ಕಸ ವಿಂಗಡಣೆ : ಜನ ಪಾಸ್, ಸರ್ಕಾರ ಫೇಲ್ : ಸಿಎನ್ ಅಶ್ವತ್ಥ ನಾರಾಯಣ
ಬೆಂಗಳೂರು, ಮಾರ್ಚ್ 02 : ಜನರು ವಿಂಗಡಿಸಿ ನೀಡಿದ ತ್ಯಾಜ್ಯವನ್ನು ವಿಲೇವಾರಿ ಮಾಡುವ ವಿಷಯದಲ್ಲಿಯೂ ಸರ್ಕಾರ ಹಾಗು ಬಿಬಿಎಂಪಿ ನಿರಂತರವಾಗಿ ವೈಫಲ್ಯವನ್ನು ಕಾಣುತ್ತಿದೆ ಎಂದು ಮಲ್ಲೇಶ್ವರಂ ಶಾಸಕರಾದ ಡಾ. ಸಿ. ಎನ್. ಅಶ್ವತ್ ನಾರಾಯಣ್ ಅವರು ಆರೋಪಿಸಿದ್ದಾರೆ.
ತನ್ನ ಸೋಲನ್ನು ಒಪ್ಪಿಕೊಳ್ಳದ ಸರ್ಕಾರ ಯಾವುದೇ ಸತ್ಯಾಂಶವಿಲ್ಲದ/ವಾಸ್ತವಕ್ಕೆ ನಿಲುಕದ ಪೊಳ್ಳು ಸಮೀಕ್ಷೆಯ ನಾಟಕವಾಡಿ, ಜನರ ವಿಶ್ವಾಸ ಗಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಎಂದು ಅಶ್ವತ್ ನಾರಾಯಣ್ ಅವರು ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ನಗರಾಭಿವೃದ್ದಿ ಸಚಿವರು, ಬಿಬಿಎಂಪಿ ಆಯುಕ್ತರು ಮತ್ತು ಜಂಟಿ ಆಯುಕ್ತರು, ಘನ ತ್ಯಾಜ್ಯ ತಂಡ ವಾರ್ಡ್‍ಗಳಲ್ಲಿ ಕಸ ವಿಂಗಡಣೆ ಪ್ರಮಾಣದ ಸಮೀಕ್ಷೆ ಮಾಡಿದ್ದು, 5 ವಾರ್ಡ್‍ಗಳಲ್ಲಿ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಿದ್ದಾರೆ.

ಬೊಮ್ಮನಹಳ್ಳಿ, ದಾಸರಹಳ್ಳಿ ಮತ್ತು ಯಲಹಂಕ ವಲಯದಲ್ಲಿ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ. ಆರ್.ಆರ್. ನಗರ, ದಕ್ಷಿಣ, ಪಶ್ಚಿಮ, ಪೂರ್ವ ಮತ್ತು ಮಹದೇವಪುರ ವಲಯಗಳಲ್ಲಿ ಶೇ.40ರಿಂದ 60ರಷ್ಟು ಪ್ರಮಾಣದಲ್ಲಿ ಕಸ ವಿಂಗಡಣೆಯಾಗುತ್ತಿದೆ.
ಅಧಿಕಾರಿಗಳ ಹೇಳಿಕೆಯಂತೆ, ಶೇ.75 ಅಂದರೆ 1143 ಟನ್ ಹಸಿ ಕಸ ಉತ್ಪತಿಯಾಗುತ್ತಿದ್ದು. ವಿಲೇವಾರಿ ಘಟಕಗಳಿಗೆ ಕೇವಲ 165ರಿಂದ 180 ಟನ್ ಮಾತ್ರ ರವಾನೆಯಾಗುತ್ತಿದೆ. ಹಾಗಾದರೇ ಉಳಿದ ಹಸಿ ಕಸ ಎಲ್ಲಿಗೆ ರವಾನಿಸಲಾಗುತ್ತಿದೆ ಅಥವಾ ನೀಡಿರುವ ಅಂಕಿಗಳು ತಪ್ಪಾಗಿದೆಯೇ? ಎಂದು ಅವರು ಸರ್ಕಾರ ಹಾಗು ಬಿಬಿಎಂಪಿಯನ್ನು ಪ್ರಶ್ನಿಸಿದರು.
