ವಾರಾಂತ್ಯದಲ್ಲಿ ಕಾರ್ನಾಡರ ತುಘಲಕ್ ತಪ್ಪದೇ ನೋಡಿ
ಬೆಂಗಳೂರು, ನ.21: ಭಾರತದ ಶೇಷ್ಠ ನಾಟಕಗಳಲ್ಲೊಂದಾದ ಗಿರೀಶ್ ಕಾರ್ನಾಡರ 'ತುಘಲಕ್'ಒಂದು ವರ್ಷದಲ್ಲಿ ಮೂವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. 'ಸಮುದಾಯ' ಹವ್ಯಾಸಿ ರಂಗ ತಂಡ 35 ಮತ್ತು 36 ನೇ ಪ್ರದರ್ಶನಗಳನ್ನು ಇದೇ ಶನಿವಾರ 22/11/2014 ರಂದು ರಂಗ ಶಂಕರದಲ್ಲಿ ನೀಡಲಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ರಂಗಶಂಕರದಲ್ಲಿ ನಡೆದ ಕಾರ್ನಾಡ ನಾಟಕಗಳ ಉತ್ಸವದಲ್ಲಿ ಎಂಟು ಭಾಷೆಗಳಿಂದ ಎಂಟು ನಾಟಕಗಳು ಪ್ರದರ್ಶಿಸಲ್ಪಟ್ಟಿದ್ದು, 'ಸಮುದಾಯ' ಬೆಂಗಳೂರು ಕನ್ನಡದಲ್ಲಿ 'ತುಘಲಕ್' ನಾಟಕವನ್ನು ಆಯ್ಕೆ ಮಾಡಿಕೊಂಡಿತ್ತು. ಅಕ್ಟೋಬರ್ 18, 2013 ರಂದು ಮೊದಲ ಪ್ರದರ್ಶನ ಕಂಡ ತುಘಲಕ್ ನಾಟಕವು, ಒಂದು ವರ್ಷದಲ್ಲಿ, ಬೆಂಗಳೂರು ಸೇರಿದಂತೆ ಮೈಸೂರು, ಧಾರವಾಡ, ಶಿರಸಿ, ಮಂಗಳೂರು, ಉಡುಪಿ,ಗೌರಿಬಿದನೂರು, ಕೋಲಾರ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ನೀಡಿತ್ತು.

ಒಂದು ವರ್ಷದಲ್ಲಿ 36 ಪ್ರದರ್ಶನಗಳನ್ನು ಒಂದು ಹವ್ಯಾಸಿ ರಂಗತಂಡ ನೀಡಿರುವ ಉದಾಹರಣೆಗಳು ಕನ್ನಡ ರಂಗಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದಿಲ್ಲ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವೆಡೆ ತುಘಲಕ್ ನಾಟಕವು ತುಂಬಿದ ಸಭಾಂಗಣವನ್ನು ಕಂಡಿರುವುದು ನಮಗೆ ಹೆಗ್ಗಳಿಕೆಯಾದರೆ, ಈ ಪ್ರಯೋಗದ ಜನಪ್ರಿಯತೆಯ ಸಾಕ್ಷಿಯೂ ಆಗಿದೆ. [ತುಘಲಕ್ 25ನೇ ದರ್ಬಾರ್ ವಿಶೇಷ]
ಅಷ್ಟೇ ಅಲ್ಲದೇ, ರಾಷ್ಟ್ರೀಯ ನಾಟಕ ಶಾಲೆ (NSD) ನಡೆಸುವ ಅಂತರ ರಾಷ್ಟ್ರೀಯ ನಾಟಕ ಉತ್ಸವವಾದ, 17ನೇ ಭಾರತ ರಂಗ ಮಹೋತ್ಸವದಲ್ಲಿ ಆಯ್ಕೆಯಾದ ಏಕೈಕ ಕನ್ನಡ ನಾಟಕ ಎಂಬುದು ಹೆಮ್ಮೆಯ ವಿಷಯ. ಇದೀಗ ಸಮುದಾಯ, ಬೆಂಗಳೂರು ತನ್ನ ಹೆಮ್ಮೆಯ ಪ್ರಯೋಗವಾದ ತುಘಲಕ್ ನಾಟಕವನ್ನು , 22/11/014 ರಂದು ರಂಗಶಂಕರದಲ್ಲಿ ಪ್ರದರ್ಶಿಸಲಿದೆ.

ತುಘಲಕ್
ರಚನೆ : ಗಿರೀಶ ಕಾರ್ನಾಡ್
ಅಭಿನಯ : ‘ಸಮುದಾಯ' ಬೆಂಗಳೂರು
ವಿನ್ಯಾಸ ಮತ್ತು ನಿರ್ದೇಶನ : ಡಾ. ಸ್ಯಾಮ್‌ಕುಟ್ಟಿ ಪಟ್ಟಂಕಾರಿ
ಸಹ ನಿರ್ದೇಶನ : ಡಾ. ಶ್ರೀಪಾದ ಭಟ್
ಸ್ಥಳ : ರಂಗಶಂಕರ
ದಿನಾಂಕ ಮತ್ತು ಸಮಯ : 22/11/2014, ಮಧ್ಯಾಹ್ನ 3:30 ಕ್ಕೆ ಮತ್ತು ಸಂಜೆ 7:30 ಕ್ಕೆ
ಟಿಕೆಟ್ ದರ : ರೂ. 100/-
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9900182400; 9739933889
online booking : www.bookmyshow.com
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications