ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಗ್ರತೆ; ದೇಶದಲ್ಲಿಯೇ ಅತಿ ಹೆಚ್ಚು ಸಕ್ರಿಯ ಪ್ರಕರಣವಿರುವುದು ಬೆಂಗಳೂರಿನಲ್ಲಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ದೇಶದಲ್ಲಿ ಎರಡನೇ ಕೊರೊನಾ ಅಲೆ ಆತಂಕ ಹುಟ್ಟಿಸಿದ್ದು, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಕೊರೊನಾ ವಿಚಾರದಲ್ಲಿ ಬೆಂಗಳೂರಿನ ಹೆಸರೂ ಕೇಳಿಬರುತ್ತಿದೆ.

ಇಡೀ ದೇಶದಲ್ಲಿಯೇ ಬೆಂಗಳೂರು ನಗರದಲ್ಲಿ ಅತಿ ಹೆಚ್ಚಿನ ಸಕ್ರಿಯ ಕೊರೊನಾ ಪ್ರಕರಣಗಳು ದಾಖಲಾಗಿವೆ. ಶುಕ್ರವಾರದವರೆಗೆ 1.5 ಲಕ್ಷ ಸಮೀಪಕ್ಕೆ ಬೆಂಗಳೂರಿನಲ್ಲಿ ಸಕ್ರಿಯ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿವೆ. ಶುಕ್ರವಾರ ಕರ್ನಾಟಕದಲ್ಲಿ 26962 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರ ಪ್ರದೇಶವೊಂದರಲ್ಲೇ 16662 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಈ ಮೂಲಕ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624 ಕ್ಕೆ ಏರಿಕೆಯಾಗಿತ್ತು. ಮುಂದೆ ಓದಿ...

ಕರ್ನಾಟಕದಲ್ಲಿ 26962 ಹೊಸ ಕೊರೊನಾ ಪ್ರಕರಣ ದಾಖಲುಕರ್ನಾಟಕದಲ್ಲಿ 26962 ಹೊಸ ಕೊರೊನಾ ಪ್ರಕರಣ ದಾಖಲು

 ಬೆಂಗಳೂರಿನಲ್ಲಿ 1.5 ಲಕ್ಷ ಸಕ್ರಿಯ ಪ್ರಕರಣಗಳು

ಬೆಂಗಳೂರಿನಲ್ಲಿ 1.5 ಲಕ್ಷ ಸಕ್ರಿಯ ಪ್ರಕರಣಗಳು

ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳು 1.5 ಲಕ್ಷವಿದೆ. ಬೆಂಗಳೂರಿನ ನಂತರ ಪುಣೆ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ನಗರವಾಗಿದೆ. ಪುಣೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.1 ಲಕ್ಷ ಇದೆ. ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳು ಒಂದು ಲಕ್ಷದ ಸಮೀಪವಿದ್ದು, ಮುಂಬೈನಲ್ಲಿ 81174 ಸಕ್ರಿಯ ಪ್ರಕರಣಗಳಿವೆ.

ಕೋವಿಡ್ 19: ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎಂದ ಯಡಿಯೂರಪ್ಪಕೋವಿಡ್ 19: ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎಂದ ಯಡಿಯೂರಪ್ಪ

 ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪಾಲು 70%

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಪಾಲು 70%

ಬೆಂಗಳೂರಿನಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಮಹಾರಾಷ್ಟ್ರ, ಉತ್ತರ ಪ್ರದೇಶ, ಕೇರಳ ಹಾಗೂ ಕರ್ನಾಟಕದಲ್ಲಿಯೇ ಹೆಚ್ಚಿನ ಪ್ರಕರಣ ಇದಾಗಿದೆ. ಕರ್ನಾಟಕದಲ್ಲಿ ಬೆಂಗಳೂರು ಒಂದರಲ್ಲಿಯೇ 70% ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಪ್ರಕರಣಗಳಿಗಿಂತ ಸಕ್ರಿಯ ಪ್ರಕರಣಗಳು ಆರೋಗ್ಯ ವ್ಯವಸ್ಥೆಯ ಹೊರೆಯನ್ನು ತಿಳಿಸುತ್ತವೆ. ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ತಾತ್ಕಾಲಿಕ ಕೊರೊನಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

 ಮೇ 1ರ ವೇಳೆಗೆ ಬೆಂಗಳೂರಿನಲ್ಲಿ 25 ಸಾವಿರ ದಿನನಿತ್ಯದ ಪ್ರಕರಣ

ಮೇ 1ರ ವೇಳೆಗೆ ಬೆಂಗಳೂರಿನಲ್ಲಿ 25 ಸಾವಿರ ದಿನನಿತ್ಯದ ಪ್ರಕರಣ

ಎಪಿಡೆಮಿಯಾಲಜಿಸ್ಟ್ ಹಾಗೂ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ ಆರ್ ಬಾಬು ಅವರು ಈ ಕುರಿತು ಮಾತನಾಡಿದ್ದು, ಮೇ 1ರ ವೇಳೆಗೆ ಬೆಂಗಳೂರಿನಲ್ಲಿ ದಿನನಿತ್ಯದ ಪ್ರಕರಣ 25 ಸಾವಿರವನ್ನೂ ಮುಟ್ಟಬಹುದು ಎನ್ನಲಾಗಿದೆ. ಇದರಲ್ಲಿ ಶೇ 5ರಷ್ಟು ಮಂದಿ ಗಂಭೀರ ಸ್ಥಿತಿ ತಲುಪಿದರೂ ಅವರಿಗೆ ಅಗತ್ಯ ಆರೋಗ್ಯ ಸೌಲಭ್ಯ ದೊರೆಯುವುದು ಕಷ್ಟವಾಗಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವುದು ಅತಿ ಅವಶ್ಯಕವಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡದೇ ನಮಗೆ ಆಸ್ಪತ್ರೆ ಹಾಸಿಗೆಗಳನ್ನು ನಿರ್ವಹಣೆ ಮಾಡುವುದು ಅಸಾಧ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ.

 ನಗರದಲ್ಲಿ 90-92% ರೋಗಿಗಳು ಐಸೊಲೇಷನ್‌ನಲ್ಲಿದ್ದಾರೆ

ನಗರದಲ್ಲಿ 90-92% ರೋಗಿಗಳು ಐಸೊಲೇಷನ್‌ನಲ್ಲಿದ್ದಾರೆ

ಬೆಂಗಳೂರಿನಲ್ಲಿ 90ರಿಂದ 92% ಕೊರೊನಾ ರೋಗಿಗಳು ಮನೆಯಲ್ಲಿಯೇ ಐಸೊಲೇಷನ್‌ನಲ್ಲಿದ್ದಾರೆ. ಆದರೆ ಅವರ ಮೇಲೆ ನಿಗಾ ವಹಿಸುವುದೇ ಸದ್ಯದ ಸವಾಲಾಗಿದೆ. ಹೀಗಾಗಿ ಅರಮನೆ ಮೈದಾನ, ಕಲ್ಯಾಣ ಮಂಟಪಗಳಲ್ಲಿ ವೈದ್ಯಕೀಯ ಕೇಂದ್ರಗಳನ್ನು ತೆರೆಯುವಂತೆ ತಜ್ಞರು ಸಲಹೆ ನೀಡಿರುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಅವರು ಮಾಹಿತಿ ನೀಡಿದ್ದಾರೆ.

English summary
Bengaluru has emerged as the district with the highest number of active cases in the country,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X