ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 31 ಫೀವರ್ ಕ್ಲಿನಿಕ್‍ಗಳು ಆರಂಭ: ಸುಧಾಕರ್

|
Google Oneindia Kannada News

ಬೆಂಗಳೂರು, ಮಾರ್ಚ್ 29: ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಮೂವತ್ತೊಂದು ಫೀವರ್ ಕ್ಲೀನಿಕ್ ( ಜ್ವರ ಚಿಕಿತ್ಸಾಲಯ ) ಗಳು ಕಾರ್ಯಾರಂಭ ಮಾಡಿವೆ.

ಕೋವಿಡ್19 ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತುಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರೊಂದಿಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿ, ಮಾರ್ಚ್ 23ರಂದು ತೆಗೆದುಕೊಂಡ ನಿರ್ಣಯದಂತೆ ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗಿದೆ.

ಕೊರೊನಾ ಭೀತಿ: ಅಪಾರ್ಟ್ಮೆಂಟ್, ಬಡಾವಣೆಗಳಿಗೆ ಮಹತ್ವದ ಸೂಚನೆಕೊರೊನಾ ಭೀತಿ: ಅಪಾರ್ಟ್ಮೆಂಟ್, ಬಡಾವಣೆಗಳಿಗೆ ಮಹತ್ವದ ಸೂಚನೆ

ಕಳೆದ ಎರಡು ತಿಂಗಳಲ್ಲಿ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸಿ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರು ಈ ಚಿಕಿತ್ಸಾಲಯಗಳಿಗೆ ತೆರಳಿ ಆರೋಗ್ಯ ತಪಾಸಣೆಗೆ ಒಳಗಾಗಬಹುದಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಇಪ್ಪತ್ತೈದು ಸಾವಿರದಿಂದ ಮೂವತ್ತು ಸಾವಿರ ಜನರನ್ನು ಈ ಚಿಕಿತ್ಸಾಲಯಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ, ಕೋವಿಡ್19 ನಿರ್ವಹಣಾ ಉಸ್ತುವಾರಿ ಡಾ. ಸುಧಾಕರ್ ಹೇಳಿದರು .

Govt has started 31 Fever Clinics across Bengaluru: Dr Sudhakar

ಜನವರಿ 21 ರಿಂದ ಈವರೆಗೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಮಂದಿ ಬೆಂಗಳೂರಿಗೆ ವಿದೇಶಗಳಿಂದ ಆಗಮಿಸಿದ್ದು ಅವರೆಲ್ಲರ ಪ್ರವಾಸಿ ಚರಿತ್ರೆ ಸರ್ಕಾರದಲ್ಲಿ ಲಭ್ಯವಿದೆ. ಆದರೆ, ಅವರಲ್ಲಿ ಕೇವಲ 1500 ಮಂದಿಯನ್ನು ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಇದೀಗ ವಿದೇಶಗಳಿಂದ ಆಗಮಿಸಿರುವ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಮೂಡಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಆತಂಕ ನಿವಾರಣೆಗೆ ಜ್ವರಕ್ಲಿನಿಕ್ ಮೂಲಕ ಸರ್ಕಾರ ಮುಂದಾಗಿದೆ.

Govt has started 31 Fever Clinics across Bengaluru: Dr Sudhakar

ಕೊರೊನಾ ಸೋಂಕಿತರ ಟ್ರ್ಯಾಕ್ ಮಾಡಲು Corona Watch Appಕೊರೊನಾ ಸೋಂಕಿತರ ಟ್ರ್ಯಾಕ್ ಮಾಡಲು Corona Watch App

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯ ಸರ್ಕಾರವು ತ್ರೀ-ಟಿ (ಟ್ರೇಸ್-ಟೆಸ್ಟ್ ಅಂಡ್ ಟ್ರೀಟ್‍ಮೆಂಟ್) ಸೂತ್ರವನ್ನು ಅಳವಡಿಸಿಕೊಂಡಿದೆ. ಇದರನ್ವಯ ರೋಗ ಪತ್ತೆ, ವೈರಾಣು ಪರೀಕ್ಷೆ ಹಾಗೂ ಸೋಂಕು ದೃಢಪಟ್ಟಲ್ಲಿ ಚಿಕಿತ್ಸೆ ನೀಡಲು ಸರ್ಕಾರ ಕೆಲಸ ಮಾಡುತ್ತಿದೆ. ಇದೆ ಹಿನ್ನೆಲೆಯಲ್ಲಿ ಜ್ವರ ಕ್ಲಿನಿಕ್ ಆರಂಭಿಸಲಾಗಿದೆ ಎಂದರು.

English summary
Karnataka government and BBMP has set up Fever Clinics across 31 areas in Bengaluru. Those with travel history can report to these clinics said Medical education minister Dr Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X