ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ ಬುಕ್ ಬೇಡ ಅಂದಿದ್ದಕ್ಕೆ ಪ್ರಾಣ ಬಿಟ್ಟ ವಿದ್ಯಾರ್ಥಿನಿ

|
Google Oneindia Kannada News

ಬೆಂಗಳೂರು, ಮೇ 9 : ಫೇಸ್ ಬುಕ್ ಖಾತೆ ಡಿಲೀಟ್ ಮಾಡು ಎಂದು ಹೇಳಿದ ತಾಯಿಯ ಮಾತಿನಿಂದ ಕೋಪಗೊಂಡ ಎಂಟನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಹೊಸೂರು ರಸ್ತೆಯ ಬೆರೆಟೇನಾ ಅಗ್ರಹಾರದ ತೇಜಸ್ವಿನಿ ಎಂದು ಗುರುತಿಸಲಾಗಿದೆ.

ಬುಧವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತೇಜಸ್ವಿನಿ (14) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ ತಾಯಿ ಮನೆಗೆ ಬಂದಾಗ ಮಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

FB account

ತೇಜಸ್ವಿನಿ ತಂದೆ ದಶರಥ ತಮಿಳುನಾಡು ಮೂಲದವರಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ತಾಯಿ ಮೋಹನ ಅವರು ಕಾರ್ ಶೋರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ನೀರಜ್‌ ಎಂಬ ಗಂಡುಮಗುವಿದ್ದು ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಅವನು ಅಜ್ಜಿ ಮನೆಗೆ ಹೋಗಿದ್ದ. ತೇಜಸ್ವಿನಿ ಮಾತ್ರ ಪೋಷಕರ ಜತೆ ಉಳಿದುಕೊಂಡಿದ್ದಳು. [ಬೆಂಗಳೂರಿನ 14 ಕಳ್ಳರು ಪೊಲೀಸ್ ಬಲೆಗೆ]

ಮಂಗಳವಾರ ರಾತ್ರಿ ತೇಜಸ್ವಿನಿ ತನ್ನ ತಾಯಿಯ ಮೊಬೈಲ್‌ ಫೋನ್ ನಲ್ಲಿ ಫೇಸ್ ಬುಕ್ ಮೂಲಕ ಯಾರೊಂದಿಗೂ ಚಾಟ್ ಮಾಡುವುದನ್ನು ಅವರು ನೋಡಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ತಾಯಿ ಮಗಳಿಗೆ ಬುದ್ಧಿವಾದ ಹೇಳಿದ್ದರು. ಫೇಸ್‌ ಬುಕ್‌ ಮುಂತಾದ ಸಾಮಾಜಿಕ ತಾಣಗಳಲ್ಲಿ ಚಾಟ್‌ ಈ ವಯಸ್ಸಿಗೆ ಒಳ್ಳೆಯದಲ್ಲ, ಅಕೌಂಟ್ ಡಿಲೀಟ್ ಮಾಡು ಎಂದು ತಿಳಿಸಿದ್ದರು. [ಫೇಲ್ ಎಂದು ತಮಾಷೆ ಮಾಡಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ]

ಬುಧವಾರವೂ ತೇಜಸ್ವಿನಿ ತಾಯಿ, ಫೇಸ್ ಬುಕ್ ಖಾತೆ ಡಿಲೀಟ್ ಮಾಡಿ, ವಿದ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಸೂಚಿಸಿದ್ದರು. ಇದರಿಂದ ಮನನೊಂದ ತೇಜಸ್ವಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
A 14-year-old girl Tejaswini committed suicide at her home in Chowdeshwari Layout near Parappana Agrahara on Wednesday after her mother pestered her to delete her Facebook account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X