ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಗ್ಯಾಂಗ್ ವಾರ್

ಹೊಂಗಸಂದ್ರದ ಅಂಬರೀಶ್, ಶ್ರೀಧರ್ ಹಾಗೂ ಕೋಡಿಚಿಕ್ಕನಹಳ್ಳಿಯ ಕಬ್ಬಡ್ಡಿ ರಾಜಶೇಖರ, ಪ್ರಕಾಶ್ ಹಾಗೂ ಅನಿಲ್ ಮುಂತಾದವರ ಗ್ಯಾಂಗ್ ನಡುವಿನ ವೈಮನಸ್ಸು ಘಟನೆಗೆ ಪ್ರಮುಖ ಕಾರಣವಾಗಿದ್ದರೂ ರಾಜಕೀಯ ಕೈವಾಡವೂ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಆಗಿದ್ದೇನು? ಸೋಮವಾರ ರಾತ್ರಿ ಸುಮಾರು 10:30 ರ ವೇಳೆಗೆ ಹೊಂಗಸಂದ್ರ ಗ್ಯಾಂಗ್ ಕೋಡಿಚಿಕ್ಕನಹಳ್ಳಿ ಮೇಲೆ ದಾಳಿ ಮಾಡಿ ಊರಿನಲ್ಲಿದ್ದ ಕಾರುಗಳು ಹಾಗೂ ಮನೆಯ ಕಿಟಕಿಗಳು, ಅಂಗಡಿಗಳನ್ನು ಹೊಡೆದು ಹಾಕಿದ್ದಾರೆ.[ಅನೀಶ್ ಕೊಲೆ, ಭೂಗತ ಪಾತಕಿ ಕೈವಾಡವೇ?]
ಈ ದಾಳಿಗೆ ಪ್ರತಿಯಾಗಿ 11:00 ಗಂಟೆಗೆ ಕೋಡಿಚಿಕ್ಕನಹಳ್ಳಿಯ ಗ್ಯಾಂಗ್ ಹೊಂಗಸಂದ್ರದ ಮೇಲೆ ದಾಳಿ ಮಾಡಿ ಆ ಏರಿಯಾದಲ್ಲಿ ಹೊರಗೆ ನಿಲ್ಲಿಸಿದ್ದ, ವಾಹನಗಳನ್ನು ಪುಡಿ ಪುಡಿ ಮಾಡಿದೆ. ಈ ಘಟನೆಯ ಹಿಂದೆ ಸ್ಥಳೀಯ ಶಾಸಕರ ಕೈವಾಡವಿದೆ ಎಂದು ಹೇಳಲಾಗುತ್ತಿದೆ.[ಫೇಸ್ ಬುಕ್ ಬೇಡ ಅಂದಿದ್ದಕ್ಕೆ ಪ್ರಾಣ ಬಿಟ್ಟ ವಿದ್ಯಾರ್ಥಿನಿ]
ಘಟನೆ ನಡೆದು ಸುಮಾರು 2 ಗಂಟೆಯಾಗಿದ್ದರೂ ಪೊಲೀಸರು ಸ್ಥಳಕ್ಕೆ ಆಗಮಿಸದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬೊಮ್ಮನಹಳ್ಳಿಯ ಹೊರವಲಯ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.












Click it and Unblock the Notifications