ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 3 ಸಾವಿರ ಮರಗಳು, ಕೆರೆಗಳ ಬಲಿ

|
Google Oneindia Kannada News

ಬೆಂಗಳೂರು, ಮಾರ್ಚ್ 13: ಒಂದೊಮ್ಮೆ ಬೆಂಗಳೂರಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಬೇಕಿದ್ದರೆ ಸುಮಾರು 3 ಸಾವಿರ ಮರಗಳು, ಕೆರೆಗಳ ಬಲಿ ಕೊಡಲೇಬೇಕು.

2017ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿತ್ತು. 2020ರ ಹೊತ್ತಿಗೆ ಕೇವಲ ಶೇ. 2.96ರಷ್ಟು ಮಾತ್ರ ಮರಗಳು ಬೆಂಗಳೂರಲ್ಲಿ ಉಳಿಯಲಿದೆ ಎಂದು ಸಮೀಕ್ಷೆ ಹೇಳಿತ್ತು.

ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು? ಎಲಿವೇಟೆಡ್ ಕಾರಿಡಾರ್‌ಗೆ ಸಿಕ್ಕಿದೆ ಅನುಮತಿ ಆದರೆ ಮುಂದಿರುವ ಸವಾಲುಗಳೇನು?

1973ರಲ್ಲಿ ಶೇ.68.1ರಷ್ಟು ಕಾಡು, ಮರಗಳು 2002ರ ಹೊತ್ತಿಗೆ ಶೇ. 38.7ರಷ್ಟಕ್ಕೆ ಬಂದು ತಲುಪಿತ್ತು. ಚೇಂಜ್ ಡಾಟ್ ಆರ್ಗ್ ಕಬ್ಬನ್ ಪಾರ್ಕ್ ಉಳಿವಿನ ಕುರಿತು ಸಿಗ್ನೇಚರ್ ಅಭಿಯಾನವನ್ನು ಆರಂಭಿಸಿದೆ. ಈಗಾಗಲೇ 800 ಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ.

ಇದೀಗ 98 ಕಿ.ಮೀ ಉದ್ದದ ಕಾರಿಡಾರ್ ಬೆಂಗಳೂರಲ್ಲಿ ನಿರ್ಮಾಣವಾದರೆ ಸುಮಾರು 3 ಸಾವಿರ ಮರಗಳ ಮಾರಣಹೋಮ ಆಗುವುದಂತೂ ಗ್ಯಾರಂಟಿ.

ಎಲಿವೇಟೆಡ್ ಕಾರಿಡಾರ್‌ಗೆ ಎಲ್ಲೆಲ್ಲಿ ಎಷ್ಟು ಮರಗಳನ್ನು ಕಡಿಯುತ್ತಾರೆ

ಎಲಿವೇಟೆಡ್ ಕಾರಿಡಾರ್‌ಗೆ ಎಲ್ಲೆಲ್ಲಿ ಎಷ್ಟು ಮರಗಳನ್ನು ಕಡಿಯುತ್ತಾರೆ

ಕಬ್ಬನ್‌ ಪಾರ್ಕ್‌ನಲ್ಲಿ-120
ಜಯಮಹಲ್ ಪ್ಯಾಲೇಸ್-356
ಕೋಲ್ಸ್ ಪಾರ್ಕ್-47
ಐಐಎಸ್‌ಸಿ ಕ್ಯಾಂಪಸ್, ಸಿವಿ ರಾಮನ್ ರಸ್ತೆ-195
ಐಐಎಸ್‌ಸಿ ಕ್ಯಾಂಪಸ್ ಯಶವಂತಪುರ-32
ರಾಜಾ ರಾಮ್ ಮೋಹನ್ ರಾಯ್ ರಸ್ತೆ-108

ಕೇವಲ ಮರಗಳಷ್ಟೇ ಅಲ್ಲ, ಕೆರೆಗಳೂ ಕೂಡ

ಕೇವಲ ಮರಗಳಷ್ಟೇ ಅಲ್ಲ, ಕೆರೆಗಳೂ ಕೂಡ

ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾದರೆ ಕೇವಲ ಮರಗಳಷ್ಟೇ ಅಲ್ಲದೆ ಕೆರೆಗಳು ಕೂಡ ಬರಿದಾಗುತ್ತವೆ.
ಕೆರೆಯ ಎಷ್ಟು ಪ್ರದೇಶ ಎಲಿವೇಟೆಡ್‌ ಕಾರಿಡಾರ್‌ಗೆ ಬಲಿ
ಹೆಬ್ಬಾಳ ಕೆರೆ-5 ಮೀಟರ್
ಕೆಆರ್‌ಪುರಂ ಕೆರೆ-20 ಮೀಟರ್
ಸರ್ವಜ್ಞನಗರ ಕೆರೆ-20ಮೀಟರ್
ಹಲಸೂರು ಕೆರೆ-5ಮೀಟರ್
ವರ್ತೂರು ಕೆರೆ-5 ಮೀಟರ್
ವೃಷಭಾವತಿ ಕೆರೆ-5 ಮೀಟರ್
ಅಗರ ಕೆರೆ-30 ಮೀಟರ್
ಚಳ್ಳಕೆರೆ-30 ಮೀಟರ್
ಬಾಣಸವಾಡಿ ರಾಜಕಾಲುವೆ-1 ಮೀಟರ್
ಶಾಂತಿನಗರ ರಾಜಕಾಲುವೆ-1 ಮೀಟರ್

