ಗೌರಿ ಹತ್ಯೆ : ಸಿಡಿದ ಆ ನಾಲ್ಕನೇ ಗುಂಡು ಗುರಿ ತಪ್ಪಿದ್ದರೆ!
ಬೆಂಗಳೂರು, ಸೆಪ್ಟೆಂಬರ್ 18 : ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿದ್ದು ಯಾರು? ಈ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಭೇದಿಸಲು ಪಣ ತೊಟ್ಟಂತೆ ಕರ್ನಾಟಕ ಪೊಲೀಸರ ವಿಶೇಷ ತನಿಖಾ ದಳ ಕೆಲಸ ಮಾಡುತ್ತಿದೆ.
ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದ ಮುಂದೆ ಗುಂಡಿನ ದಾಳಿಗೊಳಗಾಗಿ (ಸೆಪ್ಟೆಂಬರ್ 5) ಗೌರಿ ಲಂಕೇಶ್ ಹತ್ಯೆಯಾಗಿ ಎರಡು ವಾರ ಕಳೆಯುತ್ತ ಬಂದಿದ್ದರೂ ಅವರನ್ನು ಕೊಂದವರು ಇಂಥವರೇ ಎಂದು ನಿಖರವಾಗಿ ಹೇಳಲು ವಿಶೇಷ ತನಿಖಾ ದಳಕ್ಕೆ ಸಾಧ್ಯವಾಗಿಲ್ಲ.
ನಕ್ಸಲರು ಕೊಂದಿರಬಹುದಾ ಅಥವಾ ಬಲಪಂಥೀಯರು ಹತ್ಯೆಗೈದಿರಬಹುದಾ ಅಥವಾ ಇದು ಸುಪಾರಿ ಕಿಲ್ಲರ್ಸ್ ಗಳ ಕೈವಾಡವಾ ಅಥವಾ ಕಲಬುರ್ಗಿ ಹಂತಕರೇ ಇವರನ್ನೂ ಗುಂಡಿಟ್ಟರಾ ಎಂಬ ತಲೆಬುಡವಿಲ್ಲದ ವ್ಯಾಖ್ಯಾನಗಳು ತೇಲಿಬರುತ್ತಿರುವಾಗಲೇ ತನಿಖಾ ದಳದವರು ಇಂಚಿಂಚೇ ಆಗಿ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ಕತ್ತಲಲ್ಲಿ ನಡೆದ ಆ ಭೀಕರ ಹತ್ಯೆಯನ್ನು ಸೆರೆಹಿಡಿದಿರುವ ಸಿಸಿಟಿವಿ ಫುಟೇಜನ್ನು ಮತ್ತೆಮತ್ತೆ ಪರಿಶೀಲಿಸುತ್ತಿರುವ ಪೊಲೀಸರು ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ಪತ್ತೆ ಹಚ್ಚಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಆ ಸಿಸಿಟಿವಿ ಫುಟೇಜಲ್ಲಿ ಹಂತಕ ಕಂಡಿದ್ದು ಕೇವಲ 4 ಸೆಕೆಂಡುಗಳು ಮಾತ್ರ.
ಗೌರಿಯನ್ನು ಬಲಿ ಪಡೆದವ ನಿಪುಣ ಹಂತಕನಾ ಅಥವಾ ಪರಿಣತಿ ಇಲ್ಲದವನಾ? ಆಗ ಅಲ್ಲಿ ಇದ್ದದ್ದು ಎಷ್ಟು ಜನ? ಆ ಹಂತಕ ಗೌರಿಯನ್ನು ಕೊಂದದ್ದು ಹೇಗೆ ಇತ್ಯಾದಿ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ದಿ ಕ್ವಿಂಟ್ ಪ್ರಕಟಿಸಿರುವ ಅದರ ವಿವರಗಳು ಮುಂದಿನಂತಿವೆ...

