ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್‌ನಲ್ಲಿ ಕೋಳಿ ಸಾಗಿಸಿದರೆ ಹಾಫ್‌ ಟಿಕೆಟ್‌ ತೆಗೆದುಕೊಳ್ಳಲೇ ಬೇಕು!

By Nayana
|
Google Oneindia Kannada News

Recommended Video

ಗೌರಿಬಿದನೂರು : ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ನಡೆದಿದೆ ವಿಚಿತ್ರ ಘಟನೆ | Oneindia Kannada

ಬೆಂಗಳೂರು, ಜುಲೈ 2: ಬಸ್‌ನಲ್ಲಿ ಪ್ರಯಾಣಿಕರು, ಲಗೇಜ್‌ಗಳಿಗೆ ಟಿಕೆಟ್‌ ನೀಡುವುದು ಸಾಮಾನ್ಯ ಆದರೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎರಡು ಕೋಳಿಗಳಿಗೂ ಟಿಕೆಟ್‌ ನೀಡಿರುವ ವಿಚಿತ್ರ ಘಟನೆ ಭಾನುವಾರ ಗೌರಿಬಿದನೂರಿನಲ್ಲಿ ನಡೆದಿದೆ.

ನಾಟಿ ಕೋಳಿ ಸಾಂಬಾರ್ ನಲ್ಲಿ ಮುದ್ದೆ ನುಂಗಿ ಗೆದ್ದ ಮೀಸೆ ಈರೇಗೌಡನಾಟಿ ಕೋಳಿ ಸಾಂಬಾರ್ ನಲ್ಲಿ ಮುದ್ದೆ ನುಂಗಿ ಗೆದ್ದ ಮೀಸೆ ಈರೇಗೌಡ

ಶ್ರೀನಿವಾಸ್‌ ಎಂಬುವರು ಎರಡು ಕೋಳಿಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದಾನೆ ಸಂದರ್ಭದಲ್ಲಿ, ಗೌರಿಬಿದನೂರಿನಿಂದ ಮುದ್ದಲೋಡು ಸ್ಟೇಜ್‌ಗೆ ಟಿಕೆಟ್‌ ಖರೀದಿಸಬೇಕಿದ್ದ ಪ್ರಯಾಣಿಕ ತನಗೆ ಒಂದು ಟಿಕೆಟ್‌ ಖರೀದಿಸಿದ್ದಾರೆ .ಕಂಡಕ್ಟರ್‌ ಎರಡು ಕೋಳಿಗಳಿಗೂ ಹಾಫ್‌ ಟಿಕೆಟ್‌ ತೆಗೆದುಕೊಳ್ಳುವಂತೆ ತಿಳಿಸಿದಾಗ ಪ್ರಯಾಣಿಕ ಬೆಚ್ಚಿ ಬಿದ್ದಿದ್ದಾರೆ. ಆದರೆ ಸಾಕಷ್ಟು ವಾದ ಮಾಡಿ, ಟಿಕೆಟ್‌ ಹಿಂದೆ ಕಂಡಕ್ಟರ್‌ನಿಂದ ಶರಾ ಬರೆಸಿಕೊಂಡು ಹಣ ಕೊಟ್ಟ. ಈ ಘಟನೆ ಈ ಪ್ರದೇಶದಲ್ಲಿ ಭಾರಿ ಸುದ್ದಿಯಾಗಿದೆ.

Half ticket in KSRTC buses for live stock

ಶ್ರೀನಿವಾಸ್​ ಅವರಿಗೆ 24 ರೂಪಾಯಿ ಮತ್ತು ಒಂದು ಕೋಳಿಗೆ 12 ರೂ.ನಂತೆ ಎರಡು ಕೋಳಿಗೆ 24ರೂಪಾಯಿ ಪಡೆದು ಟಿಕೆಟ್​ ನೀಡಿದ್ದಾರೆ. ಸಾಮಾನ್ಯವಾಗಿ ಬಸ್ಸಿನಲ್ಲಿ ಸರಕು ಸಾಗಣೆ ಮಾಡುತ್ತಿದ್ದರೆ ಅದಕ್ಕೆ ಲಗೇಜ್ ಚಾರ್ಜ್ ಎಂದು ಬೇರೆ ಟಿಕೆಟ್ ನೀಡುವ ನಿಯಮವಿದೆ. ಆದರೆ, ಕೋಳಿಗಳಿಗೆ ಮಕ್ಕಳ ಹೆಸರಿನಲ್ಲಿ ಅರ್ಧ ಟಿಕೆಟ್ ನೀಡಿರುವುದು ಇದ್ಯಾವ ಹೊಸ ಸಾರಿಗೆ ನಿಯಮ ಎಂದು ಪ್ರಯಾಣಿಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.

English summary
In an interesting revelation by KSRTC, that is collecting half ticket for live stocks for transportation. This information came out after a passenger traveled with live stock in Chikballapur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X