ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೂಟರ್‌ಗಳಾಗಲು ಗನ್‌ ಕದ್ದ ಎನ್‌ಸಿಸಿ ವಿದ್ಯಾರ್ಥಿಗಳು

By Ashwath
|
Google Oneindia Kannada News

ಬೆಂಗಳೂರು, ಜೂ.11: ಶಾರ್ಪ್‌ಶೂಟರ್‌ ಆಗಬೇಕೆಂಬ ಅತಿ ಆಸೆಯಿಂದಾಗಿ ನಾಲ್ವರು ಪಿಯುಸಿ ವಿದ್ಯಾರ್ಥಿ‌ಗಳು ಏರ್‌ಗನ್‌ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕಳ್ಳತನ ಮಾಡಿ ಪರಾರಿಯಾಗುತ್ತಿರುವ ವೇಳೆ ವಿದ್ಯಾರ್ಥಿಗಳು ಪೊಲೀಸರಿಗೆ ಸಿಕ್ಕಿಬಿದ್ದದ್ದು ವಿಶೇಷ. ಬೇಗೂರು ಬಳಿಯ ಅಕ್ಷಯ ನಗರದ ಭರತ್‌ಕುಮಾರ್‌, ವಿರಾಟ್‌ನಗರದ ವಿಜಯ್‌ ಕುಮಾರ್‌, ಕೋಣನಕುಂಟೆ ಕ್ರಾಸ್‌ ನಿವಾಸಿ ಮನೋಜ್‌ ಕುಮಾರ್‌ ಹಾಗೂ ಇಸ್ರೋ ಲೇಔಟ್‌ನ ಲಕ್ಷ್ಮೀಶ ಬಂಧಿತ ಎನ್‌ಸಿಸಿ ವಿದ್ಯಾರ್ಥಿ‌ಗಳು.

ಆರೋಪಿಗಳಿಂದ 8 ಏರ್‌ಗನ್‌, ಒಂದು ಲ್ಯಾಪ್‌ಟಾಪ್‌, ಮಿಲಿಟರಿಯಲ್ಲಿ ಬಳಸುವ 5 ವಿಶೇಷ ವಾಚ್‌ಗಳು ಸೇರಿದಂತೆ 3.67 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜೆ.ಪಿ.ನಗರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ಭರತ್‌, ವಿಜಯ್‌, ಮನೋಜ್‌ ಹಾಗೂ ಲಕ್ಷ್ಮೀಶ ಸ್ನೇಹಿತರಾಗಿದ್ದು, ಎನ್‌ಸಿಸಿ ಸೇರಿಕೊಂಡಿದ್ದರು. ಶ್ರೀಮಂತ ಕುಟುಂಬದ ಹಿನ್ನೆಯುಳ್ಳ ಇವರಿಗೆ ಸೇನಾಧಿಕಾರಿಗಳ ಪೋಷಾಕು ಧರಿಸಿ ಓಡಾಡುವ ಖಯಾಲಿಯಿತ್ತು. ಹಾಲಿವುಡ್‌‌ ಸಿನಿಮಾ ಹುಚ್ಚನ್ನು ಹೊಂದಿದ್ದ ಇವರು ಶಾರ್ಪ್‌ ಶೂಟರ್‌ಗಳಾಗಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದರು.

ಶಾರ್ಪ್‌ ಶೂಟರ್‌ಗಳಾಗಲು ಶೂಟಿಂಗ್‌ ತರಬೇತಿ ಸೇರಲು ನಾಲ್ವರೂ ಮುಂದಾಗಿದ್ದರು. ಆದರೆ ಇವರಲ್ಲಿ ಸ್ವಂತ ಬಂದೂಕು ಇಲ್ಲದ ಕಾರಣ ಶೂಟಿಂಗ್‌ ತರಬೇತಿ ಸಂಸ್ಥೆ ಪ್ರವೇಶ ನಿರಾಕರಿಸಿತ್ತು.

air gun ncc

ಶೂಟಿಂಗ್‌ ತರಬೇತಿಗೆ ಏರ್‌ಗನ್‌ ಅಗತ್ಯವಾದ್ದರಿಂದ ಏರ್‌ಗನ್‌ ಬೆಲೆಯನ್ನು ವಿವಿಧ ಅಂಗಡಿಗಳಲ್ಲಿ ವಿಚಾರಿಸಿದ್ದಾರೆ. ಒಂದು ಏರ್‌ಗನ್‌ಗೆ 18 ಸಾವಿರ ರೂಪಾಯಿ ಇದ್ದು ಅದನ್ನು ಖರೀದಿಸಲು ಅವರ ಬಳಿ ಹಣವಿಲ್ಲದ ಕಾರಣ ಏರ್‌ಗನ್‌ ಕಳ್ಳತನ ಮಾಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಎನ್‌‌ಸಿಸಿ ಸಮಾಗ್ರಿಗಳನ್ನು ಖರೀದಿಸಲು ಬರುತ್ತಿದ್ದ ಆರ್‌ .ಟಿ.ನಗರದ ಎಚ್‌ಎಂಟಿ ಲೇಔಟ್‌ನಲ್ಲಿರುವ ಮಿಲಿಟರಿ ಸಾಮಗ್ರಿಗಳನ್ನು ಮಾರಾಟ ಮಾಡುವ 'ಓಲಿನ್‌ ಪ್ಲಾನೆಟ್‌'ನಲ್ಲಿ ಏರ್‌ಗನ್‌ ಇರುವುದನ್ನು ತಿಳಿದು ಅಲ್ಲಿಂದಲೇ ಕಳ್ಳತನ ಮಾಡಲು ನಿರ್ಧರಿಸಿದ್ದರು.

ಅದರಂತೆ ಮುಂಜಾನೆ ಓಲಿನ್‌ ಪ್ಲಾನೆಟ್‌ ಮಳಿಗೆಯ ಬೀಗ ಮುರಿದು ಒಳ ನುಗ್ಗಿದ ವಿದ್ಯಾರ್ಥಿಗಳು, ಐದು ಬ್ಯಾಗ್‌ಗಳಲ್ಲಿ ವಸ್ತುಗಳನ್ನು ತುಂಬಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಜೆ.ಪಿ.ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

English summary
Shooting classes and Hollywood movies made them crazy about military equipment and guns. Sadly, it also drove the four PUC students to steal eight air rifles and other equipment from a store. They were arrested by JP Nagar police when they were fleeing with the loot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X