ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಲಂಕೇಶ್ ಹತ್ಯೆ : 7.65 ಎಂಎಂ ಪಿಸ್ತೂಲ್ ನಕ್ಸಲರ ಮೆಚ್ಚಿನ ಆಯುಧ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಯಾರು ಹತ್ಯೆ ಮಾಡಿದ್ದಾರೆ? ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಹತ್ಯೆಗೆ ಬಳಸಿರುವ ಪಿಸ್ತೂಲ್ ನಕ್ಸಲರು ಬಳಸುವ ಮಾದರಿಯದ್ದಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಹಂತಕರು 15 ದಿನದಿಂದ ಗೌರಿ ಲಂಕೇಶ್ ಹಿಂಬಾಲಿಸುತ್ತಿದ್ದರುಹಂತಕರು 15 ದಿನದಿಂದ ಗೌರಿ ಲಂಕೇಶ್ ಹಿಂಬಾಲಿಸುತ್ತಿದ್ದರು

ಎಸ್‌ಐಟಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದೆ. 7.65 ಎಂಎಂ ಪಿಸ್ತೂಲ್‌ನಿಂದ ಗುಂಡು ಹಾರಿಸಲಾಗಿದೆ ಎಂಬುದು ಸದ್ಯದ ಮಾಹಿತಿ. ಇಂತಹ ಬಂದೂಕನ್ನು ನಕ್ಸಲರು ಬಳಸುವುದು ಹೆಚ್ಚು. ಈ ಆಯಾಮದ ಕುರಿತು ತನಿಖೆ ನಡೆದಿದೆ. ಯಾವುದೇ ಅಂತಿಮ ನಿರ್ಧಾರಕ್ಕೆ ಇನ್ನೂ ಬರಲಾಗಿಲ್ಲ.

Gauri Lankesh murder: 7.65 mm is also a naxalite's choice of weapon

ಗೌರಿ ಲಂಕೇಶ್ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು 7.65 ಎಂಎಂ ಪಿಸ್ತೂಲ್‌ನಿಂದ ಗುಂಡು ಹಾರಿದೆ. ದೇಹಕ್ಕೆ ಆಗಿರುವ ಗಾಯವನ್ನು ಪರಿಶೀಲಿಸಿದರೆ ಬೇರೆ ಮಾದರಿ ಆಯುಧ ಬಳಸಿಲ್ಲ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಿದ್ದಾರೆ.

ಎಂ.ಎಂ.ಕಲಬುರ್ಗಿ ಅವರ ಹತ್ಯೆಗೂ ಗೌರಿ ಲಂಕೇಶ್ ಅವರ ಹತ್ಯೆಗೂ ಸಾಮ್ಯತೆ ಇದೆ. ಕಲಬುರ್ಗಿ ಅವರ ಹತ್ಯೆಗೂ ಇದೇ ಮಾದರಿಯ ಪಿಸ್ತೂಲ್ ಬಳಕೆ ಮಾಡಲಾಗಿತ್ತು. ಈ ಪಿಸ್ತೂಲ್ ಸುಲಭವಾಗಿ ಸಿಗುತ್ತದೆ ಮತ್ತು ಕೆಲವು ವರ್ಷಗಳ ನಕ್ಸಲ್ ಕಾರ್ಯಾಚರಣೆಯಲ್ಲಿ ಇದನ್ನು ಬಳಸಿರುವ ಉದಾಹರಣೆಗಳಿವೆ.

ಮೂರು ಗುಂಡುಗಳು ಗೌರಿ ಲಂಕೇಶ್‌ ದೇಹ ಹೊಕ್ಕಿವೆಮೂರು ಗುಂಡುಗಳು ಗೌರಿ ಲಂಕೇಶ್‌ ದೇಹ ಹೊಕ್ಕಿವೆ

ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸಾರೆ, ನರೇದ್ರ ದಾಬೋಲ್ಕರ್ ಹತ್ಯೆಗೆ ಒಂದೇ ಮಾದರಿಯ ಆಯುಧ ಬಳಸಲಾಗಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ಪ್ರಕಾರ ಸುಮಾರು 10 ಅಡಿ ದೂರದಿಂದ ಗುಂಡಿನ ದಾಳಿ ನಡೆಸಲಾಗಿದೆ. ಗೇಟ್ ಮತ್ತು ಅವರ ಮನೆ ಬಾಗಿಲಿನ ನಡುವೆ ಈ ದಾಳಿ ನಡೆಸಿದೆ.

ಪತ್ರಕರ್ತೆ ಮತ್ತು ಚಿಂತಕಿ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಮಂಗಳವಾರ ರಾತ್ರಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

English summary
The investigations being conducted into the death of journalist Gauri Lankesh has found similarities with the killing of M M Kalburgi. However another interesting find is that the weapon of choice is also preferred by naxalites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X