ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ಒಂದು ಸಿಹಿ,ಕಹಿ ಸುದ್ದಿ

By Nayana
|
Google Oneindia Kannada News

ಬೆಂಗಳೂರು, ಜು.24: ಬಿಬಿಎಂಪಿಯು ಪೌರಕಾರ್ಮಿಕರಿಗೆ ಮತ್ತೊಂದು ಶಾಕ್‌ ನೀಡಿದೆ, 60 ವರ್ಷ ಮೇಲ್ಪಟ್ಟ ಪೌರಕಾರ್ಮಿಕರಿಗೆ ನಿವೃತ್ತಿ ನೀಡಿ ಹೊಸ ಪೌರಕಾರ್ಮಿಕರನ್ನು ನೇಮಿಸಲು ನಿರ್ಧರಿಸಿದೆ.

ವೇತನ ಪಾವತಿಯಲ್ಲಿನ ವಿಳಂಬ ಹಾಗೂ ಕೆಲಸದಿಂದ ತೆಗೆಯುವ ಭೀತಿಯಿಂದ ಪೌರಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡ ನಂತರ ಪೌರಕಾರ್ಮಿಕರ ಕ್ಷೇಮದ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸುತ್ತಿದೆ.

ಪೌರ ಕಾರ್ಮಿಕರಿಗೆ ಕೊನೆಗೂ ವೇತನ ಬಿಡುಗಡೆ ಮಾಡಿದ ಬಿಬಿಎಂಪಿ!ಪೌರ ಕಾರ್ಮಿಕರಿಗೆ ಕೊನೆಗೂ ವೇತನ ಬಿಡುಗಡೆ ಮಾಡಿದ ಬಿಬಿಎಂಪಿ!

ಪೌರಕಾರ್ಮಿಕ ಕೆಲಸಕ್ಕೆ ವರ್ಷದಿಂದೀಚೆಗೆ ಸೇರಿದವರಿಗೆ ನೆಲೆ ಕಲ್ಪಿಸಿಕೊಡಲು ಬಿಬಿಎಂಪಿ ಈ ನಿರ್ಧಾರ ತೆಗೆದುಕೊಂಡಿದೆ. ಮೇಯರ್‌ ಸಂಪತ್‌ರಾಜ್‌ 8 ವಲಯಗಳಲ್ಲೂ ಪೌರಕಾರ್ಮಿಕರ ವೇತನ ಪಾವತಿ ಕುರಿತಂತೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಅಲ್ಲದೆ ಅವರ ಹಿತ ಕಾಪಾಡುವಂತೆ ತಾಕೀತು ಮಾಡುತ್ತಿದ್ದಾರೆ.

Gate pass for above 60 aged poura karmikas

ದಕ್ಷಿಣ ವಲಯ ಹೊರತುಪಡಿಸಿ ಇತರೆ ವಲಯಗಳಲ್ಲಿ ಈಗಾಗಲೇ ಅಧಿಕಾರಿಗಳ ಸಭೆಯನ್ನು ಮೇಯರ್ ನಡೆಸಿದ್ದಾರೆ. ಈ ವೇಳೆ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಪೌರಕಾರ್ಮಿಕರ ಕೆಲಸ ಮಾಡಲು ಅಶಕ್ತರಾದವರ ಪಟ್ಟಿ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.

ಜನಪ್ರತಿನಿಧಿಗಳ ಸಹಾಯಕರು ಚಾಲಕರು, ಸಂಬಂಧಿಕರು ಕೂಡ ಪೌರಕಾರ್ಮಿಕರೆಂದು ಹೇಳಿ ಬಯೋಮೆಟ್ರಿಕ್‌ ಹಾಜರಾತಿ ನೀಡುತ್ತಿದ್ದಾರೆ. ಅವರೆಲ್ಲ ಕೆಲಸ ಮಾಡದೆ ಕೇವಲ ವೇತನ ಪಡೆಯುತ್ತಿದ್ದಾರೆ. ಅಂತವರನ್ನು ಗುರುತಿಸಿ ಎಲ್ಲರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ನಿರ್ದೇಶನ ನೀಡಿದ್ದಾರೆ.

English summary
Bbmp has decided to give retirement for poura karmikas those who turned 60. In their place fresh appointment will be done for younger one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X