• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸೈಟ್‌ ಮಾಲೀಕರಿಗೆ ಖುಷಿ ಸುದ್ದಿ, ಇಲ್ಲಿದೆ ಮಾಹಿತಿ

ದಶಕಗಳ ಹೋರಾಟದ ನಂತರ ಅಂತಿಮವಾಗಿ ಸೈಟ್ ಮಾಲೀಕರಿಗೆ ಸಮಾಧಾನಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿದ ಕೆಲವು ಲೇಔಟ್‌ಗಳಿಗೆ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸಲು ಮುಂದಡಿ ಇಡಲಾಗಿದೆ.
|
Google Oneindia Kannada News

ಬೆಂಗಳೂರು, ಜನವರಿ 25: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಬಿಎಂಪಿಗೆ ಕೆಲವು ಲೇಔಟ್‌ಗಳನ್ನು ಹಸ್ತಾಂತರಿಸಲು ಮುಂದಾಗಿದೆ. ದಶಕಗಳ ಹೋರಾಟದ ನಂತರ ಅಂತಿಮವಾಗಿ ಸೈಟ್ ಮಾಲೀಕರಿಗೆ ಸಮಾಧಾನಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿದ ಕೆಲವು ಲೇಔಟ್‌ಗಳಿಗೆ ಮೂಲಭೂತ ಮೂಲಸೌಕರ್ಯಗಳನ್ನು ಒದಗಿಸಲು ಮುಂದಡಿ ಇಡಲಾಗಿದೆ.

ಅಂಜನಾಪುರ ಮತ್ತು ಜೆ.ಪಿ.ನಗರದಲ್ಲಿ ಒಳಚರಂಡಿ ವ್ಯವಸ್ಥೆ, ನೀರು ಸರಬರಾಜು, ವಿದ್ಯುತ್, ಸಂಪರ್ಕ ರಸ್ತೆ ಕಲ್ಪಿಸುವ ಕಾಮಗಾರಿಯನ್ನು ಬಿಡಿಎ ಆರಂಭಿಸಿದ್ದು, ಇತರೆ ಬಡಾವಣೆಗಳಲ್ಲೂ ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್ ಕರೆಯಲಾಗಿದೆ. ವಿಶ್ವೇಶ್ವರಯ್ಯ ಮತ್ತು ಬನಶಂಕರಿ ಬಡಾವಣೆಗಳಲ್ಲಿ ಕಾಮಗಾರಿ ಆರಂಭಿಸಲು ಟೆಂಡರ್‌ ಅಂತಿಮಗೊಳಿಸಲಾಗುತ್ತಿದೆ ಎಂದು ಡಿಎಚ್‌ ವರದಿ ಮಾಡಿದೆ.

ಬೆಂಗಳೂರು: ಶಾಸಕರನ್ನು ಬಿಡದ ಭೂಗಳ್ಳರು, ಸೈಟ್‌ನ ನಕಲಿ ಖಾತೆ ಸೃಷ್ಟಿಸಿದ್ದ 8 ಮಂದಿ ವಿರುದ್ಧ ಎಫ್‌ಐಆರ್ಬೆಂಗಳೂರು: ಶಾಸಕರನ್ನು ಬಿಡದ ಭೂಗಳ್ಳರು, ಸೈಟ್‌ನ ನಕಲಿ ಖಾತೆ ಸೃಷ್ಟಿಸಿದ್ದ 8 ಮಂದಿ ವಿರುದ್ಧ ಎಫ್‌ಐಆರ್

