UPI Circle: ಗೂಗಲ್‌ಪೇ ಯುಪಿಐ ಸರ್ಕಲ್: ಅಕೌಂಟ್ ಇಲ್ಲದಿದ್ದರೂ ಡಿಜಿಟಲ್ ಪೇಮೆಂಟ್ ಮಾಡ್ಬೋದು
ಗೂಗಲ್ ಪೇ ಇದೀಗ ಹೊಸದೊಂದು ಫೀಚರ್ ಪರಿಚಯಿಸಿದೆ. ಅದರ ಹೆಸರು "ಗೂಗಲ್‌ಪೇ ಯುಪಿಐ ಸರ್ಕಲ್" ಎಂದು ಈ ಹೊಸ ಫೀಚರ್ ಚಂದವಿದೆ. ತಂತ್ರಜ್ಞಾನಕ್ಕೆ ಭಾವನಾತ್ಮಕತೆಯ ಟಚ್ ಎನ್ನುವಂತಿದೆ ಈ ಫೀಚರ್. ಈ ಫೀಚರ್‌ನ ಮೂಲಕ ಯಾವುದೇ ಬ್ಯಾಂಕ್ ಅಕೌಂಟ್ ಇಲ್ಲದೆ ಇರುವವರೂ ಸಹ ಹಣ ವಿನಿಮಯ ಮಾಡಬಹುದು. ಪುಟ್ಟ ಮಗುವಿನ ಕೊನೆ ಕೈಬೆರಳನ್ನಿಡಿದು ಅಪ್ಪ ರಸ್ತೆ ದಾಟಿಸುವಂತೆ ಡಿಜಿಟಲ್ ವಹಿವಾಟು ಗೊತ್ತಿಲ್ಲದವರಿಗೆ ಇದು ಸಹಾಯವಾಗಲಿದೆ. ಈ ಫೀಚರ್‌ನ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಗೂಗಲ್ ಪೇ ಹೊಸದಾಗಿ ಯುಪಿಐ ಸರ್ಕಲ್‌ನ ಎನ್ನುವ ಫೀಚರ್‌ವೊಂದನ್ನು ಪರಿಚಯಿಸಿದೆ. ಇದರ ಮೂಲಕ ಇಲ್ಲಿಯವರೆಗೂ ಬ್ಯಾಂಕ್ ಅಕೌಂಟ್ ಮಾಡಿಸದೆ ಇರುವವರೂ ಹಣವಿನಿಮಯ ಹಾಗೂ ಡಿಜಿಟಲ್ ವಹಿವಾಟನ್ನು ಮಾಡಬಹುದಾಗಿದೆ. ಈ ಫೀಚರ್‌ನ ಮತ್ತೊಂದು ವಿಶೇಷವೇನೆಂದರೆ ನಿಮ್ಮ ಕುಟುಂಬದದಲ್ಲಿ ಯಾರಿಗಾದರೂ ಆನ್‌ಲೈನ್ ಟ್ರಾನ್ಸಾಕ್ಷನ್ ಗೊತ್ತಿಲ್ಲದಿದ್ದರೆ ಇದು ಸಹಕಾರಿಯಾಗಲಿದೆ. ಹಣಕಾಸು ವಹಿವಾಟು ಮಾಡುವಾಗ ಮೋಸವಾಗದಂತೆ ಎಚ್ಚರಿಕೆ ವಹಿಸಬಹುದಾಗಿದೆ. ಕುಟುಂಬದವರು, ಸ್ನೇಹಿತರನ್ನು ಸೆಕೆಂಡರಿ ಸರ್ಕಲ್‌ನಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಈ ರೀತಿಯ ವಿಶೇಷ ಹಾಗೂ ಹೊಸ ಫೀಚರ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಹಕಾರದಿಂದ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷಿತ ಹಣ ವಹಿವಾಟಿಗೆ ಸಹಾಯವಾಗಿರಲಿದೆ.

