• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಅತ್ಯಾಚಾರ ಪ್ರಕರಣದ ಸಂತ್ರಸ್ತ ಯುವತಿ ಕಲ್ಲಿಕೋಟೆಯಲ್ಲಿ ಪತ್ತೆ

|

ಬೆಂಗಳೂರು, ಮೇ 28: ರಾಜಧಾನಿ ಬೆಂಗಳೂರಿನಲ್ಲಿ ನಿರ್ಭಯಾ ರೀತಿಯ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟಲ್ ಇರಿಸಿ ವಿಕೃತಿ ಮರೆದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತ ಯುವತಿಯನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದು, ಕೇರಳದ ಕಲ್ಲಿಕೋಟೆಯಿಂದ ಸಂತ್ರಸ್ತೆಯನ್ನು ಕರೆತರಲಾಗುತ್ತಿದೆ.

ಅತ್ಯಾಚಾರಿ ಆರೋಪಿಗಳಿಗೆ ಕಠಿಣ ಶಿಕ್ಷೆ; ಸಿಎಂ ಯಡಿಯೂರಪ್ಪಅತ್ಯಾಚಾರಿ ಆರೋಪಿಗಳಿಗೆ ಕಠಿಣ ಶಿಕ್ಷೆ; ಸಿಎಂ ಯಡಿಯೂರಪ್ಪ

ಅತ್ಯಾಚಾರ ಘಟನೆ ಬಳಿಕ ಸಂತ್ರಸ್ತೆ ಯುವತಿ ತನ್ನ ಸ್ನೇಹಿತ ಲಕ್ಷ್ಮೀಲಾಲ್ ಮನೆಯಲ್ಲಿ ಆಶ್ರಯ ಪಡೆದಿದ್ದರು. ತನಿಖಾ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರಿಗೆ ಸಂತ್ರಸ್ತೆ ಕೇರಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ್ದ ಇನ್ಸ್​​ಪೆಕ್ಟರ್, ಮಹಿಳಾ ಪಿಎಸ್ಐ ತಂಡ ಸಂತ್ರಸ್ತೆಯನ್ನು ಪತ್ತೆ ಹಚ್ಚಿದ್ದಾರೆ.

ಇನ್ನು ಗ್ಯಾಂಗ್​ರೇಪ್, ಹಲ್ಲೆ ಪ್ರಕರಣ ಸಂಬಂಧ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದ್ದು, ಶುಕ್ರವಾರ ಬೆಳಗ್ಗೆ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸುವಾಗ ಪರಾರಿಯಾಗಲು ಪ್ರಯತ್ನಿಸಿದ ಇಬ್ಬರಿಗೆ ಆರೋಪಿಗಳ ಗುಂಡೇಟು ಹಾರಿಸಿದ್ದಾರೆ.

6 ಆರೋಪಿಗಳ ಬಂಧಿತರ ಪೈಕಿ ಇಬ್ಬರು ಮಹಿಳೆಯರಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದವರೆಲ್ಲ ಒಂದೇ ಗುಂಪಿನವರಾಗಿದ್ದಾರೆ. ಇವರು ಮೂಲತಃ ಬಾಂಗ್ಲಾದೇಶದವರಾಗಿದ್ದು, ವೇಶ್ಯಾವಾಟಿಕೆಗಾಗಿ ಸಂತ್ರಸ್ತೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತರಲಾಗಿತ್ತು ಎನ್ನಲಾಗಿದೆ.

   IPL ನಲ್ಲಿ ಆದ ಕಷ್ಟದ ದಿನಗಳ ಬಗ್ಗೆ ಮಾತನಾಡಿದ ವಾರ್ನರ್ ಪತ್ನಿ Candice Warner | Oneindia Kannada

   ಹಣಕಾಸಿನ ವಿಷಯದಿಂದಾಗಿ ಇವರ ನಡುವೆ ಜಗಳ ಶುರುವಾಗಿ ಅದು ಇಂತಹ ಅತ್ಯಾಚಾರದ ಮೂಲಕ ಕೊನೆಯಾಗಿದ್ದು, ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

   English summary
   Bengaluru Police Found Gang Rape Case Victim Girl In Kerala's Calicut.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X