ಬಡಾವಣೆಗಳ ನಿವಾಸಿಗಳು ಸುಮಾರು ಒಂದು ದಶಕದಿಂದ ಕಾದು ಕುಳಿತಿದ್ದು, ಕಾಮಗಾರಿ ನಡೆಯುತ್ತಿರುವ ವೇಗದಿಂದ ನಿರಾಶೆಗೊಂಡಿದ್ದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡ್ಲುಎಸ್ಎಸ್‌ಬಿ) ಜೊತೆಗೆ ನೀರು ಸರಬರಾಜು ಮತ್ತು ಯುಜಿಡಿ ಸಂಪರ್ಕಗಳನ್ನು ಒದಗಿಸುವ ಕೆಲಸವನ್ನು ಪ್ರಾರಂಭಿಸಲು ನಾವು ಚರ್ಚೆ ನಡೆಸಿದ್ದೇವೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿವೇಶನ ಮಂಜೂರು ಮಾಡಿ 17 ವರ್ಷಗಳಾಗಿದ್ದು, ಇಂದಿಗೂ ನಮಗೆ ಮೂಲ ಸೌಕರ್ಯಗಳಾದ ನೀರು, ವಿದ್ಯುತ್‌ ಪೂರೈಕೆ ಇಲ್ಲ. ಇಂತಹ ಮೂಲಭೂತ ವಿಷಯಗಳಿಗೆ ಬಿಡಿಎಯನ್ನು ಏಕೆ ಇಲ್ಲಿ ಮಧ್ಯೆ ತರಬೇಕು ಎಂದು ನನಗೆ ಆಶ್ಚರ್ಯವಾಗಿದೆ ಎಂದು ಅಂಜನಾಪುರ ಲೇಔಟ್‌ನ ನಿವೇಶನ ಮಾಲೀಕರಲ್ಲಿ ಒಬ್ಬರಾದ ವೇದ ಮೂರ್ತಿ ಹೇಳಿದರು.

ಬೆಂಗಳೂರು ಘನತ್ಯಾಜ್ಯ ಸಮಸ್ಯೆ: ಕಟ್ಟುನಿಟ್ಟಿನ ನಿಯಮ ಪಾಲನೆಗೆ ಬಿಬಿಎಂಪಿ ನಿರ್ಧಾರಬೆಂಗಳೂರು ಘನತ್ಯಾಜ್ಯ ಸಮಸ್ಯೆ: ಕಟ್ಟುನಿಟ್ಟಿನ ನಿಯಮ ಪಾಲನೆಗೆ ಬಿಬಿಎಂಪಿ ನಿರ್ಧಾರ

ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಯಾದ ಬಿಡಿಎ ಸ್ವಯಂಪ್ರೇರಿತವಾಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಈ ಬಡಾವಣೆಗಳಲ್ಲಿ ಜನರಿಗೆ ಮನೆ ನಿರ್ಮಿಸಿಕೊಳ್ಳಲು ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಹೇಳಿದರು. ಇನ್ನು ವಿಶ್ವೇಶ್ವರಯ್ಯ ಲೇಔಟ್‌ನಿಂದ ನಿವೇಶನ ಮಂಜೂರಾದ ಮತ್ತೊಬ್ಬರು ಮಾಲೀಕರು ಮಾತನಾಡಿ, ಪ್ರತಿ ಮೂಲಭೂತ ಕೆಲಸಕ್ಕೂ ನಿವಾಸಿಗಳು ಅಧಿಕಾರಿಗಳ ಹಿಂದೆ ಓಡಬೇಕಾಗಿದೆ ಎಂದು ಅಳಲನ್ನು ತೋಡಿಕೊಂಡರು.

