ಅನಂತ್ ಕಣ್ಕುಕ್ಕುವಂತೆ ನಂದನ್ ನಿಲೇಕಣಿ ಪರ ಪ್ರಚಾರ
ಬೆಂಗಳೂರು,
ಏಪ್ರಿಲ್ 7- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ನಂದನ್ ನಿಲೇಕಣಿ ಅವರ ಬಗ್ಗೆ ಜನ ಅದರಲ್ಲೂ ಯುವಜನತೆ ಚುನಾವಣಾ ಹತ್ತಿರವಾಗುತ್ತಿದ್ದಂತೆ ಹೆಚ್ಚು ಹೆಚ್ಚು ಕುತೂಹಲ ಬೆಳೆಸಿಕೊಳ್ಳುತ್ತಿದ್ದಾರೆ. ಪ್ರಮುಖ ಪ್ರತಿಸ್ಪರ್ಧಿ, 5 ಬಾರಿ ಕ್ಷೇತ್ರದ ಸಂಸದರಾಗಿರುವ ಎಚ್ ಅನಂತ ಕುಮಾರ್ ಅವರ ಕಣ್ಣುಕುಕ್ಕುವಂತೆ ನಂದನ್ ಪರ ಯುವಜನತೆ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. (ವಿಡಿಯೋ) id="toptextpromo"> id='are-slot-1' class='oiad oi-axt oiadv'>Royal
Meenakshi Mall: ಏಪ್ರಿಲ್ 5ರ ಶನಿವಾರ ಸಂಜೆ ಬನ್ನೇರುಘಟ್ಟ ರಸ್ತೆಯಲ್ಲಿರುವ ರಾಯಲ್ ಮೀನಾಕ್ಷಿ ಮಾಲ್ ನಲ್ಲಿ ವಿಂಡೋ ಶಾಪಿಂಗ್ ಮಾಡುತ್ತ ಓಡಾಡುತ್ತಿದ್ದವರಿಗೆ, ಅಂಗಡಿಗಳ ಹುಡುಗರಿಗೆ ಅಚ್ಚರಿಯೊಂದು ಕಾದಿತ್ತು. ವಿದ್ಯಾರ್ಥಿಗಳು, ಯುವಕ-ಯುವತಿಯರು ಮತ್ತು ಒಂದಷ್ಟು ವೃತ್ತಿಪರರು ಸೇರಿ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರಿಗೆ ಬೆಂಬಲ ಸೂಚಿಸುತ್ತ ಫ್ಲಾಶ್ ಮಾಬ್ ನಲ್ಲಿ ನರ್ತಿಸಿದರು. (ನಿಲೇಕಣಿ ಗೆಲ್ಲಿಸಲೇಬೇಕು- ಸೋನಿಯಾ ಗುಪ್ತ ಎಚ್ಚರಿಕೆ)id='are-slot-2' class='oiad oi-axt oiadv'>

Rang De Basantiಗೆ ಹೆಜ್ಜೆ ಹಾಕಿದ ನಂದನ್ ಬೆಂಬಲಿಗರು
ರಂಗ್ ದೇ ಬಸಂತಿ ಇತ್ಯಾದಿ ಜನಪ್ರಿಯ ಹಾಡುಗಳಿಗೆ ಹೆಜ್ಜೆಹಾಕಿದ 20ಕ್ಕೂ ಹೆಚ್ಚಿನ ಹುಡುಗ-ಹುಡುಗಿಯರು ಕೊನೆಯಲ್ಲಿ ನಿಲೇಕಣಿಗೆ ಮತ ಹಾಕಿ ಎಂದು ಕೋರಿದರು. ಅಗಂಡಿಗಳ ಮಾಲೀಕರು, ಕೆಲಸಗಾರರು ಮೊದಲ ಬಾರಿಗೆ ಹೀಗೆ ಫ್ಲಾಶ್ ಮಾಬ್ ನೋಡಿದವರು, ಯುವಜನತೆ ಸಕ್ರಿಯವಾಗಿ ರಾಜಕೀಯದ ವಿಚಾರದಲ್ಲಿ ತೊಡಗಿಸಿಕೊಂಡಿದ್ದನ್ನು ಕಂಡು ಸ್ಫೂರ್ತಿಗೊಂಡರು.