ಹಂತಕ ಗೌರಿಯನ್ನು ಕೊಂದಿದ್ದು ಹೇಗೆ?
ಗೌರಿಗೆ ಮೊದಲ ಗುಂಡು ಸಿಡಿಸುವ ಕೆಲವೇ ಸೆಕೆಂಡುಗಳ ಮುನ್ನ ಹಂತಕ ಅತ್ಯಂತ ಪರ್ಫೆಕ್ಟಾದ ಪೊಸೀಶನ್ ತೆಗೆದುಕೊಂಡಿದ್ದಾನೆ. ಆತ ತನ್ನ ಎಡಗಾಲನ್ನು ಮುಂದಿಟ್ಟು, ಸ್ವಲ್ಪ ಮಣಿಸಿದ್ದಾನೆ. ಎಡಗೈಯನ್ನು ಪಿಸ್ತೂಲಿಗೆ ಆಧಾರವಾಗಿಟ್ಟುಕೊಂಡು ಬಲಗೈನಿಂದ ಟ್ರಿಗರ್ ಎಳೆದಿದ್ದಾನೆ. ತರಬೇತಿ ಪಡೆದ ಅತ್ಯಂತ ನಿಪುಣ ಗುರಿಕಾರ ಮಾತ್ರ ಈ ರೀತಿ ಗುಂಡು ಹಾರಿಸಬಲ್ಲ ಎಂಬ ತೀರ್ಮಾನಕ್ಕೆ ತನಿಖಾ ದಳ ಬಂದಿದೆ.

ಕಲಬುರ್ಗಿ, ಗೌರಿಯನ್ನು ಕೊಂದವರು ಒಬ್ಬರೇನಾ?
ಪ್ರತಿಯೊಂದು ಬಂದೂಕಿನಿಂದ ಹಾರಿದ ಗುಂಡೂ ವಿಭಿನ್ನ ಗುರುತನ್ನು ಮೂಡಿಸಿರುತ್ತದೆ. ವಿಭಿನ್ನ ಬಂದೂಕುಗಳಿಂದ ಹಾರಿರುವ ಗುಂಡುಗಳನ್ನು ಪರಿಶೀಲಿಸಿ ನೋಡಿದಾಗ ಮಾತ್ರ ಎರಡು ಬೇರೆಬೇರೆ ಹತ್ಯೆಗಳನ್ನು ಒಂದೇ ರೀತಿಯ ಬಂದೂಕಿನಿಂದ ಮಾಡಿರಬಹುದಾ ಎಂಬುದು ತಿಳಿಯುತ್ತದೆ. ಕಲಬುರ್ಗಿ ಹತ್ಯೆಗೆ ಬಳಸಿದ ಬಂದೂಕಿನಿಂದ ಹಾರಿದ ಗುಂಡಿನ ಮಾದರಿ ಎಸ್ಐಟಿ ಪೊಲೀಸರಿಗೆ ಇನ್ನೂ ಸಿಕ್ಕಿಲ್ಲ. ಹೀಗಾಗಿ ಕಲಬುರ್ಗಿ ಮತ್ತು ಗೌರಿ ಹತ್ಯೆ ಒಂದೇ ರೀತಿಯ ಬಂದೂಕಿನಿಂದ ಆಗಿರಬಹುದಾ ಎಂದು ಹೇಳುವುದು ಕಷ್ಟಸಾಧ್ಯ ಅಂತಾರೆ ಪೊಲೀಸರು.

ಕಲಬುರ್ಗಿ ಹತ್ಯೆಯಲ್ಲಿ ಸಿಕ್ಕಿದ ಕಾರ್ಟ್ರಿಜ್
ವಿಧಿವಿಜ್ಞಾನ ಇಲಾಖೆಯ ಬಳಿ ಕಲಬುರ್ಗಿ ಹತ್ಯೆಗೆ ಬಳಸಿದ ಗುಂಡಿನ ಛಾಯಾಚಿತ್ರಗಳು ಮಾತ್ರ ಇವೆ. ಲೈವ್ ಕಾರ್ಟ್ರಿಜ್ ಅನ್ನು ಛಾಯಾಚಿತ್ರದೊಂದಿಗೆ ತುಲನೆ ಮಾಡಿ ನೋಡಲು ಸಾಧ್ಯವಿಲ್ಲ. ಕಲಬುರ್ಗಿ ಹತ್ಯೆಯ ಸಮಯದಲ್ಲಿ ಸಿಕ್ಕಿದ ಕಾರ್ಟ್ರಿಜ್ ಅನ್ನು ನೀಡುವಂತೆ ತನಿಖಾ ದಳ ಸಿಬಿಐನನ್ನು ಕೋರಿಕೊಂಡಿದೆ. ಅಲ್ಲಿಯವರೆಗೆ, ಗೌರಿಯನ್ನು ಕೊಂದವರು ಮತ್ತು ಕಲಬುರ್ಗಿಯನ್ನು ಕೊಂದವರು ಒಬ್ಬರೇ ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲ.

