ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಡೌಟು, ಅಂಕಲ್ ಆಸ್ಪತ್ರೆಗೆ ಆಂಟಿ ಜೈಲಿಗೆ!
ಬೆಂಗಳೂರು, ಆಗಸ್ಟ್ 27: ಲವ್ ಕಹಾನಿಯಲ್ಲಿ ಟ್ವಿಸ್ಟ್‌ಗಳು ಬರುತ್ತದೆ. ಲವ್ ಕಂ ಅಫೇರ್ ಕಹಾನಿಯಲ್ಲಿ ಅನುಮಾನ ಮೂಡುತ್ತೆ ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಉದಾಹರಣೆ. ಮದುವೆಯಾಗಿದ್ದಾಕೆ ಮತ್ತೊಬ್ಬನ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಅನುಮಾನಪಟ್ಟು ಅಂಕಲ್ ಆಸ್ಪತ್ರೆಗೆ ಸೇರಿದ್ರೆ ಆಂಟೀ ಜೈಲು ಸೇರಿದ್ದಾರೆ.
ಅವರಿಬ್ಬರದ್ದು ಮೊಬೈಲ್ ಅಂಗಡಿಯಲ್ಲಿ ಶುರುವಾದ ಕಹಾನಿ. ಅವಳಿಗೆ ಮೊದಲೇ ಒಂದು ಮದುವೆಯಾಗಿತ್ತು. ಈತನಿಗೂ ಮದುವೆಯಾಗಿತ್ತು. ಹೀಗಿದ್ದರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಈ ನಡುವೆ ಇಬ್ಬರ ನಡುವೆ ಅನುಮಾನದ ಹುತ್ತ ಮೂಡಿದೆ. ಪ್ರಿಯಕರನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡುವ ಹಂತಕ್ಕೆ ತಲುಪಿದೆ. ಪರಿಣಾಮ ಪ್ರೇಯಸಿ ಜೈಲು ಸೇರಿದ್ರೆ ಪ್ರಿಯಕರ ಆಸ್ಪತ್ರೆ ಪಾಲಾಗಿದ್ದಾನೆ.
ಮದುವೆಯಾಗಿದ್ದರು ಮತ್ತೊಬ್ಬರು ಬೇಕು ಅನ್ನೋ ಕಾಮದ ಆಸೆಗೋ ಮೋಹದ ಬಲೆಗೋ ಸಿಲುಕಿದ್ದ ಇಬ್ಬರು ನೆಮ್ಮದಿಯಾಗಿ ಜೀವನ ಮಾಡಿಕೊಂಡು ಹೋಗುವ ಮಾತನಾಡಿದ್ದರು. ಇಬ್ಬರು ಮದುವೆಯಾಗಿದ್ದರಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವುದೇ ಲೇಸು ಎಂದು ಸುಮ್ಮನಾಗಿದ್ದರು. ಆದರೆ ಇಬ್ಬರ ತಲೆಯಲ್ಲಿ ಹೊಕ್ಕ ಅನುಮಾನದ ಹುಳು ಅನಾಹುತಕ್ಕೆ ಎಡೆಯನ್ನು ಮಾಡಿಕೊಟ್ಟಿದೆ.

ಕೈಕಾಲು ಮುರ್ಕೊಂಡ ಪ್ರಿಯಕರ
ಪ್ರಿಯಕರ ಮಹದೇವ ಪ್ರಸಾದ್. ಕೈಕಾಲು ಮುರ್ಕೊಂಡು ಕುಳಿತು ಬಿಟ್ಟಿದ್ದಾನೆ. ಈತನ ಸ್ಥಿತಿಗೆ ಕಾರಣ ಆತನೇ ಮಾಡಿಕೊಂಡ ಯಡವಟ್ಟಾಗಿತ್ತು. ಮದುವೆಯಾಗಿದ್ದರು ಮತ್ತೊಬ್ಬ ವಿವಾಹಿತ ಮಹಿಳೆ ಹಿಂದೆ ಬಿದ್ದಿದ್ದ. ಮೂರು ವರ್ಷ ಆಕೆಯೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದು ಕೊನೆಗೆ ಆಕೆಗೆ ಬೇರೊಬ್ಬರ ಜೊತೆ ಲಿಂಕ್ ಇದೆ ಅಂತ ಆಕೆಯನ್ನು ಬಿಟ್ಟಿದ್ದ. ಆದರೆ ಆತ ಬಿಟ್ಟರು ಪ್ರೇಯಸಿ ಬಿಡ್ಬೇಕಲ್ಲ. ಇವನಿಗಾಗಿ ಗಂಡನಿಗೂ ಡಿವೋರ್ಸ್ ಕೊಡಲು ಮುಂದಾಗಿದ್ದರೇ ಈತ ಅನ್ಯಾಯ ಮಾಡಿದ ಅಂತ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದಾಳೆ.

