ಬೆಂಗಳೂರಿನಲ್ಲಿ ಮನೆಗಳಿಗೆ ಬಂಗಾರದ ಬೆಲೆ: ಭೂಮಿ ಬೆಲೆ ಹೆಚ್ಚಳ, ಮನೆ ಮಾರಾಟ ಇಳಿಕೆ ಏನಿದು ಟ್ವಿಸ್ಟ್‌!

ಬೆಂಗಳೂರಿನಲ್ಲಿ ಮನೆ ಹೊಂದಿರುವವರಿಗೆ ಹಾಗೂ ಆಸ್ತಿದಾರರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಗೆ ಆಸ್ತಿ ಬೆಲೆ ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಭರ್ಜರಿ ಹೆಚ್ಚಳವಾಗಿರುವ ಬಗ್ಗೆ ಅಪ್ಡೇಟ್ಸ್‌ ಬಂದಿದೆ. ಬೆಂಗಳೂರಿನಲ್ಲಿ ವಿವಿಧ ಪ್ರಮುಖ ಯೋಜನೆಗಳು ಜಾರಿ ಆಗುತ್ತಿರುವುದು ಹಾಗೂ ಬೆಂಗಳೂರಿನ ನೆರೆಯ ಜಿಲ್ಲೆಗಳ ಹೆಸರು ಬದಲಾವಣೆ ಕಾರಣಕ್ಕೆ ಮತ್ತು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ವಿವಿಧ ಕಾರಣಗಳಿಗೆ ಭೂಮಿಯ ಬೆಲೆ ಹೆಚ್ಚಾಗುತ್ತಿದೆ. ಬೆಂಗಳೂರಲ್ಲಿ ಮನೆಗಳ ಬೆಲೆಯು ಶೇ 12ರಷ್ಟು ಹೆಚ್ಚಳವಾಗಿದೆ. ‌

ಈ ನಡುವೆ ಬೆಂಗಳೂರಿಲ್ಲಿ ಮನೆಗಳ ಬೆಲೆ ಸರಾಸರಿ ಶೇ 11ರಷ್ಟು ಹೆಚ್ಚಳವಾಗಿರುವುದು ವರದಿಯಾಗಿದೆ. ಅದರೊಂದಿಗೆ ಮತ್ತೊಂದು ಗುಡ್‌ನ್ಯೂಸ್ ಸಹ ಕೊಡಲಾಗಿದೆ. ಈ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಬೆಂಗಳೂರು ಸೇರಿದಂತೆ ದೇಶದ 7 ಪ್ರಮುಖ ನಗರಗಳಲ್ಲಿ ಮನೆಗಳ ಬೆಲೆಯು ಬರೋಬ್ಬರಿ ಸರಾಸರಿ ವಾರ್ಷಿಕ ಶೇ 11ರಷ್ಟು ಹೆಚ್ಚಳವಾಗಿದೆ ಎಂದು ಪ್ರಾಪರ್ಟಿ ಸಜೆಸ್ಟ್‌ ಸಂಸ್ಥೆ ಅನರಾಕ್ ವರದಿ ಮಾಡಿದೆ.

Gold price for houses in Bengaluru Land prices Boom and house sales decrease what s real estate twist

ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಕ್ಕೆ ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಾಗುತ್ತಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಪ್ರಾಪರ್ಟಿ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಈಗಾಗಲೇ ಮೆಟ್ರೋ ಅಭಿವೃದ್ಧಿ, ಪೆರಿಫೆರಲ್ ರಿಂಗ್ ರೋಡ್ ಹಾಗೂ ಸುರಂಗ ಮಾರ್ಗಗಳ ನಿರ್ಮಾಣ ಸೇರಿದಂತೆ ವಿವಿಧ ಪ್ರಮುಖ ಕಾಮಗಾರಿಗಳ ಘೋಷಣೆಯ ಬೆನ್ನಲ್ಲೇ ಕೆಲವು ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಕೇವಲ ಬೆಂಗಳೂರು ಮಾತ್ರವಲ್ಲ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲೂ ಪ್ರಾಪರ್ಟಿ ಬೆಲೆ ಹೆಚ್ಚಳವಾಗಿದೆ.