ಮತ್ತಷ್ಟು ಕುತೂಹಲಕಾರಿ ಸಂಗತಿಗಳೆಂದರೆ...
ಎಸ್ಐಟಿಗೆ ತಿಳಿದುಬಂದಿರುವ ಮತ್ತಷ್ಟು ಕುತೂಹಲಕಾರಿ ಸಂಗತಿಗಳೆಂದರೆ, ಗುಂಡನ್ನು 7.65 ಎಂಎಂ ಪಿಸ್ತೂಲಿನಿಂದ ಹಾರಿಸಲಾಗಿದೆ. ಈ ಹತ್ಯೆಗೆ ಬಳಸಲಾದ ಗುಂಡುಗಳನ್ನು ಮಹಾರಾಷ್ಟ್ರದ ಖಡ್ಕಿ ಎಂಬಲ್ಲಿ ಉತ್ಪಾದಿಸಲಾಗಿದೆ. ಗೌರಿಯವರ ದೇಹವನ್ನು ಮೂರು ಗುಂಡುಗಳು ಹೊಕ್ಕಿದ್ದರೆ, ಇನ್ನೊಂದು ಗುರಿ ತಪ್ಪಿದೆ. ಗುಂಡನ್ನು ಎರಡರಿಂದ 7 ಮೀಟರ್ ಅಂತರದಿಂದ ಹಾರಿಸಲಾಗಿದೆ.

ನಾಲ್ಕನೇ ಗುಂಡು ಹಾರಿರದಿದ್ದರೆ...
ಹಂತಕ ಮೂರೇ ಗುಂಡನ್ನು ಹಾರಿಸಿದ್ದರೆ ಗೌರಿ ಬಹುಶಃ ಬದುಕುಳಿಯುತ್ತಿದ್ದರು. ಮೊದಲನೇ ಗುಂಡು ಅವರ ದೇಹವನ್ನು ಗಾಯಗೊಳಿಸಿದರೆ, ಎರಡನೇ ಗುಂಡು ದೇಹ ಹೊಕ್ಕಿದ್ದರೂ ಪ್ರಮುಖ ಅಂಗಕ್ಕೆ ಹಾನಿಯುಂಟು ಮಾಡಿಲ್ಲ. ಮೂರನೇ ಗುಂಡು ಗುರಿ ತಪ್ಪಿದೆ. ಆದರೆ, ನಾಲ್ಕನೇ ಗುಂಡು ಅವರ ಬಲಭುಜದ ಕಡೆಯಿಂದ ಎದೆಯನ್ನು ಹೊಕ್ಕು ಅವರ ಹೃದಯವನ್ನು ಛಿದ್ರಛಿದ್ರ ಮಾಡಿದೆ. ಗುಂಡು ದೇಹ ಹೊಕ್ಕ ನಂತರ ತನ್ನ ಆಕಾರ ಕಳೆದುಕೊಂಡು ಬಿಡುತ್ತದೆ. ಆದರೆ, ಅವರ ದೇಹದಿಂದ ಆಕಾರ ಕಳೆದುಕೊಳ್ಳದ ಗುಂಡು ಸಿಕ್ಕಿದ್ದು, ಇದು ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು.