ಗೂಗಲ್ ಪೇ ಯುಪಿಐ ಸರ್ಕಲ್ ಹೇಗೆ ಕೆಲಸ ಮಾಡುತ್ತೆ
ದೇಶದಲ್ಲಿ ಅತಿ ಹೆಚ್ಚು ಡಿಜಿಟಲ್ ಪೇಮೆಂಟ್ ವಹಿವಾಟು ನಡೆಯುವ ಆ್ಯಪ್ ಗಳಲ್ಲಿ ಗೂಗಲ್ ಪೇ ಸಹ ಒಂದಾಗಿದೆ. ಇದೀಗ ಗೂಗಲ್ ಪೇ ಹಣ ವಹಿವಾಟಿಗೆ ಸಂಬಂಧಿಸಿದಂತೆ ಹೊಸ ಸುರಕ್ಷತಾ ಕ್ರಮ ಹಾಗೂ ಮತ್ತಷ್ಟು ಹಣ ವಹಿವಾಟು ಸ್ನೇಹಿ ಫೀಚರ್‌ಗಳನ್ನು ಪರಿಚಯಿಸಿದೆ. ಗೂಗಲ್ ಪೇ ಪರಿಚಯಿಸಿರುವ ಯುಪಿಐ ಸರ್ಕಲ್ ಆಯ್ಕೆಯ ಮೂಲಕ ಬ್ಯಾಂಕ್ ಅಕೌಂಟ್ ಹೊಂದಿಲ್ಲದವರೂ ಸಹ ಹಣವನ್ನು ಬೇರೆಯರಿಗೆ ಕಳುಹಿಸಬಹುದು. ಡಿಜಿಟಲ್ ಪೇಮೆಂಟ್‌ನಲ್ಲಿ ಭಾಗಿಯಾಗಬಹುದು. ಮೊಬೈಲ್ ಪೋನ್‌ನ ಹೊಸ ಫೀಚರ್ ಬಳಸದೆ ಇರುವವರು ಹಾಗೂ ಡಿಜಿಟಲ್ ಮೂಲಕ ಹಣಕಾಸು ವಿನಿಮಯದ ಹೆಚ್ಚು ತಿಳಿಯದೆ ಇದ್ದರೆ, ಈ ಹೊಸ ಫೀಚರ್ ಬಳಸಬಹುದು.
ಗೂಗಲ್ ಪೇ ಯುಪಿಐ ಸರ್ಕಲ್ ಎರಡು ಹಂತದ ಫೀಚರ್ ಸೌಲಭ್ಯವನ್ನು ಪರಿಚಯ ಮಾಡಿದೆ. ಪ್ರಾಥಮಿಕ ಗೂಗಲ್ ಪೇ ಬಳಸುವವರು ಹಾಗೂ ದ್ವಿತೀಯ ಗೂಗಲ್ ಪೇ ಬಳಕೆದಾರರು ಎಂದು ವಿಭಜಿಸಲಾಗಿದೆ. ಇದರಲ್ಲಿ ಎರಡನೇ ಹಂತದಲ್ಲಿ ಬಳಸುವವರ ವಹಿವಾಟನ್ನು (ಹಣಕಾಸಿನ ವ್ಯವಹಾರವನ್ನು) ಮೊದಲ ಬಳಕೆದಾರರು ನಿಯಂತ್ರಿಸಲಿದ್ದಾರೆ. ಅಂದರೆ ನೋಡಿ ಅನುಮತಿಸುವಂತೆ ಪದ್ಧತಿ ಇದಾಗಿದೆ. ಇದರಿಂದ ಹಿರಿಯರು ಹಣ ಕಳೆದುಕೊಳ್ಳುವ ಸಾಧ್ಯತೆ ಕಡಿಮೆಯಾಗಲಿದೆ.
ಪ್ರಾಥಮಿಕ ಬಳಕೆದಾರರು: ಈಗಾಗಲೇ ಗೂಗಲ್ ಪೇ ಬಳಸುತ್ತಿದ್ದರೆ ಅವರನ್ನು ಗೂಗಲ್ ಪೇ ಪ್ರಾಥಮಿಕ ಬಳಕೆದಾರರು ಎಂದು ಗುರುತಿಸಲಾಗುತ್ತದೆ ಅಂದರೆ ಅವರ ಬಳಿ ಈಗಾಗಲೇ ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆ ಇರುತ್ತದೆ. ಇವರು ಈ ಹೊಸ ಫೀಚರ್‌ನಲ್ಲಿ ಪ್ರಮುಖ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎರಡನೇ ಹಂತದಲ್ಲಿ ಬಳಸುವವರಿಗೆ ಇವರು ಗೈಡ್ ಮಾಡಬಹುದು. ಮೊದಲ ಹಂತಲ್ಲಿ ಗೂಗಲ್ ಪೇ ಬಳಸುವವರು ಎರಡನೇ ಸ್ಟೇಜ್‌ನಲ್ಲಿ ಅವರ ಕುಟುಂಬದವರು ಅಥವಾ ಸ್ನೇಹಿತರನ್ನು ಸೇರಿಸಿಕೊಳ್ಳಬಹುದು. ಎರಡನೇ ಹಂತದಲ್ಲಿ ಇರುವವರು ಬ್ಯಾಂಕ್ ಅಕೌಂಟ್ ಇಲ್ಲದೆ ಇದ್ದರೂ ಗೂಗಲ್ ಪೇ ಸರ್ಕಲ್ ಫೀಚರ್ ಬಳಸಬಹುದಾಗಿದೆ.