ಮನೆ ಮಾರಾಟ ಇಳಿಕೆ: ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಚುರುಕು ಪಡೆದುಕೊಂಡಿದೆ. ಮನೆಗಳ ಮಾರಾಟಕ್ಕೆ ಬೇಡಿಕೆ ಹೆಚ್ಚಾಗಿದೆ. ದೇಶದಾದ್ಯಂತ ಭೂಮಿ ಮಾರಾಟವೂ ಜೋರಾಗಿದೆ. ಆದರೆ ಭೂಮಿ ಬೆಲೆ ಹೆಚ್ಚಳವಾಗುತ್ತಿದ್ದಂತೆಯೇ ಕೆಲವರು ಮನೆಗಳನ್ನು ಮಾರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದರೆ, ಈ ವರದಿಯ ಪ್ರಕಾರ ದೇಶದಾದ್ಯಂತ ಮನೆಗಳ ಮಾರಾಟದಲ್ಲಿ ಬರೋಬ್ಬರಿ ಶೇ 20ರಷ್ಟು ಕುಸಿತ ಸಹ ಆಗಿದೆ. 2024ನೇ ಸಾಲಿನ ಏಪ್ರಿಲ್ ಹಾಗೂ ಜೂನ್ ತಿಂಗಳಲ್ಲಿ 1.20 ಲಕ್ಷ ಮನೆಗಳ ಮಾರಾಟವಾಗಿದ್ದವು. ಆದರೆ ಅದೇ ಅವಧಿಯಲ್ಲಿ ಈ ವರ್ಷ 96,285 ಮನೆಗಳ ಮಾರಾಟವಾಗಿವೆ ಎಂದು ವರದಿ ಉಲ್ಲೇಖಿಸಿದೆ. ಇನ್ನು ಬೆಂಗಳೂರಿನಲ್ಲಿ ಶೇ 8ರಷ್ಟು ಮನೆ ಮಾರಾಟ ಕುಸಿತ ಕಂಡಿದೆ. ಬೆಂಗಳೂರಲ್ಲಿ 16,355 ಮನೆಗಳು ಮಾರಾಟವಾಗಿದ್ದರೆ, ಈ ವರ್ಷ 15,120 ಮನೆಗಳು ಮಾತ್ರ ಮಾರಾಟವಾಗಿವೆ ಎಂದು ಹೇಳಲಾಗಿದೆ.

7 ನಗರಗಳಲ್ಲಿ ಬೆಲೆ ಏರಿಕೆ: ಇನ್ನು ಬೆಂಗಳೂರು ಮಾತ್ರವಲ್ಲದೇ ದೇಶದ ಪ್ರಮುಖ 7 ನಗರಗಳಲ್ಲಿ ಮನೆಗಳ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧವೂ ಇದಕ್ಕೆ ಕಾರಣವಾಗಿದೆ. ಅನಿಶ್ಚಿತ ಪರಿಸ್ಥಿತಿ ಎದುರಾದಾಗ ಜನ ಚಿನ್ನ ಹಾಗೂ ದೀರ್ಘಕಾಲದ ವಸ್ತುಗಳ ಮೇಲೆ ಮತ್ತು ಭೂಮಿಯ ಮೇಲೆ ಹೂಡಿಕೆ ಮಾಡುತ್ತಾರೆ. ಈ ಅವಧಿಯಲ್ಲಿ ಹಲವು ಆಸ್ತಿದಾರರು ಆಸ್ತಿ ಮಾರಾಟ ಮಾಡಿರಲಿಲ್ಲ. ಹೀಗಾಗಿ ಬೆಲೆ ಹೆಚ್ಚಳ ಹಾಗೂ ಖರೀದಿ ಕಡಿಮೆ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೇ ಆರ್‌ಬಿಐ ರೆಪೊ ದರವನ್ನು ಕಡಿತ ಮಾಡಿದ್ದು. ಇದರಿಂದಲೂ ಮನೆ ಖರೀದಿಗೆ ಹೋಮ್‌ಲೋನ್‌ ಸೌಲಭ್ಯ ಹೆಚ್ಚಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+