ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಕ್ರಿಶ್ಚಿಯನ್, ಅವರ ನಿಜವಾದ ಹೆಸರು ಗೌರಿ ಲಂಕೇಶ್ ಪ್ಯಾಟ್ರಿಕ್!

By Prasad
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 08 : ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಅವರ ಭೀಕರ ಹತ್ಯೆ ಕರ್ನಾಟಕದ ಗಡಿಯನ್ನೂ ಮೀರಿ, ಕೇರಳ ಕೊಲ್ಕತಾವೂ ಸೇರಿದಂತೆ ಇಡೀ ದೇಶದಲ್ಲಿ ಸುದ್ದಿಯಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದ್ದು ಸರಿಯಷ್ಟೆ.

ಗೌರಿ ಲಂಕೇಶ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮಲ್ಲಿ ಅರ್ಜುನ್ ಬಂಧನಗೌರಿ ಲಂಕೇಶ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮಲ್ಲಿ ಅರ್ಜುನ್ ಬಂಧನ

ಆದರೆ, ಗೌರಿ ಲಂಕೇಶ್ ಅವರ 'ಪತ್ರಿಕ್' (ಪತ್ರಿಕೆ)ಯಲ್ಲಿ ಹಿಂದೂಗಳನ್ನು ದಮನ ಮಾಡಲಿಕ್ಕಾಗಿಯೇ ಕ್ರಿಶ್ಚಿಯನ್ ಮಿಶನರಿಗಳು ಹಣ ಹೂಡಿದ್ದರು ಮತ್ತು ಅವರು ಒಬ್ಬ ಕ್ರೈಸ್ತರಾಗಿದ್ದರೂ ಕ್ರೈಸ್ತರ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡದಿರುವುದು ಎಂದು ಕೆಲ ನಾರ್ತಿಗಳು ಪ್ರಶ್ನಿಸಿರುವುದು ಎಷ್ಟು ಸರಿ?

Gauri Lankesh was a christian - Trolls on Twitter

ಕೆಲವರು ಗೌರಿಯವರ ನಿಜವಾದ ಹೆಸರು ಗೌರಿ ಲಂಕೇಶ್ ಪ್ಯಾಟ್ರಿಕ್ ಆಗಿದ್ದು, ಅವರು ಕ್ರಿಶ್ಚಿಯನ್ ಆಗಿದ್ದರೂ ಅವರನ್ನು ಯಾವ ಸುದ್ದಿಪತ್ರಿಕೆಗಳು ಕೂಡ ಕ್ರೈಸ್ತ ಧರ್ಮದವರು ಅಂತ ಬರೆಯದವರು ನಾಚಿಕೆಗೇಡು, ಬ್ಲಡಿ ಪೇಡ್ ಮೀಡಿಯಾ ಎಂದೆಲ್ಲೆ ಕೆಲವರು ಜರಿದಿದ್ದಾರೆ.

ತಾವು ಕ್ರಿಶ್ಚಿಯನ್ (ಗೌರಿ ಲಂಕೇಶ್ ಪ್ಯಾಟ್ರಿಕ್) ಆಗಿದ್ದರೂ ಗೌರಿ ಲಂಕೇಶ್ ಅವರು ತಮ್ಮ ಧರ್ಮವನ್ನು ಎಲ್ಲರಿಂದ ಮರೆಮಾಚಿದ್ದರು ಎಂದು ಹಿಂದಿ ಮಾತ್ರ ಬಲ್ಲ ವರ್ಗವೊಂದು ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿತ್ತು. ಇನ್ನು ಕನ್ನಡ ನೆಟ್ಟಿಗರು ಬಿಡ್ತಾರಾ. ಅದು ಹಾಗಲ್ಲ ತಮ್ಮ ಅದು ಹೀಗೆ ಎಂದು ಸರೀ ತರಾಟೆಗೆ ತೆಗೆದುಕೊಂಡಿದ್ದಾರೆ.

