ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒತ್ತುವರಿ ಕಾರ್ಯಾಚರಣೆ: ಬಿಬಿಎಂಪಿ ಆರಂಭದ ಶೂರತ್ವ, ನಂತರ..?

|
Google Oneindia Kannada News

ಭಾರೀ ಮಳೆಯಿಂದಾದ ಅನಾಹುತ, ಇದರಿಂದ ರಾಷ್ಟ್ರ ಮಟ್ಟದಲ್ಲಿ ಸಿಲಿಕಾನ್ ಸಿಟಿಯ ಹೋದ ಮರ್ಯಾದೆ, ಇದಕ್ಕೆಲ್ಲಾ ಕಾರಣ ಒತ್ತುವರಿ ಎನ್ನುವುದು ಜಗಜ್ಜಾಹೀರಾದ ಮೇಲೆ ಸರಕಾರ ಒತ್ತುವರಿ ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು.

ಸರಕಾರ ಮತ್ತು ಬಿಬಿಎಂಪಿಯ ಈ ಕಾರ್ಯಾಚರಣೆ ಒಂದು ಐವಾಷ್ ಎನ್ನುವುದು ಜನಸಾಮಾನ್ಯರಲ್ಲಿ ಕೇಳಿ ಬರುತ್ತಿತ್ತು. ಉಳ್ಳವರ ಸ್ವತ್ತಿಗೆ ಬಿಬಿಎಂಪಿ ಕೈಹಾಕುವ ಶೂರತ್ವನ್ನು ತೋರುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಅದೀಗ ನಿಜವಾಗಿದೆ..

ಹೈಕೋರ್ಟ್: ಬಿಬಿಎಂಪಿ ಚುನಾವಣೆಗೆ ಇದ್ದ ಒಂದು ಕಾನೂನು ತೊಡಕು ನಿವಾರಣೆಹೈಕೋರ್ಟ್: ಬಿಬಿಎಂಪಿ ಚುನಾವಣೆಗೆ ಇದ್ದ ಒಂದು ಕಾನೂನು ತೊಡಕು ನಿವಾರಣೆ

ಆರಂಭದಲ್ಲಿ ಹಲವು ಬಲಾಢ್ಯರ ಆಸ್ತಿಯನ್ನು ಖಾಲಿ ಮಾಡಲೇನೋ ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು. ಅದರಲ್ಲಿ ಬೆಳ್ಳಂದರೂ ಇಕೋಸ್ಪೇಸಿನ ಪ್ರತಿಷ್ಠಿತ ಕಂಪೆನಿಗಳು, ನಲಪಾಡ್ ಪ್ರಾಪರ್ಟಿಗಳೂ ಸೇರಿದ್ದವು.

ಕೆಲವರು ರಿಯಲ್ ಎಸ್ಟೇಟ್ ಕುಳಗಳು ಕೋರ್ಟಿನಿಂದ ಸ್ಟೇ ತಂದಿದ್ದವು, ಆದರೆ, ಬರಬರುತ್ತಾ, ಸರಕಾರ ಆರಂಭದಲ್ಲಿ ತೋರಿದ ಇಚ್ಚಾಶಕ್ತಿಯು ರಾಜಕೀಯ ಹಿತಾಶಕ್ತಿಯ ಮುಂದೆ ಮಂಡಿವೂರುವಂತೆ ಮಾಡಿದೆ.

ಬಿಬಿಎಂಪಿ: ಒತ್ತುವರಿ ತೆರವು, ಸರ್ವೇ ಕಾರ್ಯ ಮುಂದುವರಿಕೆಬಿಬಿಎಂಪಿ: ಒತ್ತುವರಿ ತೆರವು, ಸರ್ವೇ ಕಾರ್ಯ ಮುಂದುವರಿಕೆ

 ಕಂದಾಯ ಸಚಿವ ಆರ್.ಅಶೋಕ್ ಸದನದಲ್ಲಿ ಹೇಳಿಕೆ

ಕಂದಾಯ ಸಚಿವ ಆರ್.ಅಶೋಕ್ ಸದನದಲ್ಲಿ ಹೇಳಿಕೆ

ಬಿಬಿಎಂಪಿ ಕಾರ್ಯಾಚರಣೆ ಆರಂಭಿಸುವ ಬೊಮ್ಮಾಯಿ ಸರಕಾರಕ್ಕೆ ಮುಖ್ಯವಾಗಿತ್ತು, ಕಾರಣ ಆರಂಭವಾಗಿದ್ದ ವಿಧಾನಮಂಡಲದ ಅಧಿವೇಶನ. ವಿರೋಧ ಪಕ್ಷಗಳ ಪ್ರತಿರೋಧವನ್ನು ಎದುರಿಸಲು ಸರಕಾರ ಈ ಕೆಲಸಕ್ಕೆ ಮುಂದಾಗಿತ್ತು. ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವುದಿಲ್ಲ ಎನ್ನುವ ಡೈಲಾಗು ಸದನದಲ್ಲಿ ಘರ್ಜಿಸಿತು. "ಮಧ್ಯಮ ವರ್ಗದವರ ಒತ್ತುವರಿ ಜಾಗ ಖಾಲಿ ಮಾಡಿಸಲು ಹೊರಟರೆ ಮಾಧ್ಯಮದವರ ಕಾಟ, ಪ್ರಭಾವಿಗಳ ಆಸ್ತಿಯನ್ನು ಮುಟ್ಟಲು ಹೋದರೆ ಕಾಂಗ್ರೆಸ್ಸಿನ ಕಾಟ"ಎಂದು ಕಂದಾಯ ಸಚಿವ ಆರ್.ಅಶೋಕ್ ಸದನದಲ್ಲಿ ಹೇಳಿದ್ದರು.

