ಇಂಡಿಗೋ ವಿಮಾನದ ಸೀಟಿನ ಕೆಳಗೆ ಚಿನ್ನದ ಬಿಸ್ಕೆಟ್ ಪತ್ತೆ!
ಬೆಂಗಳೂರು, ಜ. 06: ಭಾರತಕ್ಕೆ ರಫ್ತಾಗುವ ಚಿನ್ನದಲ್ಲಿ ಶೇ. 25 ರಷ್ಟು ಕಳ್ಳ ಮಾರ್ಗದಲ್ಲಿ ಬರುತ್ತದೆ. ಇದರಲ್ಲಿ ಶೇ. 75 ರಷ್ಟು ಚಿನ್ನ ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ಕಳ್ಳ ಮಾರ್ಗಗಳ ಮೂಲಕ ಬಂದ ಚಿನ್ನವಾಗಿರುತ್ತದೆ. ಇಂಥದ್ದೊಂದು ಆತಂಕಕಾರಿ ಸಂಗತಿ ಕೆನಡಾ ಮೂಲದ ನಡೆಸಿದ ಅಧ್ಯಯನದಲ್ಲಿ ಹೊರ ಬಿದ್ದಿದೆ. ಏನೆಲ್ಲಾ ಕಟ್ಟು ನಿಟ್ಟಿನ ಕ್ರಮ ಜರುಗಿಸಿದರೂ ದುಬೈನಿಂದ ಸ್ಮಗ್ಲಿಂಗ್ ಆಗುವ ಚಿನ್ನದ ಕಳ್ಳದಾರಿಗೆ ಬ್ರೇಕ್ ಬಿದ್ದಿಲ್ಲ!
ಇಷ್ಟೆಲ್ಲಾ ಪೀಠಿಕೆ ಹಿಂದೆ ಒಂದು ಕಾರಣವಿದೆ. ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಸೀಟಿನ ಕೆಳಗೆ ಬಚ್ಚಿಟ್ಟು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಕೋಟ್ಯಂತರ ಮೌಲ್ಯದ 2.8 ಕೆ.ಜಿ. ಚಿನ್ನದ ಬಿಸ್ಕೆಟ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಗೊ ವಿಮಾನದ ಸೀಟಿನ ಕೆಳಗೆ ಚಿನ್ನದ ಬಿಸ್ಕೆಟ್‌ಗಳನ್ನು ಅಡಗಿಸಿಡಲಾಗಿತ್ತು. ವಿಮಾನ ಸ್ವಚ್ಛಗೊಳಿಸುವ ಸಿಬ್ಬಂದಿ ಮೂಲಕ ಅಕ್ರಮ ಚಿನ್ನವನ್ನು ಹೊರಗೆ ಸಾಗಣೆ ಮಾಡಬೇಕಿತ್ತು.
ದುಬೈನಿಂದ ಅಕ್ರಮ ಸಾಗಣೆ
ಆದರೆ, ಸೀಟಿನ ಕೆಳಗೆ ಸ್ಮಗ್ಲರ್ಸ್ ಬಚ್ಚಿಟ್ಟಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಚಿನ್ನ ಜಪ್ತಿ ಮಾಡಿಕೊಂಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು ಇದರ ಜಾಡು ಪತ್ತೆಗೆ ಮುಂದಾಗಿದ್ದಾರೆ. ಇದೊಂದಲ್ಲ. ವರ್ಷದಲ್ಲಿ ಕನಿಷ್ಠ ಹತ್ತಕ್ಕೂ ಹೆಚ್ಚು ಪ್ರಕರಣದಲ್ಲಿ ಚಿನ್ನ ಅಕ್ರಮ ಸಾಗಣೆ ಮಾಡುವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ದುಬೈನಿಂದ ಅಕ್ರಮ ಸಾಗಣೆ ಮಾಡುತ್ತಿರುವುದು ವಿಶೇಷ. ಅಂದ ಹಾಗೆ ಇತ್ತೀಚೆಗೆ ಚೆನ್ನೈ ಮೂಲದ ವ್ಯಕ್ತಿಯನ್ನು ಸಹ ಚಿನ್ನದ ಅಕ್ರಮ ಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದರು.
















Click it and Unblock the Notifications