ಕಾಂಗ್ರೆಸ್ ಶಾಸಕರ ಬಂಡಾಯಕ್ಕೆ ಬಿಜೆಪಿ ಕುಮ್ಮಕ್ಕು: ವಿಶ್ವನಾಥ್ ವಾಗ್ದಾಳಿ

ಬೆಂಗಳೂರು, ಸೆಪ್ಟೆಂಬರ್ 18: ಕಾಂಗ್ರೆಸ್ ನಲ್ಲಿ ಶಾಸಕರು ಬಂಡಾಯ ಏಳಲು ಬಿಜೆಪಿಯ ಕುಮ್ಮಕ್ಕು ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಲ್ಲಿ ಉಂಟಾದ ಗೊಂದಲಕ್ಕೆ ಬಿಜೆಪಿ ಕುಮ್ಮಕ್ಕು ಕಾರಣ, ಇಂತಹ ಅನೈತಿಕ ರಾಜಕಾರಣವನ್ನು ಬಿಜೆಪಿ ಬಿಡಬೇಕು, ಇಲ್ಲದಿದ್ದರೆ ಜನತೆ ಪಾಠ ಕಲಿಸುತ್ತದೆ.

ಹಿಂದಿನ ಘಟನೆಗಳು ಪಾಠವಾಗಬೇಕು, ಜವಾಬ್ದಾರಿಯುತ ವಿಪಕ್ಷವಾಗಿ ಸರ್ಕಾರದಿಂದ ವೈಫಲ್ಯ ಎತ್ತಿ ತೋರಿಸಬೇಕು. ಅದನ್ನು ಬಿಟ್ಟು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ಕನಸು ಬೇಡ ಎಂದರು.

H.Vishwanath accuses Bjp for unrest in Congress party

ಬಿಜೆಪಿಗೆ ರಾಜಕಾರಣ ಗೊತ್ತೇ ವಿನಃ ಜನರ ಸಂಕಷ್ಟ ತಿಳಿದಿಲ್ಲ, ಬಿಜೆಪಿ ಸರ್ಕಾರ ಕೊಡಗಿನ ದುರಂತ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ, ಮಾನಸಿಕವಾಗಿ ಜನರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ, ಕೊಸಗಿನ ಬಗ್ಗೆ ಸರ್ಕಾರದ ಗಮನಸೆಳೆದಿಲ್ಲ, ಕೊಡಗು ಪುನರ್ ನಿರ್ಮಾಣಕ್ಕಾಗಿ ಪ್ರಾಧಿಕಾರ ಕಟ್ಟಬೇಕು. ಮೈಸೂರು, ಪ್ರವಾಸೋದ್ಯಮದ ಉಳಿವಿಗಾಗಿ ವಿಶೇಷ ಪ್ಯಾಕೇಜ್ ಗಳನ್ನು ಘೋಷಿಸಲು ಬಿಜೆಪಿ ಮುಂದಾಗಲಿ ಎಂದರು.

ಜನರಿಗಾಗಿ ಪೆಟ್ರೋಲ್, ಡೀಸೆಲ್ ತೈಲ ಬೆಲೆಯನ್ನು ಎರಡೂ ರೂ ಕಡಿಮೆ ಮಾಡಲಾಗಿದೆ, ರೈತರ 45 ಸಾವಿರ ಕೋಟಿ ರೂ ಸಾಲಮನ್ನಾ ಮಾಡಲಾಗಿದೆ ಇಷ್ಟಾದರೂ ಬಿಜೆಪಿಯು ಸಮ್ಮಿಶ್ರ ಸರ್ಕಾರ ಬೀಳುತ್ತಾ ಎಂದು ಕಾಯುತ್ತಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+