ಅಲ್ಲದೇ, ಕಸ ವಿಲೇವಾರಿಯಲ್ಲಿ ಬಿ.ಬಿ.ಎಂ.ಪಿ ವೈಫಲ್ಯವನ್ನು ಜನರ ಮೇಲೆ ಹಾಕಿ, ಜನರು ಕಸ ಬೇರ್ಪಡಿಸಲು ಸಹಕರಿಸುತ್ತಿಲ್ಲ ಎಂದು ಹೇಳುವ ಅಧಿಕಾರಿಗಳು, ಬೇರ್ಪಡಿಸಿದ ಕಸ ಎಲ್ಲಿಗೆ ಹೋಗುತ್ತಿದೆ ಹಾಗೂ ಆ ಕಸ ಹೇಗೆ ವಿಲೇವಾರಿ ಯಾಗುತ್ತಿದೆ ಎಂದು ಮೊದಲು ತಿಳಿಸಲಿ ಎಂದು ಆಗ್ರಹಿಸಿದರು.

ಕಸ ವಿಂಗಡಣೆಯಲ್ಲಿ ಜನರು ಪಾಸ್, ವಿಂಗಡಿಸಿದ ಕಸ ವಿಲೇವಾರಿಯಲ್ಲಿ ಸರ್ಕಾರ ಫೇಲ್! ವಿಲೇವಾರಿಯಾಗುತ್ತಿರುವ ಹಸಿ ಕಸ 180 ಟನ್ ಮಾತ್ರ. ಉಳಿದ ಹಸಿ ಕಸ ಎಲ್ಲಿಗೆ ಹೋಗುತ್ತಿದೆ? ಬಹುತೇಕ ಸ್ಥಳಗಳ ಖಾಲಿ ನಿವೇಶನ, ಮೋರಿ, ರಸ್ತೆ ಬದಿಗಳಲ್ಲಿ ಕಸದ ರಾಶಿ ಬೀಳುತ್ತಿದ್ದು, ಹಲವೆಡೆ ಬೆಂಕಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಬಿಬಿಎಂಪಿ ಸುಮಾರು 800 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ, ಪ್ರತಿದಿನ 2800 ಟನ್ ಸಾಮರ್ಥ್ಯದ ಕಸ ವಿಲೇವಾರಿ ಘಟಕ ನಿರ್ಮಿಸಿದ್ದು, ಶೇ.7 ಸಾಮರ್ಥ್ಯ ಕೂಡ ಬಳಕೆಯಾಗುತ್ತಿಲ್ಲ. ಜನರ ತೆರಿಗೆ ಹಣದಲ್ಲಿ 1 ಕೆ.ಜಿ ಕಸ ವಿಲೇವಾರಿಗೆ ರೂ.13 ಖರ್ಚು. ಆದರೂ ಫಲಿತಾಂಶ ಮಾತ್ರ ಶೂನ್ಯ ಎಂದು ಅವರು ವ್ಯಂಗ್ಯವಾಡಿದರು.
ಬಿಬಿಎಂಪಿಯು ವಾರ್ಷಿಕ ರೂ.1632 ಕೋಟಿ ಹಣವನ್ನು ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ಖರ್ಚು ಮಾಡುತ್ತಿದೆ. ಜನರು ಬೇರ್ಪಡಿಸಿ ನೀಡಿದ ಕಸವನ್ನು ಕೂಡ ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತಿಲ್ಲ. ನಿಜವಾಗಿಯೂ ಈ ಹಣ ಕಸ ವಿಲೇವಾರಿಗೆ ಖರ್ಚು ಮಾಡಲಾಗುತ್ತಿದೆಯೆ? ಎಂದು ಅವರು ಪ್ರಶ್ನಿಸಿದರು.
ಒಂದೆಡೆ ಎಲೆಕ್ಟ್ರಿಕ್ ವಾಹನ ಖರೀದಿಸಿ ಬೆಂಗಳೂರಿನ ಮಾಲಿನ್ಯ ತಡೆಯಲು ಮುಂದಾಗಿರುವ ಸರ್ಕಾರ, ಇನ್ನೊಂದೆಡೆ ಅವೈಜ್ಞಾನಿಕ ರೀತಿ ಕಸ ವಿಲೇವಾರಿ ಮಾಡಿ, ಈ ಮೂಲಕ ಉತ್ಪತಿಯಾಗುತ್ತಿರುವ ಮಿಥೇನ್ ಅನಿಲದಿಂದ ಪರಿಸರವನ್ನು ಮತ್ತಷ್ಟು ಹಾಳುಮಾಡಲು ಮುಂದಾಗಿದೆ. ಇದು ಯಾವ ಸೀಮೆ ಪರಿಸರ ಕಾಳಜಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications