ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ: ಇಂದೂ ಬರುತ್ತಾ?

|
Google Oneindia Kannada News

ಬೆಂಗಳೂರು, ಜುಲೈ 25: ಕರ್ನಾಟಕಾದ್ಯಂತ ಮುಂಗಾರು ಚುರುಕಾಗಿದೆ. ಇಷ್ಟು ದಿನ ಕೇವಲ ಮೋಡವನ್ನೇ ನೋಡಿಕೊಂಡು ಖುಷಿ ಪಡುತ್ತಿದ್ದ ಬೆಂಗಳೂರಿನ ಜನತೆಗೆ ಗುರುವಾರದ ಮಳೆಯಿಂದ ಸಂತೋಷವಾಗಿದೆ.

ಮಳೆಯಿಂದಾಗಿ ನಗರದಲ್ಲಿ ತಂಪಾದ ವಾತಾವರಣ ಸೃಷ್ಟಿಯಾಗಿದ್ದು, ಚಳಿಯ ಅನುಭವವಾಗುತ್ತಿದೆ. ಹಗಲಿನಲ್ಲಿ ಮೋಡ ಕವಿದ ವಾತಾವರಣವಿದ್ದು ಸಂಜೆ ಸುರಿಯುತ್ತಿದೆ. ದಕ್ಷಿಣ ಒಳನಾಡಿನ ಮುಂಗಾರು ಚುರುಕಾಗಿರುವುದರಿಂದ ನಗರದ ಬಹುತೇಕ ಭಾಗಗಳಲ್ಲಿ ಮಳೆ ಸುರಿದಿದೆ.

ಮೈಸೂರಿನಲ್ಲಿ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಮನೆ ಕುಸಿತಮೈಸೂರಿನಲ್ಲಿ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಮನೆ ಕುಸಿತ

ಹಲವು ದಿನಗಳಿಂದ ನಗರದಲ್ಲಿ ತುಂತುರು ಮಳೆಯಾಗುತ್ತಿದ್ದು, ಗುರುವಾರ ಕೇಂದ್ರ ಭಾಗಗಳಲ್ಲಿ ಸಾಧಾರಣ ಮಳೆ ಸುರಿಯಿತು. ಹೊರವಲಯಗಳ ಕೆಲ ಪ್ರದೇಶಗಳಲ್ಲಿ ಮಾತ್ರ ಮಳೆಯಾಯಿತು.

Generally Cloudy Sky Rain Very Likely in Bengaluru Today

ತಾವರೆಕೆರೆಯಲ್ಲಿ 24 ಮಿ.ಮೀ, ದಯಾನಂದ ನಗರದಲ್ಲಿ 22 ಮಿ.ಮೀ, ಸಂಪಂಗಿರಾಮನಗರದಲ್ಲಿ 19 ಮಿ.ಮೀ, ದಾಸನಪುರದಲ್ಲಿ 18 ಮಿ.ಮೀ, ಬಸವೇಶ್ವರನಗರದಲ್ಲಿ 15 ಮಿ.ಮೀ, ಕೊಡಿಗೇಹಳ್ಳಿಯಲ್ಲಿ 14 ಮಿ.ಮೀ, ಹೆಸರಘಟ್ಟದಲ್ಲಿ 13 ಮಿ.ಮೀ , ದೊಡ್ಡಗುಬ್ಬಿಯಲ್ಲಿ 12 ಮಿ.ಮೀ, ಹೊಯ್ಸಳ ನಗರದಲ್ಲಿ 11 ಮಿ.ಮೀ, ಪುಲಕೇಶಿ ನಗರದಲ್ಲಿ 10 ಮಿ.ಮೀ, ಎಚ್‌ಎಂಟಿ ವಾರ್ಡ್, ಕಾಟನ್‌ ಪೇಟೆ, ಮಾರುತಿನಗರ ಮಂದಿರ, ಗಂಟಿಗಾನಹಳ್ಳಿಯಲ್ಲಿ 9 ಮಿ.ಮೀ ವಿವಿಪುರದಲ್ಲಿ 5 ಮಿ.ಮೀ ಮಳೆಯಾಗಿದೆ.

ಕೆಂಗೃತಿ, ರಾಜರಾಜೇಶ್ವರಿನಗರಮ ಬಸವನಗುಡಿಯಲ್ಲಿ ತುಂತುರು ಮಳೆಯಾಗಿದೆ. ಜುಲೈ 1 ರಿಂದ ಜುಲೈ 25ರವರೆಗೆ ಕೇಂದ್ರಭಾಗಗಳಲ್ಲಿ 160 ಮಿ.ಮೀ, ಕೆಐಎಎಲ್‌ನಲ್ಲಿ 140 ಮಿ.ಮೀ ಮಳೆಯಾಗಿದೆ.

ಬೆಂಗಳೂರು ಕೇಂದ್ರದಲ್ಲಿ ಗರಿಷ್ಠ 28.5 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.6 ಡಿಗ್ರಿ ಸೆಲ್ಸಿಯಸ್, ಕೈಎಎಲ್‌ನಲ್ಲಿ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21.8 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇಂದು ಕೂಡ ಬೆಂಗಳೂರು ಕೇಂದ್ರ ಭಾಗ ಹಾಗೂ ಹೊರವಲಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
Generally cloudy sky. Rain very likely. Surface winds likely to be strong and gusty at times. Maximum and Minimum temperatures very likely to be around 29 and 20 degree Celsius respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X