 ಬಿಬಿಎಂಪಿ ಕಾರ್ಯಾಚರಣೆ ಮುಂದುವರಿದಿದೆ

ಬಿಬಿಎಂಪಿ ಕಾರ್ಯಾಚರಣೆ ಮುಂದುವರಿದಿದೆ

ದಾಸರಹಳ್ಳಿ, ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲಿ ಬಿಬಿಎಂಪಿ ಕಾರ್ಯಾಚರಣೆ ಮುಂದುವರಿದಿದೆ. ಕೋರ್ಟ್ ಸ್ಟೇ ಇಲ್ಲದ ಒತ್ತುವರಿ ಜಾಗವನ್ನು ಜೆಸಿಬಿ ನೆಲಸಮ ಮಾಡುತ್ತಿದೆ. ಸ್ಯಾಟಿಲೈಟ್ ಟೌನ್ ಭಾಗದ ಒತ್ತುವರಿ ಜಾಗವನ್ನು ಶುಕ್ರವಾರ (ಸೆ 16) ತೆರವು ಮಾಡಲಾಗಿದೆ. ಯಲಹಂಕ ಭಾಗದಲ್ಲಿ ಒತ್ತುವರಿ ಕಾರ್ಯಾಚರಣೆ ಆಮೆಗತಿಯಿಂದ ಸಾಗಿದೆ, ಜೊತೆಗೆ ಬಿಬಿಎಂಪಿ ಕಾರ್ಯಾಚರಣೆ ಮಾನದಂಡಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

 ಪ್ರತಿಷ್ಠಿತ ಬಿಲ್ಡರ್ ಗಳ ವಿಲ್ಲಾ, ಅಪಾರ್ಟ್ಮೆಂಟ್

ಪ್ರತಿಷ್ಠಿತ ಬಿಲ್ಡರ್ ಗಳ ವಿಲ್ಲಾ, ಅಪಾರ್ಟ್ಮೆಂಟ್

ಕೆಲವೊಂದು ಆರೋಪದ ಪ್ರಕಾರ ಬಿಬಿಎಂಪಿ ಒತ್ತುವರಿ ಸರ್ವೇ ಮಾಡಿದ್ದರಲ್ಲಿ ಹಲವು ಪ್ರತಿಷ್ಠಿತ ಬಿಲ್ಡರ್ ಗಳ ವಿಲ್ಲಾ, ಅಪಾರ್ಟ್ಮೆಂಟುಗಳಿದ್ದವು. ಆದರೆ, ಸರ್ವೇ ಮಾಡಿದ್ದ ಅಧಿಕಾರಿಗಳೇ ಅಂತಹ ಬಿಲ್ಡರ್ ಗಳಿಂದ ಈಗ ಒತ್ತುವರಿಯಾಗಿಲ್ಲ ಎಂದು ಉಲ್ಟಾ ಹೊಡೆಯುತ್ತಿದ್ದಾರೆ. ಇಲ್ಲಿ ಅಧಿಕಾರಿಗಳು ಲಂಚ ಪಡೆದುಕೊಂಡಿದ್ದಾರೆಯೇ ಎನ್ನುವ ಗಂಭೀರ ಪ್ರಶ್ನೆ ಎದುರಾಗಿದೆ.

 ಬಿಬಿಎಂಪಿ ವ್ಯಾಪ್ತಿಯ ರಾಜಾಕಾಲುವೆ ಒತ್ತುವರಿ

ಬಿಬಿಎಂಪಿ ವ್ಯಾಪ್ತಿಯ ರಾಜಾಕಾಲುವೆ ಒತ್ತುವರಿ

ಬಿಬಿಎಂಪಿ ವ್ಯಾಪ್ತಿಯ ರಾಜಾಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿರುವ ಅಂಶವನ್ನು ಸೋಮವಾರದ (ಸೆ 19) ಒಳಗೆ ಬಹಿರಂಗ ಪಡಿಸುವಂತೆ ರಾಜ್ಯ ಹೈಕೋರ್ಟ್ ಸೂಚಿಸಿದೆ. ಒತ್ತುವರಿ ವಿಚಾರದಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಮಾತ್ರ ಸರಕಾರದ ಶೂರತ್ವ, ಪ್ರಭಾವಿಗಳ ಮುಂದೆ ಅಲ್ಲ ಎನ್ನುವ ಆರೋಪ ಎದುರಾಗಿದೆ. ಒಟ್ಟಿನಲ್ಲಿ, ಒತ್ತುವರಿ ವಿಚಾರದಲ್ಲಿ ಎಲ್ಲಾ ಸರಕಾರವೂ ಒಂದೇ ಎನ್ನುವುದು ಮತ್ತೆಮತ್ತೆ ಸಾಬೀತಾಗಿದೆ.

English summary
Government Shown Initial Bravery On Clearing Illegal Land Encroachment Later Slow. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X