ಹತ್ತೊಂಬತ್ತರ ಪೋರನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ
ಬೆಂಗಳೂರು, ಜ. 7: ಸ್ತ್ರೀ ವ್ಯಾಮೋಹಕ್ಕೆ ಬಿದ್ದ ಯುವಕರು ಕಳ್ಳತನಕ್ಕೆ ಇಳಿಯುತ್ತಿರುವುದು ಹೆಚ್ಚುತ್ತಿವೆ. ಇಂತಹುದೇ ಮತ್ತೊಂದು ಪ್ರಕರಣವನ್ನು ಗೋಪಾಲಪುರ ಪೊಲೀಸರು ಬಯಲಿಗೆಳೆದಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಇನ್ನೂ 19ರ ಹರೆಯದ ಸೈಯದ್ ಮೋಯಿನ್ ಬಿನ್ ಸೈಯದ್ ಬಕಾಸ್ ಬಂಧಿತ ಆರೋಪಿ. ಈತನ ಬಂಧನದಿಂದ ಮಾಗಡಿ ರಸ್ತೆ ಪೊಲೀಸ್ ಠಾಣೆಯ ಮೂರು ಪ್ರಕರಣಗಳು ಮತ್ತು ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಒಂದು ಸೇರಿ ಒಟ್ಟೂ 4 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಸೈಯದ್‌ನಿಂದ 7 ಲಕ್ಷ ರು. ಮೌಲ್ಯದ 268 ಗ್ರಾಂ. ಚಿನ್ನಾಭರಣ, 700 ಗ್ರಾಂ. ಬೆಳ್ಳಿ ಆಭರಣ, 1 ಎಲ್‌ಸಿಡಿ ಟಿವಿ, 11 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿರುವ ಅರ್ಥ್ ವೆಲ್ಡಿಂಗ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಈತ ಮೊದಲು ಕೈ ಹಾಕಿದ್ದು ಮೊಬೈಲ್ ಕಳ್ಳತನಕ್ಕೆ. ನಂತರ ಕಳ್ಳತನದಿಂದ ಸುಲಭವಾಗಿ ಹಣ ಸಂಪಾದಿಸಬಹುದೆಂಬುದನ್ನು ಅರಿತು ಅದೇ ವೃತ್ತಿಯಲ್ಲಿ ಮುಂದುವರಿದ.
ಇನ್ನೂ ಹದಿವಯಸ್ಸಿನ ಅಪ್ರಾಪ್ತನಾಗಿದ್ದರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾನೆ. ತನ್ನೊಂದಿಗೆ ಸಪ್ತಪದಿ ತುಳಿಯಲಿರುವ ಯುವತಿಯೊಂದಿಗೆ ಸುತ್ತಾಡಲು ಹೆಚ್ಚು ಹಣ ಅಗತ್ಯವಿದ್ದ ಕಾರಣ ಕಳ್ಳತನ ಮುಂದುವರಿಸಿದ್ದಾಗಿ ಸೈಯದ್ ಹೇಳಿದ್ದಾನೆ.












Click it and Unblock the Notifications