ನಿಲೇಕಣಿಗೆ ಜೈ ಎಂದ ಕಾನೂನು ವಿದ್ಯಾರ್ಥಿ ಜೈ
ಎಲ್ಲರೊಂದಿಗೆ ಹೆಜ್ಜೆಹಾಕಿದ ಬೆಂಗಳೂರು ಕಾನೂನು ಅಧ್ಯಯನ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ಜೈ 'ಇನ್ಫೋಸಿಸ್ ಸಹಸ್ಥಾಪಕರಾದ ನಂದನ್ ನಮ್ಮ ದೇಶ ಮತ್ತು ಕರ್ನಾಟಕದಲ್ಲಿ ಯುವಜನತೆಗೆ ತುಂಬ ಉದ್ಯೋಗಾವಕಾಶ ಹುಟ್ಟುಹಾಕಿದ್ದಾರೆ. ಅಂಥಹವರು ರಾಜಕೀಯಕ್ಕೆ ಬಂದ್ರೆ ಒಳ್ಳೇದು. ಅದಕ್ಕೇ ನಾನು ಅವರಿಗೆ ಬೆಂಬಲ ಕೊಡ್ತೀನಿ' ಎಂದು ಅಭಿಪ್ರಾಯ ಹಂಚಿಕೊಂಡರು.

ಮಾಲ್ ಅಂಗಡಿಗಳ ಮಾಲೀಕರು ನಿಲೇಕಣಿಗೆ ಜೈಜೈ
ಅಂಗಡಿಗಳ ಮಾಲೀಕರು ಯುವಜನರ ಉತ್ಸಾಹ ನೋಡಿ ಎಷ್ಟು ಸ್ಫೂರ್ತಿಗೊಂಡರೆಂದರೆ ಅಂಗಡಿಯ ಮಾಲೀಕರೊಬ್ಬರು ಮುಂದೆ ಬಂದು, 'ಈ ಚುನಾವಣೆಯಲ್ಲಿ ಜನರಿಗೆ ಮತ ಹಾಕಿ ಅಂತ ಇಷ್ಟೆಲ್ಲ ಯುವಕ ಯುವತಿಯರು ಬಂದಿರೋದು ಇದೇ ಮೊದ್ಲು. ಯುವಕ ಯುವತಿಯರು ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಲ್ಲಿ ಸಕ್ರಿಯರಾಗಿದ್ದಾರೆ. ಇದು ಸ್ವಾಗತಾರ್ಹ' ಎಂದು ಆಶಾಭಾವ ವ್ಯಕ್ತಪಡಿಸಿದರು.

ಚುನಾವಣೆ ಹತ್ತಿರವಾಗುತ್ತಿದ್ದಂತೆ ನಿಲೇಕಣಿ ಬೆಂಬಲಿಗರು ಹೆಚ್ಚು
ಇಟ್ಟಿನಲ್ಲಿ ವಾರಾಂತ್ಯದಲ್ಲಿ ಕಂಡುಬಂದ ಈ ಜನ-ಸ್ನೇಹಿ ಚುನಾವಣಾ ಪ್ರಚಾರವನ್ನು ಕಂಡಾಗ ಅನ್ನಿಸಿದ್ದು 'ನಿಲೇಕಣಿ ಅವರು ಬಹಳಷ್ಟು ಜನರಲ್ಲಿ ಸ್ಫೂರ್ತಿ ತುಂಬಿದ್ದಾರೆ. ಅವರು ಗೆಲ್ಲಬೇಕು ಎಂದು ಹಾರೈಸುತ್ತಿರುವವರ ಸಂಖ್ಯೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೆಚ್ಚಾಗುತ್ತಿದೆ' ಎಂಬುದು ಎಂದು ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ನಿಲೇಕಣಿ ಬೆಂಬಲಿಗರು ಹೇಳಿದರು.












Click it and Unblock the Notifications