ಕಾರ್ನಾಡ್, ಬರಗೂರು ಸೇರಿ 17 ಸಾಹಿತಿ, ಚಿಂತಕರಿಗೆ ಬಿಗಿಭದ್ರತೆ
Recommended Video

ಬೆಂಗಳೂರು, ಸೆಪ್ಟೆಂಬರ್ 9: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ನಾಡಿನ 17 ಅಗ್ರ ಚಿಂತಕರು ಹಾಗೂ ಸಾಹಿತಿಗಳಿಗೆ ಭದ್ರತೆ ಒದಗಿಸಿದೆ.
ಇವರಲ್ಲಿ, ಕೇಂದ್ರ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್, ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಪಾಟೀಲ್ ಪುಟ್ಟಪ್ಪ, ಚೆನ್ನವೀರ ಕಣವಿ, ಕುಂ. ವೀರಭದ್ರಪ್ಪ ಅವರು ಭದ್ರತೆ ಪಡೆದ ಸಾಹಿತಿಗಳಲ್ಲಿ ಪ್ರಮುಖರಾಗಿದ್ದಾರೆ.

ಸರ್ಕಾರಿ ಭದ್ರತೆ ಪಡೆದ ಸಾಲಿನಲ್ಲಿ ಪ್ರೊ. ಭಗವಾನ್ ಅವರು ಪ್ರಮುಖರು. ಇದರ ಜತೆಗೆ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸುತ್ತಿರುವ ವಿನಯ್ ಕುಲಕರ್ಣಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮ್ ಧಾರ್, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಚಿವ ಎಂ.ಬಿ. ಪಾಟೀಲ್ ಅವರಿಗೂ ಭದ್ರತೆ ನೀಡಲಾಗಿದೆ.
ಸೆಪ್ಟೆಂಬರ್ 5ರ ರಾತ್ರಿ ಸುಮಾರು 8 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಗೌರಿ ಲಂಕೇಶ್ ಅವರ ನಿವಾಸದ ಮುಂದೆಯೇ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಹಿಂದುತ್ವ ಉಗ್ರವಾದಿಗಳ ಗುಂಪೇ ಈ ಕೃತ್ಯ ಮಾಡಿದ್ದಾರೆಂಬ ಗುಮಾನಿ ಹರಿದಾಡಿರುವ ಹಿನ್ನೆಲೆಯಲ್ಲಿ, ನಾಡಿನ ಪ್ರಮುಖ ಚಿಂತಕರು, ಸಾಹಿತಿಗಳಿಗೆ ಬಿಗಿ ಭದ್ರತೆ ವಹಿಸಲಾಗಿದೆ.












Click it and Unblock the Notifications