ಸುಪಾರಿ ಹಂತಕರ ಕೈವಾಡವಿರಲಾರದು
ಈ ಕೃತ್ಯ ಸುಪಾರಿ ಹಂತರಿಂದ ಆಗಿರಬಹುದಾ ಎಂಬ ಸಂಗತಿಯನ್ನು ಬಗೆಯಲು ಎಸ್ಐಟಿ ಯತ್ನಿಸುತ್ತಿದೆ. ಅವರ ಪ್ರಕಾರ, ಒಂದು ಸಂಗತಿಯಂತೂ ಸತ್ಯ. ಅದು, ಹಂತಕ ನಿಪುಣ ಗುರಿಕಾರ. ಸುಪಾರಿ ಹಂತಕರಾಗಿದ್ದರೆ ಅವರು ಹತ್ಯೆಗಾಗಿ ಅತ್ಯಾಧುನಿಕ ಆಯುಧಗಳನ್ನು ಬಳಸುತ್ತಾರೆ. ಕೆಲ ಭೂಗತ ದೊರೆಗಳೊಂದಿಗೆ ಮಾತನಾಡಿದಾಗ, ಸುಪಾರಿ ಹಂತಕರು ಮಕ್ಕಳು ಮತ್ತು ಹೆಣ್ಣುಮಕ್ಕಳನ್ನು ಹತ್ಯೆಗೈಯುವುದಿಲ್ಲ ಎಂಬುದು ಬಯಲಾಗಿದೆ.

ಹೆಲ್ಮೆಂಟ್ ಧರಿಸಿದ್ದೇ ತೊಡಕು
ಸಿಸಿಟಿವಿ ಫುಟೇಜ್ ನೋಡಿದಾಗ ಹಂತಕ ತಿಳಿ ಬಣ್ಣದ ಅಂಗಿ ತೊಟ್ಟಿದ್ದ ಮತ್ತು ಇನ್ ಶರ್ಟ್ ಮಾಡಿದ್ದ ಎಂದಷ್ಟೇ ತಿಳಿದುಬಂದಿದೆ. ಆತನ ಎತ್ತರವೆಷ್ಟಿತ್ತು, ಆತನ ದೈಹಿಕ ವಿವರಗಳು ಹೇಗಿದ್ದವು ಎಂಬುದನ್ನು ತಿಳಿಯಲು ತಜ್ಞರ ಮೊರೆಹೋಗಿದ್ದಾರೆ ಪೊಲೀಸರು. ಹಂತಕ ಕಪ್ಪುಬಣ್ಣದ ಹೆಲ್ಮೆಟ್ ಧರಿಸಿದ್ದು ಆತನ ಚೆಹರೆಯನ್ನು ಅರಿಯಲು ತೊಡಕಾಗಿದೆ.

ಗೌರಿಯ ಸಿದ್ಧಾಂತವೇನಿತ್ತು
ಹಂತಕನ ಉದ್ದೇಶವೇನಿತ್ತು ಎಂಬುದು ತನಿಖೆಯ ಒಂದು ಅಂಶವಾದರೂ, ಸಾಕ್ಷ್ಯಗಳಿಲ್ಲದೆ ಇಂಥವರೇ ಹತ್ಯೆಗೈದಿದ್ದಾರೆ ಎಂದು ಹೇಳುವುದು ಸಮಂಜಸವಲ್ಲ ಎನ್ನುತ್ತಾರೆ ತನಿಖಾಧಿಕಾರಿಯೊಬ್ಬರು. ಶಂಕಿತ ಹಂತಕನನ್ನು ಬಂಧಿಸಿದಾಗ ಮಾತ್ರ ಆತನ ಉದ್ದೇಶವೇನಿತ್ತು ಎಂಬುದು ತಿಳಿದುಬರಲಿದೆ. ಗೌರಿಯವರ ಸಿದ್ಧಾಂತವೇನಿತ್ತು, ಯಾರ್ಯಾರ ವಿರುದ್ಧ ಬರೆಯುತ್ತಿದ್ದರು, ಯಾರ ಮೇಲೆ ಕೆಂಡ ಕಾರುತ್ತಿದ್ದರು ಎಂಬುದು ತನಿಖೆಗೆ ಸಹಾಯ ಮಾಡುತ್ತದಾದರೂ, ಹಂತಕನನ್ನು ಸೆರೆಹಿಡಿಯಲು ಸಹಾಯ ಮಾಡುವುದಿಲ್ಲ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications