• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ರಾಜಕಾರಣದ 'ಕುಬೇರ' ಪ್ರಿಯಾಕೃಷ್ಣ ಆಸ್ತಿ-ಸಾಲದ ಪಟ್ಟಿ

|

ಬೆಂಗಳೂರು, ಏಪ್ರಿಲ್ 21: ಬೆಂಗಳೂರು ವ್ಯಾಪ್ತಿಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಪ್ರಿಯಾಕೃಷ್ಣ ತಮ್ಮ ಅಫಿಡವಿಟ್ ಮೂಲಕ ಈ ಸಂದರ್ಭದಲ್ಲಿ ಗಮನ ಸೆಳೆದಿದ್ದಾರೆ. ಮೂವತ್ನಾಲ್ಕು ಪುಟಗಳ ಅಫಿಡವಿಟ್ ಸಲ್ಲಿಸಿರುವ ಮೂವತ್ನಾಲ್ಕು ವರ್ಷದ ಅವಿವಾಹಿತ ಪ್ರಿಯಾಕೃಷ್ಣ ಎಲ್ ಎಲ್ ಬಿ ಪದವೀಧರ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕಲಾ ವಿಷಯದಲ್ಲಿ ಎಂ.ಎ., ಮಾಡಿದ್ದಾರೆ. ತಮ್ಮ ಇ ಮೇಲ್ ಖಾತೆ, ಫೇಸ್ ಬುಕ್ ಪುಟ ಹಾಗೂ ಟ್ವಿಟ್ಟರ್ ಖಾತೆಯ ವಿವರಗಳನ್ನು ಸಹ ತಿಳಿಸಿದ್ದಾರೆ. ಗಾಲ್ಫ್ ಆಟಗಾರರಾದ ಪ್ರಿಯಾಕೃಷ್ಣ, 2001ರಲ್ಲಿ ಪಂಜಾಬ್ ನಲ್ಲಿ ನಡೆದ ನ್ಯಾಷನಲ್ ಗೇಮ್ಸ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಶಾಸಕ ಪ್ರಿಯಕೃಷ್ಣ ಆಸ್ತಿ ಅಕ್ರಮವಲ್ಲ, ಸಕ್ರಮ

ಪ್ರಿಯಾಕೃಷ್ಣ ಅವರದೇ ವೆಬ್ ಸೈಟ್ ಸಹ ಇದೆ. 2013ರಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ನಲವತ್ತು ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆಗ ಕೂಡ ಪ್ರಿಯಾಕೃಷ್ಣ ಸಲ್ಲಿಸಿದ್ದ ಅಫಿಡವಿಟ್ ಭಾರೀ ಚರ್ಚೆಗೆ ಒಳಗಾಗಿತ್ತು. ಆ ಸಲ ಅವರು 900 ಕೋಟಿ ರುಪಾಯಿ ಆಸ್ತಿ ಘೋಷಣೆ ಮಾಡಿದ್ದರು.

ಅವರು ಈ ಬಾರಿ ಅಂದರೆ, 2018ನೇ ಸಾಲಿನ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್ ನ ಮುಖ್ಯಾಂಶಗಳನ್ನು ಮಾತ್ರ ನೀಡಲಾಗುತ್ತಿದೆ.

17 ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳಿವೆ

17 ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳಿವೆ

ಪ್ರಿಯಾಕೃಷ್ಣ ಕೈಯಲ್ಲಿರುವ ನಗದು 1,76,186- 17 ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳಿವೆ.

3 ನಿಶ್ಚಿತ ಠೇವಣಿ ಇದೆ

1 ಲಾಕರ್ ಡೆಪಾಸಿಟ್ ಇದೆ

ಅಭಿಮಾನಿ ಪಬ್ಲಿಕೇಷನ್ ಗೆ 27,05,800 ರುಪಾಯಿ ಸಾಲ ನೀಡಿದ್ದಾರೆ.

809 ಕೋಟಿ ರುಪಾಯಿ ವ್ಯವಹಾರದ ಆಸ್ತಿ

809 ಕೋಟಿ ರುಪಾಯಿ ವ್ಯವಹಾರದ ಆಸ್ತಿ

ಪಜೆರೋ ಸ್ಪೋರ್ಟ್ಸ್, ಔಡಿ A8, ಬೊಲೆರೋ, ಷೆವರ್ಲೆ, ಮಾಂಟೆಗೋ, ಕ್ವಾಲೀಸ್, ಬೆಮಲ್ ಡೋಜರ್, ಕ್ಸೈಲೋ, ಬೆಂಜ್ ಕಾರು, ಟಿಪ್ಪರ್ (ವಾಟರ್ ಟ್ಯಾಂಕರ್) ಸೇರಿದಂತೆ ವಿವಿಧ ವಾಹನಗಳಿವೆ.