ರತಿ ವಿಜ್ಞಾನ ದರ್ಪಣ, ಲಂಕೇಶ್ ಮತ್ತು ಆ ದಿನಗಳುರತಿ ವಿಜ್ಞಾನ ದರ್ಪಣ, ಲಂಕೇಶ್ ಮತ್ತು ಆ ದಿನಗಳು

ಗೌರಿಯವರನ್ನು ಮತ್ತು ಅವರು ನಡೆಸುತ್ತಿದ್ದ ಗೌರಿ ಲಂಕೇಶ್ ಪತ್ರಿಕೆಯನ್ನು ಬಲ್ಲವರು, ಇಂಥ 'ವಿಚಾರವಾದಿ'ಗಳನ್ನು ಮನಸ್ಸಿಗೆ ಬಂದಂತೆ ಝಾಡಿಸಿದ್ದಾರೆ. ಅವರದು ಪತ್ರಿಕ್ ಅಲ್ಲ ಪತ್ರಿಕೆ, ಅವರ ಹೆಸರು ಪ್ಯಾಟ್ರಿಕ್ ಅಲ್ಲ, ಅಲ್ಲಿ ಬರೆದಿರುವುದು ಪತ್ರಿಕೆ ಅಂದರೆ ನ್ಯೂಸ್ ಪೇಪರ್ ಎಂದು ವಿವರಣೆ ನೀಡಬೇಕಾಯಿತು.

ಕೆಲವರಂತೂ ಅವರು ಕ್ರಿಶ್ಚಿಯನ್ ಆಗಿದ್ದಕ್ಕಾಗಿಯೇ ಅವರನ್ನು ಕ್ರೈಸ್ತ ಪದ್ಧತಿಯಂತೆ ನೆಲದಲ್ಲಿ ಹೂಳಲಾಯಿತು ಎಂದು ಟೀಕಿಸಿದ್ದರು. ಲಿಂಗಾಯತರೂ ಕೂಡ ಅವರ ಪದ್ಧತಿಯಂತೆ ಅಸುನೀಗಿದವರನ್ನು ನೆಲದಲ್ಲಿ ಹೂಳುತ್ತಾರೆ ಎಂಬ ಅರಿವಿಲ್ಲದೆ ಬಾಯಿಗೆ ಬಂದಂತೆ ಟ್ವೀಟ್ ಮಾಡಿದ್ದಾರೆ.

ತಾವು ಸ್ವತಃ ಲಿಂಗಾಯತರಾಗಿದ್ದರೂ ಗೌರಿ ಲಂಕೇಶ್ ಅವರು ಲಿಂಗಾಯತ ಧರ್ಮದಲ್ಲಿ ನಂಬಿಕೆ ಇಟ್ಟಿರಲಿಲ್ಲ. ಅವರ ಇಚ್ಛೆಯಂತೆ ಅಂತ್ಯ ಸಂಸ್ಕಾರ ಮಾಡುವಾಗ ಲಿಂಗಾಯತ ಧರ್ಮದಂತೆ ಯಾವ ಸಂಪ್ರದಾಯವನ್ನೂ ಪಾಲಿಸಲಿಲ್ಲ. ನೇರವಾಗಿ ಅವರನ್ನು ಹುಗಿಯಲಾಯಿತು.

ಈ ನಡುವೆ ಗೌರಿಯವರ ಹತ್ಯೆಯನ್ನು ಸಂಭ್ರಮಿಸಿ ಟ್ರೋಲ್ ಮಾಡುತ್ತಿರುವವರನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯನಿರತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಥವರನ್ನು ಮೋದಿಯವರು ಕೂಡಲೆ ಅನ್ ಫಾಲೋ ಮಾಡಬೇಕೆಂದೂ ಬೇಡಿಕೆ ಇಟ್ಟಿದ್ದರು.

English summary
The name of her newspaper ‘Gauri Lankesh Patrike’ was wrongly read as ‘Patrick’ by some Hindi trolls and Gauri was tried to be passed off as a Christian. The trolls felt she was buried because she was a Christian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X