ಬೆಂಗಳೂರಿಗರಿಗೆ ಗುಡ್‌ನ್ಯೂಸ್: ಸೆ.02ರಿಂದಲೇ ಜಾರಿ, ಡಿ.ಕೆ ಶಿವಕುಮಾರ್ ಹೇಳಿದ್ದೇನು ?

ಬೆಂಗಳೂರಿನ ಅಭಿವೃದ್ಧಿ ಹಾಗೂ ರಚನೆಯಲ್ಲಿ ಮಹತ್ವದ ಬೆಳವಣಿಗೆ ಆಗುತ್ತಿದ್ದು, ಸೆಪ್ಟೆಂಬರ್ 02ಕ್ಕೆ ದೊಡ್ಡ ಬದಲಾವಣೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಸೆಪ್ಟೆಂಬರ್ 2 ರಂದು ಬೆಂಗಳೂರಿನ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರವು ತೆಗೆದುಕೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ ಬೆಂಗಳೂರಿನಲ್ಲಿ ಐದು ಹೊಸ ಮಹಾನಗರ ಪಾಲಿಕೆಗಳು ರಚನೆ ಆಗಲಿವೆ. ಈ ಹೊಸ ಮಹಾನಗರ ಪಾಲಿಕೆಗಳ ರಚನೆ ಸೆಪ್ಟೆಂಬರ್ 02ರಂದು ಚಾಲನೆ ಸಿಗಲಿದೆ ಎಂದು ಹೇಳಲಾಗಿದೆ. ಈ ಸಂಬಂಧ ಮುಖ್ಯವಾದ ಮಾಹಿತಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಹಂಚಿಕೊಂಡಿದ್ದಾರೆ.

Good News for Bengaluru Residents D K Shivakumar Confirms New Corporations from September 2

ಬೆಂಗಳೂರಿಗೆ ಐದು ಪಾಲಿಕೆ: ಹತ್ತು ವಲಯ

ಬೆಂಗಳೂರಿನಲ್ಲಿ ಈಗ ಒಂದು ಪಾಲಿಕೆ ಹಾಗೂ 8 ಪ್ರಮುಖ ವಲಯಗಳು ಇವೆ. ಇನ್ಮುಂದೆ ಅಂದರೆ ಸೆಪ್ಟೆಂಬರ್ 02ರಿಂದ ಐದು ಹೊಸ ಪಾಲಿಕೆಗಳು ರಚನೆ ಆಗಲಿದ್ದು, ಅದರಲ್ಲಿ ಹೊಸದಾಗಿ 10 ಪಾಲಿಕೆಗಳು ರಚನೆ ಆಗಲಿವೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಅಲ್ಲದೇ ಈ ಎಲ್ಲಾ ಹೊಸ ಐದು ಪಾಲಿಕೆಗಳಿಗೂ ಹೊಸ ಆಯುಕ್ತರು ನೇಮಕವಾಗಲಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

» ಬೆಂಗಳೂರು ಆಡಳಿತಕ್ಕೆ ಹೊಸ ರೂಪ ನೀಡಲು ಜಿಬಿಎ ವ್ಯವಸ್ಥೆ ಸಿದ್ಧ.

» ಸೆಪ್ಟೆಂಬರ್ 2, 2025 ರಿಂದ ಅಧಿಕೃತವಾಗಿ 5 ಹೊಸ ಪಾಲಿಕೆ ಕಚೇರಿಗಳ ಕಾರ್ಯಾರಂಭ.

» ಆಗಸ್ಟ್ ಅಂತ್ಯದೊಳಗೆ ರಾಜ್ಯ ಸರ್ಕಾರದಿಂದ ಈ ಕುರಿತು ಅಂತಿಮ ಅಧಿಸೂಚನೆ.

» ಅಸ್ತಿತ್ವಕ್ಕೆ ಬರಲಿರುವ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ಪಾಲಿಕೆಗಳಿಗೆ ಪ್ರತ್ಯೇಕ ಆಯುಕ್ತರ ನೇಮಕ.

» ಪಾಲಿಕೆಗಳ ಸುಗಮ ಆಡಳಿತಕ್ಕಾಗಿ ತಲಾ 2 ವಲಯಗಳ ರಚನೆ, ಒಟ್ಟು 10 ವಲಯಗಳು ಹಿಂದಿನ ಬಿಬಿಎಂಪಿ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿವೆ.

» ಈ ವಿಕೇಂದ್ರೀಕರಣದಿಂದ ನಾಗರಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಚುರುಕು ನೀಡುವ ಗುರಿ. ಬೆಂಗಳೂರಿನಲ್ಲಿ ಉತ್ತಮ ಆಡಳಿತ, ಸುಗಮ ಜೀವನಕ್ಕೆ ಹೊಸ ಸಂಕಲ್ಪ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಬೆಂಗಳೂರಿಗರ ಮಿಶ್ರ ಪ್ರತಿಕ್ರಿಯೆ: ಇನ್ನು ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳನ್ನು ರಚನೆ ಮಾಡುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಘೋಷಿಸಿದ್ದು. ಈ ಬಗ್ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸ ಪಾಲಿಕೆ ರಚನೆ: ಆಸ್ತಿ ಬೆಲೆ ಹೆಚ್ಚಳ ನಿರೀಕ್ಷೆ

ಇನ್ನು ಬೆಂಗಳೂರಿನಲ್ಲಿ ಹೊಸ ಪಾಲಿಕೆಗಳು ರಚನೆ ಆಗುತ್ತಿರುವುದರಿಂದ ಸಹಜವಾಗಿಯೇ ವಿವಿಧ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆಯೂ ಸಹ ಮೂಡಿದೆ.

ಬೆಂಗಳೂರಿನ ಇತಿಹಾಸ ಸೃಷ್ಟಿ: ಇನ್ನು ಈ ಬೆಳವಣಿಗೆಯು ಬೆಂಗಳೂರಿನ ಮಟ್ಟಿಗೆ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಬೆಂಗಳೂರಿನ ಇತಿಹಾಸದಲ್ಲೇ ಐದು ಮಹಾನಗರ ಪಾಲಿಕೆಗಳು ರಚನೆ ಆಗುತ್ತಿರುವುದು ಇದೇ ಮೊದಲು. ಬೆಂಗಳೂರು ಕೆಂಪೇಗೌಡರ ಕಾಲದಿಂದಲೂ ವಿಸ್ತೃತವಾಗುತ್ತಲ್ಲೇ ಇದೆ. ಇದೀಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+