ಎರಡನೇ ಹಂತದಲ್ಲಿ ಬಳಸುವವರು: ಎರಡನೇ ಹಂತದಲ್ಲಿ ಇರುವವರು ಮೊದಲ ಹಂತದವರಿಗೆ ರಿಕ್ವೆಸ್ಟ್ ಕಳುಹಿಸಬೇಕಾಗುತ್ತದೆ. ಉದಾ ಗೂಗಲ್‌ಪೇ ಹಣ ರಿಕ್ವೆಸ್ಟ್ ಮಾಡುವ ರೀತಿ. ಆ ನಿರ್ದಿಷ್ಟ ರಿಕ್ವೆಸ್ಟ್ ಗಳನ್ನು ಈಗಾಗಲೇ ಅಕೌಂಟ್ ಹೊಂದಿರುವವರು ಪ್ರಾಥಮಿಕ ಬಳಕೆದಾರರು ಅನುಮತಿಸುತ್ತಾರೆ. ಈ ಫೀಚರ್‌ನಲ್ಲಿ ಪ್ರಾಥಮಿಕ ಬಳಕೆದಾರರು ಪ್ರತಿ ತಿಂಗಳು 15 ಸಾವಿರ ರೂಪಾಯಿಯ ವರೆಗೆ ಹಣದ ವಹಿವಾಟನ್ನು ಹೊಂದಿರುತ್ತಾರೆ. ಈ ಮಿತಿಯ ಒಳಗೆ ದ್ವಿತೀಯ ಬಳಕೆದಾರರು ಸ್ವತಂತ್ರವಾಗಿ ಡಿಜಿಟಲ್ ಪೇಮೆಂಟ್ ಮಾಡಬಹುದು. ಆದರೆ, ಈ ರೀತಿಯ ಡಿಜಿಟಲ್ ವಹಿವಾಟಿನಲ್ಲಿ ಪ್ರಾಥಮಿಕ ಬಳಕೆದಾರರಿಗೆ ಪೂರ್ಣ ನಿಯಂತ್ರಣ ಇರುತ್ತದೆ. ಎರಡನೇ ಹಂತದಲ್ಲಿರುವ ಗೂಗಲ್ ಪೇ ಸರ್ಕಲ್‌ನಲ್ಲಿ ಇರುವವರ ಪ್ರತಿಯೊಂದು ಡಿಜಿಟಲ್ ವಹಿವಾಟಿನ ರಿಕ್ವೆಸ್ಟ್ ಗಳನ್ನು ಅನುಮೋದಿಸುತ್ತಾರೆ.
UPI ಸರ್ಕಲ್ ಹೆಂಗೆ ಕೆಲಸ ಮಾಡುತ್ತೆ
ಯುಪಿಐ ಸರ್ಕಲ್ ಎನ್ನುವುದು ಅದರ ಹೆಸರೇ ಹೇಳುವಂತೆ ಒಂದು ನಿರ್ದಿಷ್ಟ ಸರ್ಕಲ್ ಸೇವೆಯನ್ನು ನೀಡಲಿದೆ. ಸೆಕೆಂಡರಿ ಬಳಕೆದಾರರು ಹಣ ಪಾವತಿ ಮಾಡುವುದಕ್ಕೆ ರಿಕ್ವೆಸ್ಟ್ ಕಳುಹಿಸಬೇಕು. ಗೂಗಲ್ ಪೇ ಸೆಕೆಂಡರಿ ಯೂಸರ್ ಆಗಿದ್ದರೆ, ಯುಪಿಐ ಸರ್ಕಲ್ ಬಳಸಿ ಹಣ ಪೇ ಮಾಡಬಹುದು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಪಾವತಿ ಮಾಡಬಹುದು. ಈ ರೀತಿ ಹಣ ಕಳುಹಿಸಬೇಕಾದರೆ, ಮೊದಲ ಹಂತದ ಗೂಗಲ್ ಪೇ ಬಳಸುವವರು ಅನುಮತಿಸಬೇಕಾಗುತ್ತದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications