BMTC ಸಿಬ್ಬಂದಿಗೆ Good news: ಡಿಪೋಗಳಲ್ಲಿ "ಗಾಂಧಿ ಪಾಂಯಿಂಟ್" ಕ್ಯಾಂಟೀನ್ ಆರಂಭ, ಮೆನು ಹೀಗಿದೆ
ಬೆಂಗಳೂರು, ಅಕ್ಟೋಬರ್, 02: ಈಗಾಗಲೇ ರಾಜ್ಯದಲ್ಲಿ ಹಲವೆಡೆ ಕಾಂಗ್ರೆಸ್ ಸರ್ಕಾರ ತೆರೆದಿರುವ ಇಂದಿರಾ ಕ್ಯಾಂಟೀನ್‌ಗಳು ಬಡವರ ಹಸಿವನ್ನು ನೀಗಿಸುತ್ತಿವೆ. ಹಾಗೆಯೇ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಾರಿಗೆ ಸಿಬ್ಬಂದಿಗೆ ಉತ್ತಮ ಗುಣಮಟ್ಟದ ತಿಂಡಿ, ಊಟ ಒದಗಿಸರುವ ಕ್ಯಾಂಟೀನ್ ತೆರೆಯುವುದಾಗಿ ಹೇಳಿದ್ದರು. ಅದರಂತೆಯೇ ಇದೀಗ ಇಂದು ಬೆಂಗಳೂರಿನ BMTCಯ 4ನೇ ಘಟಕದಲ್ಲಿ ಉತ್ತಮ ದರ್ಜೆಯ, ರಿಯಾಯಿತಿ ದರದಲ್ಲಿ ಊಟ, ತಿಂಡಿ ಒದಗಿಸುವ "ಗಾಂಧಿ ಪಾಯಿಂಟ್ ಕ್ಯಾಂಟಿನ್" ಆರಂಭ ಮಾಡಿ ಹೇಳಿದಂತೆ ನಡೆದುಕೊಂಡಿದ್ದಾರೆ.
ಇಂದು (ಅಕ್ಟೋಬರ್ 02) ಬಿಎಂಟಿಸಿಯ 4ನೇ ಘಟಕದಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಉತ್ತಮ ದರ್ಜೆಯ ತಿಂಡಿ ಹಾಗೂ ಊಟವನ್ನು ಒದಗಿಸಲು "ಗಾಂಧಿ ಪಾಯಿಂಟ್" ಹೆಸರಿನ ಕ್ಯಾಂಟೀನ್‌ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಈಗಾಗಲೇ ಬಿಎಂಟಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ. ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವುದರಿಂದ 4 ಸಾರಿಗೆ ಸಂಸ್ಥೆಗಳ ಚಾಲನಾ ಸಿಬ್ಬಂದಿಗೆ ಬಹಳ ಅನುಕೂಲ ಆಲಿದೆ. ಉತ್ತಮ ಗುಣಮಟ್ಟದ ಆಹಾರವು ರಿಯಾಯಿತಿ ದರದಲ್ಲಿ ದೊರಕಲಿದೆ. ಇದೇ ರೀತಿ ಇತರೆ ಘಟಕಗಳಲ್ಲಿಯೂ ಕ್ಯಾಂಟೀನ್ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕೀರ್ತಿಚಂದ್ರ, ವಿಭಾಗೀಯ ನಿಯಂತ್ರಣಾಧಿಕಾರಿ, ಬಿಎಂಟಿಸಿ ದಕ್ಷಿಣ ವಿಭಾಗ, ರವೀಂದ್ರ ಘಟಕ ವ್ಯವಸ್ಥಾಪಕರು, ಜಯನಗರ ಘಟಕ -4 ಹಾಗೂ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.












Click it and Unblock the Notifications