ಎಲಿವೇಟೆಡ್ ಕಾರಿಡಾರ್ ಯೋಜನೆ: ಪ್ರತ್ಯೇಕ ಟೆಂಡರ್ ಗೆ ನಿರ್ಧಾರ

ಎಲಿವೇಟೆಡ್ ಕಾರಿಡಾರ್ ಯೋಜನೆ: ಪ್ರತ್ಯೇಕ ಟೆಂಡರ್ ಗೆ ನಿರ್ಧಾರ

ಲಿವೇಟೆಡ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಟೆಂಡರ್ ಕರೆಯಲು ಕೆಆರ್‌ಸಿಡಿಎಲ್ ಒಲವು ತೋರಿದೆ.

ನಗರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ವ್ಯಾಪ್ತಿಯಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆಯಡಿ ಲೂಪ್ ಮಾದರಿಯಲ್ಲಿ ಮೇಲು ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ.

ಉತ್ತರ-ದಕ್ಷಿಣ ಕಾರಿಡಾರ್ ಮಾರ್ಗದಲ್ಲಿನ ಸಿಬಿಡಿ ಪ್ರದೇಶದಲ್ಲಿನ ವಾಣಿಜ್ಯ ಚಟುವಟಿಕೆಯಿಂದಾಗಿ ಸದಾ ಟ್ರಾಫಿಕ್ ಪ್ರಮಾಣ ಹೆಚ್ಚಿರುತ್ತದೆ. ಬೆಳಗ್ಗೆಯಿಂದ ರಾತ್ರಿವರೆಗೂ ಸಂಚಾರ ದಟ್ಟಣೆಯಲ್ಲೇ ಕಾಲ ಕಳೆಯಬೇಕಿದೆ. ವಸತಿ ಸಮುಚ್ಚಯವಿರುವ ಪ್ರದೇಶವಾಗಿರುವ ಕಾರಣ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಂಚಾರ ದಟ್ಟಣೆಯಾಗುವುದನ್ನು ಗಮನಿಸಿ ಕೆಲ ಮುಖ್ಯ ರಸ್ತೆಗಳನ್ನು ಲೂಪ್ ಮಾದರಿಯ ಮೇಲು ರಸ್ತೆಗೆ ಸಂಪರ್ಕಿಸಲಾಗುತ್ತದೆ.

ಈಗಾಗಲೇ ಮೊದಲ ಹಂತದ ಕಾರಿಡಾರ್ ಗೆ ಮೂರು ಪ್ಯಾಕೇಜ್‌ನಡಿ ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಲೂಪ್ ಮಾದರಿಯ ಮೇಲು ರಸ್ತೆಯನ್ನು ಸೇರ್ಪಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಟೆಂಡರ್ ಆಹ್ವಾನಿಸಿ ಕಾಮಗಾರಿಯನ್ನು ಅನುಷ್ಠಾನಕ್ಕೆ ತರುವ ಕೆಆರ್‌ಡಿಸಿಎಲ್ ಹೊಂದಿದೆ.

ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ, ವರದಿ ಸಲ್ಲಿಕೆಗೆ 2 ತಿಂಗಳ ಗಡುವು

ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ, ವರದಿ ಸಲ್ಲಿಕೆಗೆ 2 ತಿಂಗಳ ಗಡುವು

ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಲು ಎಲಿವೇಟೆಡ್ ಕಾರಿಡಾರ್ ವಿಸ್ತರಣೆಗೆ ಚಿಂತನೆ ನಡೆಸಲಾಗಿದೆ.

ಈ ಕುರಿತು ವರದಿ ಸಲ್ಲಿಕೆಗೆ 2 ತಿಂಗಳ ಗಡುವು ನೀಡಲಾಗಿದೆ. ಎಲಿವೇಟೆಡ್ ಕಾರಿಡಾರ್‌ನ ಉತ್ತರ-ದಕ್ಷಿಣ ಮಾರ್ಗದ ಮೊದಲ ಹಂತದ ಅನುಷ್ಠಾನಕ್ಕೆ ಟೆಂಡರ್ ಆಹ್ವಾನಿಸಿದ ಬೆನ್ನಲ್ಲೇ ಸರ್ಕಾರ ಈ ನಿಲುವು ಕೈಗೊಂಡಿದೆ.

ಎಸ್ಟೀಮ್ ಮಾಲ್ ನಿಂದ ಆರಂಭವಾಗಬೇಕಿದ್ದ ಮೊದಲ ಹಂತ ಎಲಿವೇಟೆಡ್ ಕಾರಿಡಾರ್ ಮಾರ್ಗಕ್ಕೆ ಟ್ರಾಫಿಕ್ ದಟ್ಟಣೆ ಹಾಗೂ ಇತರೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಬೇಕಿರುವ ಕಾರಣ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿಗೆ ಸ್ಥಳಾಂತರಗೊಂಡಿದೆ.

English summary
At a time when opposition to the felling of trees for the elevated corridor is growing among citizen and environmentalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X