Bengaluru: ಅತಿಕ್ರಮಣ ಭೂಮಿ ಹಿಂಪಡೆಯಲು ತಹಶೀಲ್ದಾರರಿಗೆ ಮಾಸಿಕ ಟಾರ್ಗೆಟ್: ಸರ್ಕಾರ
ಬೆಂಗಳೂರು, ಜುಲೈ 13: ಸರ್ಕಾರಿ ಭೂಮಿ ಅತಿಕ್ರಮಣ ವಿಚಾರದಲ್ಲಿ ಇನ್ನು ಮುಂದೆ ಕಂದಾಯ ಇಲಾಖೆಯು ಪೊಲೀಸ್ ಇಲಾಖೆಯ ಮಾದರಿಯಲ್ಲಿ ಬೀಟ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಕಂದಾಯ ಅಧಿಕಾರಿಗಳಿಗೆ ಗುರಿ ನಿಗದಿ ಮಾಡಿದ್ದಾರೆ.
ಭೂಮಿ ಒತ್ತುವರಿದಾರರು ಮತ್ತು ಅಧಿಕಾರಶಾಹಿಗಳ ನಡುವಿನ ಸಂಬಂಧಕ್ಕೆ ಎಳ್ಳು ನೀರು ಬಿಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಭೂಮಿ ಅತಿಕ್ರಮಣವಾಗಿದ್ದಲ್ಲಿ ಅಂತಹ ಭೂಮಿಗಳನ್ನು ವಾಪಾಸ್ ಪಡೆಯಲು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ತಹಶೀಲ್ದಾರ್‌ಗಳಿಗೆ ಸರ್ಕಾರ ಮಾಸಿಕ ಗುರಿ ನಿಗದಿ ಮಾಡಿದೆ. ಈ ತಹಶೀಲ್ದಾರರು ಮುಂದಿನ ದಿನಗಳಲ್ಲಿ ಈ ಎರಡು ಜಿಲ್ಲೆಗಳಲ್ಲಿ ಒತ್ತುವರಿ ಭೂಮಿಯನ್ನು ಮರಳಿ ಪಡೆಯಲಿದ್ದಾರೆ.

ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಒತ್ತುವರಿ ಸ್ಥಳಗಳನ್ನು ಗುರುತಿಸಬೇಕು. ತದನಂತರ ಅದನ್ನು ತೆರವು ಮಾಡಿ ಸರ್ಕಾರಕ್ಕೆ ಮರು ಪಡೆಯಬೇಕು. ಹೀಗಾಗಿ ಮಾಸಿಕ ಇಂತಿಷ್ಟು ಅತಿಕ್ರಮಣ ತೆರೆವು ಮಾಡುವ ಬಗ್ಗೆ (ಟಾರ್ಗೆಟ್) ಗುರಿ ನಿಗದಿ ಮಾಡಲಾಗಿರುತ್ತದೆ. ತಹಶೀಲ್ದಾರರು ಪೊಲೀಸ್ ಇಲಾಖೆ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ.
ಎರಡು ಜಿಲ್ಲೆಗಳಲ್ಲಿ ಒತ್ತುವರಿ ಆಗಿದ್ದಿಷ್ಟು
ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 38,947 ಎಕರೆ ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3,898 ಎಕರೆ ಪ್ರದೇಶದ ಸರ್ಕಾರಿ ಭೂಮಿ ಒತ್ತುವರಿ ಆಗಿದ್ದರ ಕುರಿತು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಉತ್ತರಿಸಿದ ಅವರು, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಎಂಎಲ್‌ಸಿ ವೈಎ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಬೈರೇಗೌಡ, ಸರ್ಕಾರಿ ಭೂಮಿಯನ್ನು ಸಂರಕ್ಷಿಸಲು ಕೇವಲ ತಹಶೀಲ್ದಾರ್ ಜೊತೆಗೆ ಪಂಚಾಯತಿ, ಕಂದಾಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳನ್ನು ಸಹ ಹೊಣೆಗಾರರನ್ನಾಗಿ ಮಾಡಿ ಅವರಿಗೂ ಜವಾಬ್ದಾರಿ ನೀಡುವ ಚಿಂತನೆಯಲ್ಲಿ ಸರ್ಕಾರ ಇದೆ.
ಹಾಲಿ
ಕಾನೂನು ಸರಿಯಾಗಿ ಅನುಷ್ಠಾನವಾಗಬೇಕು
ಭೂ ಒತ್ತುವರಿ ವಿರುದ್ಧವಾಗಿ ಅಸ್ತಿತ್ವದಲ್ಲಿ ಇರುವ ಕಾನೂನುಗಳನ್ನೇ ಸಮರ್ಪಕವಾಗಿ ಜಾರಿಗೆ ತಂದರೆ ಸಾಕಷ್ಟು ಬದಲಾವಣೆ ತರಬಹುದಾಗಿದೆ. ತಹಶೀಲ್ದಾರ್‌ಗಳಿಗೆ ಮಾಸಿಕ ಒತ್ತುವರಿ ತೆರವು ಗುರಿ ನಿಗದಿಪಡಿಸುವ ಮೂಲಕ ಮತ್ತು ಬೆಂಗಳೂರಿನಾದ್ಯಂತ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಸರ್ಕಾರ ಎಲ್ಲ ಭೂ ಅತಿಕ್ರಮಣಗಳನ್ನು ಮರಳಿ ಪಡೆಯಲಿದ್ದೇವೆ ಎಂದು ಸಚಿವರು ಹೇಳಿದರು.