ಕುಂದುಕೊರತೆ ನಿವಾರಣಾ ಕಾರ್ಯವಿಧಾನವಿಲ್ಲ

ಕುಂದುಕೊರತೆ ನಿವಾರಣಾ ಕಾರ್ಯವಿಧಾನವಿಲ್ಲ

ಬೀದಿ ದೀಪ ಇಲ್ಲವೆ ಹದಗೆಟ್ಟ ರಸ್ತೆ ಸರಿಪಡಿಸಲು ಅಧಿಕಾರಿಗಳನ್ನು ಕೋರಿ ಕೋರಿ ಸಾಕಾಗಿದೆ. ಬಡಾವಣೆಯ ಕೆಲವು ಭಾಗಗಳಲ್ಲಿ ಸರಿಯಾದ ರಸ್ತೆಗಳಿಲ್ಲ ಮತ್ತು ಸಮಸ್ಯೆಗಳನ್ನು ಪರಿಹರಿಸಲು ನಮ್ಮಲ್ಲಿ ಯಾವುದೇ ಕುಂದುಕೊರತೆ ನಿವಾರಣಾ ಕಾರ್ಯವಿಧಾನವಿಲ್ಲ ಎಂದು ವಿಶ್ವೇಶ್ವರಯ್ಯ ಲೇಔಟ್ ನಿವಾಸಿಯೊಬ್ಬರು ಆರೋಪಿಸಿದರು. ಆದರೆ ಇದಕ್ಕೆ ಅತಿಯಾದ ವಿಳಂಬವಾಗುತ್ತಿರುವುದು ಭೂಸ್ವಾಧೀನ ಸಮಸ್ಯೆಯಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮೂಲ ಸೌಕರ್ಯಗಳನ್ನು ಯೋಜನೆ ಕಷ್ಟ

ಮೂಲ ಸೌಕರ್ಯಗಳನ್ನು ಯೋಜನೆ ಕಷ್ಟ

ರಾಜಕೀಯ ಕಾರಣಗಳಿಂದಾಗಿ ಅಧಿಕಾರಿಗಳು ಲೇಔಟ್ ರಚನೆಯನ್ನು ಘೋಷಿಸಿದ ನಿದರ್ಶನಗಳಿವೆ. ಆದಾಗ್ಯೂ, ಭೂಸ್ವಾಧೀನ ಪೂರ್ಣಗೊಳ್ಳುವುದಿಲ್ಲ ಮತ್ತು ಕೆಲವು ಭಾಗಗಳಲ್ಲಿ ಮಾಡಲಾಗುತ್ತದೆ. ಸಂಪೂರ್ಣ ಲೇಔಟ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಎಂಜಿನಿಯರ್‌ಗಳಿಗೆ ಮೂಲ ಸೌಕರ್ಯಗಳನ್ನು ಯೋಜಿಸುವುದು ಕಷ್ಟಕರವಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬಡಾವಣೆಯನ್ನು ಹಸ್ತಾಂತರ ವಿಳಂಬ

ಬಡಾವಣೆಯನ್ನು ಹಸ್ತಾಂತರ ವಿಳಂಬ

ಈ ಬಗ್ಗೆ ಯಲಹಂಕ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮಾತನಾಡಿ, ಇದಕ್ಕೆ ಯೋಜನೆ ರೂಪಿಸಲಾಗುವುದು. ಒಂದು ವರ್ಷದೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಬಡಾವಣೆಯನ್ನು ಹಸ್ತಾಂತರಿಸಬೇಕಾಗಿತ್ತು. ಈಗ ವಿಳಂಬವಾಗಿದೆ ಎಂದು ನಾನು ಒಪ್ಪುತ್ತೇನೆ. ಆದರೆ ಈಗ ಈ ಬಡಾವಣೆಗಳ ಅಭಿವೃದ್ಧಿಗೆ ಸುಮಾರು 400 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲಿಯೇ ಬಿಬಿಎಂಪಿಗೆ ಹಸ್ತಾಂತರಿಸುತ್ತೇವೆ ಎಂದರು.

ತೆರಿಗೆಯನ್ನು ನಿಗದಿಪಡಿಸಲು ಸೂಚನೆ

ತೆರಿಗೆಯನ್ನು ನಿಗದಿಪಡಿಸಲು ಸೂಚನೆ

ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಸ್ವಾಧೀನಾನುಭವ ಪತ್ರ ಹೊಂದಿರುವ ಸ್ವತ್ತುಗಳನ್ನು ಅಧಿಕಾರಿಗಳು ಕೂಡಲೇ ಗುರುತಿಸಬೇಕು. ಅಂತಹ ಸ್ವತ್ತುಗಳಿಗೆ ತೆರಿಗೆಯನ್ನು ನಿಗದಿಪಡಿಸಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ನಂತರ ಅವರಿಂದ ತೆರಿಗೆಯನ್ನು ಸಂಗ್ರಹಿಸಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದಾರೆ.

English summary
After decades of struggle finally to appease site owners Bangalore Development Authority (BDA) has gone ahead to provide basic infrastructure to some of the developed layouts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X