ಪ್ರಿಯಕರನನ್ನು ಕಿಡ್ನಾಪ್ ಮಾಡುವ ಪ್ಲಾನ್
ಮಹದೇವ್ ಪ್ರಸಾದ್ ನನ್ನ ಹಲ್ಲೆ ಮಾಡಿ ಕಿಡ್ನಾಪ್ ಮಾಡಿದ ಕಿಂಗ್ ಪಿನ್ ಕ್ಲಾರಾ. ಮಹದೇವ ಪ್ರಸಾದ್ ನ ಪ್ರೇಯಸಿ. ಕಳೆದ ಮೂರು ವರ್ಷಗಳ ಹಿಂದೆ ಕ್ಲಾರಾ ಮೊಬೈಲ್ ರಿಪೇರಿ ಎಲೆಕ್ಟ್ರಾನಿಕ್ ಶಾಪ್‌ಗೆ ಹೋಗಿದ್ದಳು ಅಲ್ಲಿ ಪರಿಚಯವಾದವನೇ ಮಹದೇವಪ್ರಸಾದ್. ಕ್ಲಾರಾ ಕೇಳಿದ್ದ ಮೊಬೈಲ್ ಸ್ಪೇರ್ ಪಾರ್ಟನ್ನು ಒಂದೇ ದಿನದಲ್ಲಿ ಮಹದೇವಪ್ರಸಾದ್ ತರಿಸಿಕೊಟ್ಟಿದ್ದ. ಹೀಗಾಗಿ ಇಬ್ಬರ ಮೊಬೈಲ್ ನಂಬರ್ ಎಕ್ಸ್ ಚೇಂಜ್ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರಿಗೂ ಮದುವೆಯಾಗಿದ್ದರು ಬೇರೊಂದು ಮನೆ ಮಾಡಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಮಹದೇವ್ ಪ್ರಸಾದ್‌ಗಾಗಿ ಕ್ಲಾರಾ, ಗಂಡ ಮಧುನನ್ನೂ ಬಿಡಲು ಸಿದ್ದವಾಗಿದ್ದಳು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಅದೊಂದು ಅನುಮಾನದ ಹುತ್ತ ಹುಟ್ಟಿಕೊಂಡಿತ್ತು. ಆಕೆಗೆ ಈತನ ಮೇಲೆ ಅನುಮಾನವಾದರೇ ಈತನಿಗೆ ಆಕೆಯ ಅನುಮಾನ ಹೆಚ್ಚಾಗಿತ್ತು. ಹೀಗಾಗಿ ಇಬ್ಬರೂ ದೂರವಾಗಿದ್ದರು. ಆದರೆ ಕ್ಲಾರಾ ಮಾತ್ರ ಈತನಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಅಂತ ಎಂದುಕೊಂಡು ಸ್ನೇಹಿತೆ ಹೇಮಾವತಿ ಬಳಿ ಹೇಳಿಕೊಂಡಿದ್ದಳು. ಆಗಲೇ ಹುಟ್ಟಿಕೊಂಡಿದ್ದು ಕಿಡ್ನಾಪ್ ಮಾಡುವ ಐಡಿಯಾ.

