ಕೊರೊನಾ ತಡೆಯಲು ಎಟಿಎಂಗಳ ಸುರಕ್ಷತೆ ಬಗ್ಗೆ ಗಮನ ಕೊಡಿ
ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಸೋಂಕು ಹರಡುವಿಕೆಯನ್ನು ತಡೆಯಲು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಆದರೆ, ದಿನನಿತ್ಯ ಹೆಚ್ಚು ಜನರ ಬಳಸುವ ಎಟಿಎಂಗಳಲ್ಲಿ ಈ ಬಗ್ಗೆ ಯಾವುದೇ ಮುಂಜಾಗ್ರತೆ ಕಂಡು ಬಂದಿಲ್ಲ ಎಂಬ ವಿಷಯ ಗಮನಿಸಬೇಕಾಗಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
'ರಾಜ್ಯದ ಯಾವುದೇ ಎಟಿಎಮ್ ನಲ್ಲೂ ಇಲ್ಲ ಸುರಕ್ಷೆ. ದಿನನಿತ್ಯ ಹಣ ಡ್ರಾ ಮಾಡಲು ನೂರಾರು ಗ್ರಾಹಕರು ಎಟಿಎಮ್ ಗಳಿಗೆ ಬರ್ತಾರೆ. ಕೊರೋನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ತಕ್ಷಣವೇ ತೆಗೆದುಕೊಳ್ಳಬೇಕು. ಪ್ರತಿ ಎಟಿಎಂ ಕೇಂದ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿ ಇಡಲು ತುರ್ತು ಕ್ರಮ ಕೈಗೊಳ್ಳ ಬೇಕು' ಎಂದು ತಿಳಿಸಿದ್ದಾರೆ.

ರಾಜ್ಯದ ಯಾವುದೇ ಎಟಿಎಮ್ ನಲ್ಲೂ ಇಲ್ಲ ಸುರಕ್ಷೆ. ದಿನನಿತ್ಯ ಹಣ ಡ್ರಾ ಮಾಡಲು ನೂರಾರು ಗ್ರಾಹಕರು ಎಟಿಎಮ್ ಗಳಿಗೆ ಬರ್ತಾರೆ. ಕೊರೋನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ತಕ್ಷಣವೇ ತೆಗೆದುಕೊಳ್ಳಬೇಕು.
— H D Kumaraswamy (@hd_kumaraswamy) March 21, 2020
ಪ್ರತಿ ಎಟಿಎಂ ಕೇಂದ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಕಡ್ಡಾಯವಾಗಿ ಇಡಲು ತುರ್ತು ಕ್ರಮ ಕೈಗೊಳ್ಳ ಬೇಕು. (2/1)
'ದುರಾದೃಷ್ಟವಶಾತ್ ಕೊರೊನಾ ಸೋಂಕಿತರು ಹಣ ಡ್ರಾ ಮಾಡಿದರೆ ಅಮಾಯಕರು ಕರೋನಾಕೆ ಬಲಿ ಆಗುವ ಸಾಧ್ಯತೆಗಳಿವೆ. ಎಲ್ಲ ಬ್ಯಾಂಕ್ ಗಳು ತುರ್ತಾಗಿ ಎಟಿಎಂಗಳಲ್ಲಿ ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು' ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ದುರಾದೃಷ್ಟವಶಾತ್ ಕೊರೊನಾ ಸೋಂಕಿತರು ಹಣ ಡ್ರಾ ಮಾಡಿದರೆ ಅಮಾಯಕರು ಕರೋನಾಕೆ ಬಲಿ ಆಗುವ ಸಾಧ್ಯತೆಗಳಿವೆ. ಎಲ್ಲ ಬ್ಯಾಂಕ್ ಗಳು ತುರ್ತಾಗಿ ಎಟಿಎಂಗಳಲ್ಲಿ ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು.(2/2)
— H D Kumaraswamy (@hd_kumaraswamy) March 21, 2020
ಹಾಗ್ನೋಡಿದ್ರೆ, ಕುಮಾರಸ್ವಾಮಿ ಅವರ ಹೇಳಿರುವ ಅಂಶ ನಿಜಾ ಎನಿಸುತ್ತೆ. ಕೊರೊನಾ ಸೋಂಕಿತರು ಎಟಿಎಂನಲ್ಲಿ ಹಣ ಡ್ರಾ ಮಾಡಿದ ಬಳಿಕ, ಸಾಮಾನ್ಯ ವ್ಯಕ್ತಿಗಳು ಹಣ ಮಾಡಿದರೆ ಸೋಂಕು ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ.











Click it and Unblock the Notifications