39 ಲಕ್ಷದಷ್ಟು ಆಭರಣಗಳಿವೆ. ಜೆರಾಕ್ಸ್ ಮಷೀನ್, ವೆಬ್ ಸೈಟ್ ಇವೆ.

ಇನ್ನು ವ್ಯವಹಾರದ ಆಸ್ತಿ ಎಂದು 808,93,02,162 ರುಪಾಯಿ ಇದೆ (ಎಂಟುನೂರಾ ಎಂಟು ಕೋಟಿ ತೊಂಬತ್ಮೂರು ಲಕ್ಷ ಎರಡು ಸಾವಿರದ ನೂರಾ ಅರವತ್ತೆರಡು).

ಒಟ್ಟು ಆಸ್ತಿ ಎಂದು ಕೊಟ್ಟಿರುವ ಲೆಕ್ಕ 860,43,87,250 ರುಪಾಯಿ (ಎಂಟು ನೂರಾ ಅರವತ್ತು ಕೋಟಿ ನಲವತ್ಮೂರು ಲಕ್ಷ ಎಂಬತ್ತೇಳು ಸಾವಿರದ ಇನ್ನೂರೈವತ್ತು).

ಸ್ಥಿರಾಸ್ತಿಗಳ ಮೌಲ್ಯ 160 ಕೋಟಿ ರುಪಾಯಿ

ಸ್ಥಿರಾಸ್ತಿಗಳ ಮೌಲ್ಯ 160 ಕೋಟಿ ರುಪಾಯಿ

ಸ್ಥಿರಾಸ್ತಿಗಳದೊಂದು ಪಟ್ಟಿ ನೀಡಿದ್ದು, ಅದು ವಿಪರೀತ ಉದ್ದ ಇರುವುದರಿಂದ ಮಾಹಿತಿ ಹಾಕುತ್ತಿಲ್ಲ. ಅವುಗಳೆಲ್ಲದರ ಒಟ್ಟು ಮೌಲ್ಯ 160,10,00,000 (ನೂರಾ ಅರವತ್ತು ಕೋಟಿ ಹತ್ತು ಲಕ್ಷ ರುಪಾಯಿ).

ಈಗ ಸಾಲದ ಮೊತ್ತ ಎಷ್ಟಿದೆ ಅಂದರೆ 802,74,82,214 ರುಪಾಯಿ (ಎಂಟು ನೂರಾ ಎರಡು ಕೋಟಿ ಎಪ್ಪತ್ನಾಲ್ಕು ಲಕ್ಷ ಎಂಬತ್ತೆರಡು ಸಾವಿರದ ಇನ್ನೂರಾ ಹದಿನಾಲ್ಕು ರುಪಾಯಿ).

2016-17ನೇ ಸಾಲಿಗೆ ಪ್ರಿಯಾಕೃಷ್ಣ ಅವರ ಆದಾಯ 88,23,305 ರುಪಾಯಿ ತೋರಿಸಲಾಗಿದೆ.

ವಿಜಯನಗರ ಕ್ಷೇತ್ರದಿಂದ ತಂದೆ ಕಣದಲ್ಲಿ

ವಿಜಯನಗರ ಕ್ಷೇತ್ರದಿಂದ ತಂದೆ ಕಣದಲ್ಲಿ

ಪ್ರಿಯಾಕೃಷ್ಣ ಅವರ ತಂದೆ ಎಂ.ಕೃಷ್ಣಪ್ಪ ಅವರು ಸಚಿವರು. ಅವರು ಕೂಡ ಉದ್ಯಮಿಗಳು. ಈ ಬಾರಿ ಕಾಂಗ್ರೆಸ್ ನ ಟಿಕೆಟ್ ನಿಂದ ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್ ಸರಕಾರದಲ್ಲಿ ವಸತಿ ಸಚಿವರಾಗಿ ಎಂ.ಕೃಷ್ಣಪ್ಪ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Karnataka assembly elections 2018: Bengaluru Govindarajanagar constituency Congress candidate Priyakrishna affidavit is very interesting. His assets and liabilities, education qualification details are here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more