Good News: ಬೆಂಗಳೂರಿನ ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರಿಗೆ ಶುಭಸುದ್ದಿ- ಮಾಹಿತಿ ತಿಳಿಯಿರಿ

ಬೆಂಗಳೂರು, ಫೆಬ್ರವರಿ, 07: ಬೆಂಗಳೂರಿನಲ್ಲಿ ರಾತ್ರಿ 9 ಗಂಟೆ ಆಯಿತೆಂದರೆ ಸಾಕು ಪೊಲೀಸರು ಅಂಗಡಿ, ಹೋಟೆಗಳ ಬಾಗಿಲು ಮುಚ್ಚಲು ಮಾಲೀಕರಿಗೆ ಪ್ರತಿದಿನವೂ ಸೂಚನೆ ನೀಡುತ್ತಲೇ ಇರುತ್ತಾರೆ. ಇದರಿಂದ ಹೋಟೆಲ್‌ ಮಾಲೀಕರ ವ್ಯಾಪಾರ ಹಾಗೂ ಗ್ರಾಹಕರಿಗೂ ತೊಂದರೆ ಆಗುತ್ತಿತ್ತು. ಆದರೆ ಇದೀಗ ಸರ್ಕಾರ ಶುಭಸುದ್ದಿಯೊಂದನ್ನು ನೀಡಿದ್ದು, ಇನ್ಮುಂದೆ ದಿನದ 24 ಗಂಟೆಯೂ ಹೋಟೆಲ್‌ಗಳನ್ನು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿದೆ.

ದಿನದ 24 ಗಂಟೆ ಹೋಟೆಲ್ ಓಪನ್ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡುವ ಭರವಸೆ ನೀಡಿದ್ದು, ಶೀಘ್ರದಲ್ಲೇ ಮಾರ್ಗಸೂಚಿ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯೊಂದು ತಿಳಿದುಬಂದಿದೆ. ಒಂದು ವೇಳೆ ಇದು ಜಾರಿಯಾದರೆ, ಗ್ರಾಹಕರಿಗೆ ಹಾಗೂ ಹೋಟೆಲ್‌ ಮಾಲೀಕರಿಗೂ ತುಂಬಾ ಸಹಾಯ ಆದಂತಾಗುತ್ತದೆ.

Good news for Hotel owners and customers in Bengaluru, know details

ಯಾಕೆಂದರೆ ಬೆಂಗಳೂರಿನಲ್ಲಿ ಬಹುತೇಕ ಮಂದಿ ಆನ್‌ಲೈನ್‌ಗಿಂತ ಹೋಟೆಲ್‌ಗಳನ್ನು ಊಟಕ್ಕಾಗಿ ನಂಬಿಕೊಂಡಿರುತ್ತಾರೆ. ಮತ್ತೊಂದೆಡೆ ಹೋಟೆಲ್‌ ಮಾಲೀಕರಿಗೂ ಹೆಚ್ಚಿನ ವ್ಯಾಪಾರದ ಉದ್ದೇಶ ಆಗಿರುತ್ತದೆ. ಈ ಉದ್ದೇಶವನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿದ್ದು, ಇದು ಯಾವಾಗ ಜಾರಿಯಾಗುತ್ತದೆ ಎಂದು ಕಾದುನೋಡಬೇಕಿದೆ ಅಷ್ಟೇ.

ಹೋಟೆಲ್‌ಗಳನ್ನು ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡುವಂತೆ ಹೋಟೆಲ್ ಅಸೋಸಿಯೇಷನ್ ಸರ್ಕಾರದ ಮುಂದೆ ಬೇಡಿಕೆ ಇಡುತ್ತಲೇ ಬಂದಿದ್ದು, ಈ ಬಾರಿ ಕಾಂಗ್ರೆಸ್ ಸರ್ಕಾರ ಇವರ ಬೇಡಿಕೆಯನ್ನು ಈಡೇರಿಸಲು ಮುಂದಾಗಿದೆ. ಇದಕ್ಕೆ ಅನುಮತಿ ನೀಡುವ ಭರವಸೆಯನ್ನೂ ನೀಡಿದೆ.

ದಿನದ 24 ಗಂಟೆಯೂ ಹೋಟೆಲ್‌ಗಳನ್ನು ಓಪನ್ ಮಾಡುವ ಬಗ್ಗೆ ಕೆಲವೇ ದಿನಗಳಲ್ಲಿ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಕೇರಳದಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅನುಮತಿ ಇದ್ದು, ಅದರಂತೆಯೇ ಬೆಂಗಳೂರಿನಲ್ಲಿಯೂ ಅನುಮತಿ ಸಿಗುವ ನಿರೀಕ್ಷೆಯಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.

ಸರ್ಕಾರ ಇದಕ್ಕೆ ಅನುಮತಿ ನೀಡಿದರೆ ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಹೋಗುವವರಿಗೆ, ರಾತ್ರಿ ವೇಳೆ ಪ್ರಯಾಣ ಮಾಡುವವರಿಗೆ ತುಂಬಾ ಉಪಯೋಗ ಆದಂತಾಗುತ್ತದೆ. ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಉದ್ಯೋಗ ಕೂಡ ಸೃಷ್ಟಿ ಆಗುತ್ತದೆ ಎಂಬುದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+