ಪರಿಷತ್ ನಾಮನಿರ್ದೇಶನಕ್ಕೆ ಗೌರ್ನರ್ ಗರಂ

ಬೆಂಗಳೂರು, ಜೂ. 17 : ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ಹೊಸ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸರ್ಕಾರ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಿಯನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ಹೊಸ ಸದಸ್ಯರನ್ನು ಅಂತಿಮಗೊಳಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ರಾಜ್ಯಪಾಲರಿಗೆ ಪಟ್ಟಿಯನ್ನು ಸಲ್ಲಿಸಿದ್ದರು. ಆದರೆ, ರಾಜ್ಯಪಾಲರು ಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಟ್ಟಿಯನ್ನು ಮರು ಪರಿಶೀಲಿಸಿ, ಇಲ್ಲವೇ ನಾಮ ನಿರ್ದೇಶಿತರ ಆಯ್ಕೆಗೆ ತೆಗೆದುಕೊಂಡ ಮಾನದಂಡಗಳ ಬಗ್ಗೆ ಹೆಚ್ಚಿನ ವಿವರಣೆಯನ್ನು ಕೇಳಿದ್ದಾರೆ.

H.R.Bhardwaj

ರಾಜ್ಯಪಾಲರ ಕೈ ಸೇರಿದ ಪಟ್ಟಿಯಲ್ಲಿ ವಿ.ಎಸ್.ಉಗ್ರಪ್ಪ, ಅಬ್ದುಲ್ ಜಬ್ಬಾರ್, ಇಕ್ಬಾಲ್ ಅಹಮ್ಮದ್ ಸರಡಗಿ, ಇಂಟೆಕ್‌ ಮುಖಂಡ ಶಾಂತಕುಮಾರ್ ಮತ್ತು ಚಿತ್ರನಟಿ ಡಾ.ಜಯಮಾಲಾ ಅವರ ಹೆಸರುಗಳಿದ್ದವು. ಇವುಗಳಲ್ಲಿ ಜಯಮಾಲಾ ಅವರ ಹೆಸರು ಹೊರತುಪಡಿಸಿ ಉಳಿದ ನಾಮನಿರ್ದೇಶಗಳ ಬಗ್ಗೆ ರಾಜ್ಯಪಾಲರು ಅಸಮಧಾನಗೊಂಡಿದ್ದಾರೆ. [ಮುಖ್ಯಮಂತ್ರಿಗಳು ಸಲ್ಲಿಸಿದ ಅಂತಿಮ ಪಟ್ಟಿ]

ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಗುತ್ತದೆ. ಆದರೆ, ಜಯಮಾಲಾ ಹೊರತು ಪಡಿಸಿ ಉಳಿದವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದು, ಅವರನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂಬ ಕುರಿತು ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ.

ಒತ್ತಡವಿತ್ತು : ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಲಿಂಗಾಯತರಿಗೆ ಅವಕಾಶ ನೀಡಿಲ್ಲ. ಆದ್ದರಿಂದ ನಾಮಕರಣದಲ್ಲಿ ಅವಕಾಶ ನೀಡಬೇಕು ಎಂದು ಲಿಂಗಾಯತ ಮುಖಂ­ಡರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದರು. ಹಲವು ಕಾಂಗ್ರೆಸ್ ಮುಖಂಡರು ತಮಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದರು. ಈ ಬೆಳವಣಿಗೆಗಳ ನಡುವೆಯೇ ಸಿಎಂ ಸೋಮವಾರ ಸಂಜೆ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+