ಕೆಲವೊಮ್ಮೆ ಅಧಿಕಾರಿಗಳು (ತಹಶೀಲ್ದಾರ್‌ಗಳು) ಬೆಂಗಳೂರಿನಲ್ಲಿ ಸರ್ಕಾರಿ ಭೂಮಿಯನ್ನು ರಕ್ಷಿಸಲು ಅಥವಾ ಜಮೀನು ಶಾರ್ಕ್‌ಗಳಿಗೆ ಮಾರಾಟ ಮಾಡಲು ಪೋಸ್ಟಿಂಗ್‌ಗಳನ್ನು ಹುಡುಕುತ್ತಾರೆಯೇ ಎಂದು ನಾವು ಆಶ್ಚರ್ಯ ಪಡುತ್ತೇವೆ.
ಈ ಒತ್ತುವರಿ ಸಮಸ್ಯೆಗಳ ಕುರಿತು ಕಾನೂನು ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸುವಾಗ, ಅಧಿಕಾರಿಗಳು ಶಾಮೀಲು ಇದರಲ್ಲಿ ಪ್ರಮುಖ ಸಮಸ್ಯೆಯಾಗಿದೆ ಎಂದರು.
ಹೀಗಾಗಿ ಭ್ರಷ್ಟ ಅಧಿಕಾರಿಗಳನ್ನು ಭೂಮಿ ಅತಿಕ್ರಮಣದಾರರ ಮಧ್ಯೆದ ಸಂಪರ್ಕ ಕಡಿತಗೊಲಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಸುಧಾರಣೆಗೆ ಪ್ರಯತ್ನಿಸುತ್ತಿದ್ದೇವೆ. ಬೆಂಗಳೂರು ನಗರದಲ್ಲಿ 14,660 ಪ್ರಕರಣಗಳು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 1,292 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒತ್ತುವರಿ ತೆರವು ಮಾಡಿ ಸರ್ಕಾರಕ್ಕೆ ಹಿಂಪಡೆಯುವ ಕೆಲಸ ವಾಗುತ್ತಿದೆ ಎಂದು ತಿಳಿಸಿದರು.
ದಾಖಲೆ ಪರಿಷ್ಕರಿಸಿ ಜಮೀನು ಸ್ವಾಧೀನ
ಪೊಲೀಸ್ ಇಲಾಖೆಯಂತೆ ಕಂದಾಯ ಇಲಾಖೆ ಅಧಿಕಾರಿಗಳು ಬೀಟ್ ವ್ಯವಸ್ಥೆ ರೂಪದಲ್ಲಿ ಸರ್ಕಾರಿ ಭೂಮಿಯನ್ನು ಪತ್ತೆ ಹಚ್ಚಿ ಕಂದಾಯ ದಾಖಲೆಗಳನ್ನು ಪರಿಷ್ಕರಿಸಿ ಜಮೀನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ.
ಇನ್ನೂ ಕಲಾಪ ವೇಳೆ ಬೆಂಗಳೂರಿನಲ್ಲಿ ತಹಶೀಲ್ದಾರ್ ಮೇಲೆ ನಡೆದ ಲೋಕಾಯುಕ್ತ ದಾಳಿ ಬಗ್ಗೆ ಮಾತನಾಡಿದ ಎಂಎಲ್‌ಸಿ ನಾರಾಯಣಸ್ವಾಮಿ ಅವರು, 'ಯಲಹಂಕ, ಕೆಆರ್ ಪುರಂ ಮತ್ತು ಬೆಂಗಳೂರು ಉತ್ತರ'ಕ್ಕೆ ಅಧಿಕಾರಿಗಳು ಬರುವುದು ಸರ್ಕಾರಿ ಭೂಮಿಯನ್ನು ಶಾರ್ಕ್‌ಗಳಿಗೆ ಮಾರಾಟ ಮಾಡಲು ಎಂದು ಅವರು ಆರೋಪಿಸಿದರು.
ಇನ್ನು ರಾಜ್ಯದಲ್ಲಿ ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸುವ ಯಾವುದೇ ಪ್ರಸ್ತಾವನೆಯು ಸರ್ಕಾರದ ಮುಂದೆ ಇಲ್ಲ.ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸುವ ಯಾವುದೇ ಪ್ರಸ್ತಾಪವನೆ ಹೊಂದಿಲ್ಲ, ಆದರೆ ಶೀಘ್ರದಲ್ಲೇ ಆಸ್ತಿಗಳ ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಿಸುತ್ತೇವೆ. ಸರ್ಕಾರ ಕೊನೆಯ ಬಾರಿಗೆ ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಿಸಿ ನಾಲ್ಕೂವರೆ ವರ್ಷಗಳು ಕಳೆದಿವೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.












Click it and Unblock the Notifications