ವಾಪಸ್ ಕಳಿಸಲಾಗಿದೆ. ಜುಲೈ 3ರಂದು ನಗರದಲ್ಲಿ 1.24 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಜುಲೈ 4ರಂದು 47,221 ಜನರು ಲಸಿಕೆ ಪಡೆದಿದ್ದರೆ. ಜುಲೈ 13ರಂದು 36,503 ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ.

ಲಸಿಕೆ ಪಡೆದವರ ವಯೋಮಿತಿ

ಲಸಿಕೆ ಪಡೆದವರ ವಯೋಮಿತಿ

ಬೆಂಗಳೂರು ನಗರದಲ್ಲಿ 18-44 ವಯೋಮಾನದ 26,44,802 ಜನರು, 45-59 ವಯೋಮಿತಿಯ 11,98,115, 60+ ವಯೋಮಿತಿಯ 7,92,362 ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ನಗರದಲ್ಲಿ ಮೊದಲ ಡೋಸ್ ಲಸಿಕೆ ಪಡೆದವರೇ ಹೆಚ್ಚು ಎಂಬುದು ಸಹ ತಿಳಿದುಬಂದಿದೆ.

ಶೇ 43ರಷ್ಟು ಜನರು ಮಾತ್ರ

ಶೇ 43ರಷ್ಟು ಜನರು ಮಾತ್ರ

ಬೆಂಗಳೂರು ನಗರದಲ್ಲಿ 60+ ವಯೋಮಿತಿಯ ಶೇ 43ರಷ್ಟು ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. 18-44 ವಯೋಮಿತಿಯ ಶೇ 18ರಷ್ಟು ಜನರು ಮಾತ್ರ ಎರಡು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಕೇಂದ್ರದಿಂದ ಲಸಿಕೆ ನಿರೀಕ್ಷೆಯಂತೆ ಪೂರೈಕೆಯಾಗದ ಕಾರಣ ಗುರಿ ಹಾಕಿಕೊಂಡಂತೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ.

Recommended Video

ದಲೈಲಾಮಾ ಹುಟ್ಟುಹಬ್ಬದ ಆಚರಣೆಗೆ ಕಿರಿ ಕಿರಿ ಮಾಡಿದ ಚೀನಾ! | Oneindia Kannada
ಪಿಎಚ್‌ಸಿಯಲ್ಲೇ ಲಸಿಕೆ

ಪಿಎಚ್‌ಸಿಯಲ್ಲೇ ಲಸಿಕೆ

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45+ ವಯೋಮಿತಿಯ ಜನರಿಗೆ ಲಸಿಕೆ ನೀಡಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಪಿಎಚ್‌ಸಿಯಲ್ಲಿ ದಿನಕ್ಕೆ 200 ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದನ್ನು 300ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿಯೇ ಲಸಿಕೆ ನೀಡಲಾಗುತ್ತಿದೆ. ಇದುವರೆಗೂ 1.8 ಲಕ್ಷ ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ.

English summary
Bruhat Bengaluru Mahanagara Palike (BBMP) will conduct door to door survey in the city to identify who have not taken Covid vaccination yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X