• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್‌ ಹೆಸರು: ಸಿಎಂಗೆ ಮನವಿ

|

ಬೆಂಗಳೂರು, ಜೂನ್ 15: ಬೆಂಗಳೂರಿನ ಯಾವುದಾದರೂ ಮೆಟ್ರೋ ನಿಲ್ದಾಣಕ್ಕೆ ನಟ, ನಿರ್ದೇಶಕ ಶಂಕರ್ ನಾಗ್ ಅವರ ಹೆಸರಿಡಬೇಕು ಎನ್ನುವುದು ಕನ್ನಡಿಗರ ಬಹು ಕಾಲದ ಕೋರಿಕೆಯಾಗಿದೆ. ಆದರೆ, ಇದುವರೆಗೆ ಆ ಕನಸು ಕನಸಾಗಿಯೇ ಉಳಿದುಕೊಂಡಿದೆ.

   ಸುಶಾಂತ್ ಸಾವಿನ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು | Oneindia Kannada

   ಇದೀಗ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್‌ ಹೆಸರು ಇಡುವಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ. ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್‌ರಿಗೆ ಸಹ ಪತ್ರ ಬರೆಯಲಾಗಿದೆ.

   ನನಸಾಗುವತ್ತ ಶಂಕರನಾಗ್ ಕನಸು, ನಂದಿ ಬೆಟ್ಟಕ್ಕೆ ರೋಪ್ ವೇ!

   ಮೂರು ದಶಕಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ತರಬೇಕು ಎಂಬ ದೂರದೃಷ್ಟಿಯನ್ನು ಶಂಕರ್ ನಾಗ್ ಹೊಂದಿದ್ದರು. ಶಂಕರ್ ನಾಗ್ ಕನ್ನಡ ಚಿತ್ರರಂಗ, ರಂಗಭೂಮಿಯ ಮೂಲಕ ನಟ, ನಿರ್ದೇಶಕರಾಗಿ ಯಶಸ್ಸು ಪಡೆದು ಕನ್ನಡ ಜನಮಾಸನದಲ್ಲಿ ಬೆರೆತಿದ್ದಾರೆ. ಹೀಗಾಗಿ, ಮಲ್ಲೇಶ್ವರಂ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣಕ್ಕೆ 'ಶಂಕರ್ ನಾಗ್ ಮೆಟ್ರೋ ನಿಲ್ದಾಣ' ಎಂದು ನಾಮಕರಣ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

   ಕೆಲದಿನಗಳ ಹಿಂದೆ ರೂಪೇಶ್ ರಾಜಣ್ಣ ನೇತೃತ್ವದ ಕರುನಾಡ ಸೇವಕರು ಕನ್ನಡಪರ ಸಂಘಟನೆ ರಾಜ್ಯ ಸಭಾ ಸದಸ್ಯ ಜಿಸಿ ಚಂದ್ರಶೇಖರ್ ಭೇಟಿ ಮಾಡಿ ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರು ಇಡುವ ಬಗ್ಗೆ ಚರ್ಚೆ ನಡೆಸಿ, ಮನವಿ ಮಾಡಿಕೊಂಡಿತ್ತು.

   ಈ ಮನವಿಯನ್ನು ಜಿಸಿ ಚಂದ್ರಶೇಖರ್ ಸರ್ಕಾರಕ್ಕೆ ಮುಟ್ಟಿಸಿದ್ದು, ಆದಷ್ಟು ಬೇಗ ಬೆಂಗಳೂರಿನ ಒಂದು ಮೆಟ್ರೋ ನಿಲ್ದಾಣ ಶಂಕರ್ ನಾಗ್ ಮೆಟ್ರೋ ನಿಲ್ದಾಣ ಆಗಲಿ ಎಂದು ಟ್ವೀಟ್ ಮಾಡಿದ್ದಾರೆ.

   English summary
   Rajya Sabha member GC Chandrashekar wrote a letter and requested CM Yediyurappa to put Actor Shankar Nag name for mantri square metro station.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X