ಪ್ರಿಯಕರ ಕಿಡ್ನಾಪ್ ಮತ್ತು ಥಳಿತ
ಕ್ಲಾರಾ ತನ್ನ ಸ್ನೇಹಿತೆ ಹೇಮಾವತಿ ಬುದ್ದಿಕಲಿಸುವ ಬಗ್ಗೆ ಹೇಳಿದ್ದಳು. ಹೇಮಾವತಿ ಆಕೆಯ ಗಂಡ ಸಂತೋಷ್‌ಗೆ ಹೇಳಿದ್ದಳು. ಸಂತೋಷ್ ಈ ವಿಚಾರವನ್ನು ತಾನು ಕೆಲಸ ಮಾಡುವ ಬಾಸ್ ಕಿರಣ್ ಅಲಿಯಾಸ್ ಸ್ಮಶಾಣ ಕಿರಣ್‌ಗೆ ಹೇಳಿದಾಗ ಆತ ಕರೆಸು ಸ್ವಲ್ಪ ವಿಚಾರಿಸೋಣ ಎಂದಿದ್ದ . ಹೀಗೆ ಮಹದೇವಪ್ರಸಾದ್‌ಗೆ ವರ್ಕ್ ಮಾಡಲು ಪ್ಲಾನ್ ಸಿದ್ಧವಾಗಿತ್ತು. ಅಷ್ಟೋತ್ತಿಗಾಗ್ಲೇ ಬಿಟ್ಟೋಗಿದ್ದ ಕ್ಲಾರಾ ಗಂಡ ಸಹ ಕ್ಲಾರಾ ಬಳಿ ಬಂದಿದ್ದ. ಪ್ಲಾನಿಂಗ್ ಪ್ರಕಾರ ಕ್ಲಾರಾ ನಿನ್ನನ್ನ ನೋಡ್ಬೇಕು ಬಾ ಎಂದು ತನ್ನ ಮನೆ ಬಳಿ ಕರೆಸಿಕೊಂಡಿದ್ದಳು. ಆಟೋದಲ್ಲಿ ಬಂದಿದ್ದ ಮಹದೇವಪ್ರಸಾದ್ ಆಕೆ ಅಳುತ್ತಿರುವುದನ್ನ ನೋಡಿ ಸಂತೈಸುತ್ತಿದ್ದ. ಈ ವೇಳೆ ಇಟಿಯೋಸ್ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಮಹದೇವಪ್ರಸಾದ್‌ನನ್ನು ಕಿಡ್ನ್ಯಾಪ್ ಮಾಡಿ ಮೊದಲು ಜಿಂಕೆ ಪಾರ್ಕ್ ಬಳಿ ಇರುವ ಸ್ಮಶಾಣಕ್ಕೆ ಕರೆ ತಂದಿದ್ದಾರೆ. ಅಲ್ಲಿ ಕ್ಲಾರಾ ಸೇರಿದಂತೆ ಹಲವರು, ಚಟ್ಟಕ್ಕೆ ಕಟ್ಟುವ ಬಿದಿರಿನ ಕೋಲಿನಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಚಾಮರಾಜಪೇಟೆ ರುದ್ರಪ್ಪ ಗಾರ್ಡನ್ ಬಳಿ ಗೋಡಾನ್ ಒಂದರಲ್ಲಿ ಒಂದಿಡಿ ದಿನ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಮಾರನೆ ದಿನ ಬಿಡದಿ ಬಳಿ ಬಿಟ್ಟು ಹೋಗಿದ್ದರು.

ಪ್ರೇಯಸಿ ಸೇರಿ ಕಿಡ್ನಾಪ್ ಮಾಡಿದ್ದವರು ಅಂದರ್
ಮಹದೇವ ಪ್ರಸಾದ್ ತನ್ನ ಮೇಲೆ ಹಲ್ಲೆಯಾಗಿದೆ ಎಂದು ನೇರವಾಗಿ ಕಮೀಷನರ್ ಕಚೇರಿಗೆ ಹೋಗಿದ್ದು, ಅಲ್ಲಿಂದ ಪ್ರಕರಣ ಸಿಸಿಬಿ ಅಧಿಕಾರಿಗಳ ಕೈ ಸೇರಿತ್ತು. ಚಾಮರಾಜಪೇಟೆಯಲ್ಲಿ ನಡೆದ ಘಟನೆ ಎಂದು ಚಾಮರಾಜಪೇಟೆಗೆ ಹೋದ ಬಳಿಕ ನಂತರ ಕಿಡ್ನ್ಯಾಪ್ ಆಗಿದ್ದು ಶ್ರೀನಗರದಲ್ಲಿ ಎಂಬ ಕಾರಣಕ್ಕೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯ್ತು. ತನಿಖೆ ನಡೆಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಮಹದೇವಪ್ರಸಾದ್‌ನ ಪ್ರೆಯಸಿ ಕ್ಲಾರಾ, ಆಕೆಯ ಗೆಳತಿ ಹೇಮಾವತಿ ಈಕೆಯ ಗಂಡ ಸಂತೋಷ್, ಸಂತೋಷ್ ನ ಬಾಸ್ ಕಿರಣ@ಸ್ಮಶಾಣ ಕಿರಣ, ಮನು ,ಲೋಕೇಶ್ , ಅಶ್ವತ್ ನಾರಾಯಣ ಹಾಗೂ ಕ್ಲಾರಾ ಗಂಡ ಮಧುನನ್ನ ಪೊಲೀಸರು ಬಂಧಿಸಿದ್ದಾರೆ. ಅದೇನೆ ಇರ್ಲಿ ಪ್ರಿಯಕರನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದವಳು ಬುದ್ದಿ ಕಲಿಸಲು ಹೋಗಿ ಜೈಲು ಪಾಲಾಗಿದ್ದಾಳೆ..
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications