ಬಿಬಿಎಂಪಿ: ಒಂದೇ ದಿನ 97,477 ಗಣೇಶ ಮೂರ್ತಿ ವಿಸರ್ಜನೆ

ಬೆಂಗಳೂರು, ಸೆ.05: ಬೆಂಗಳೂರಿನಲ್ಲಿ ಬಿಬಿಎಂಪಿ ಗಣೇಶೋತ್ಸವ ಸಂಬಂಧ ಮಾಡಿರುವ ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ ಮತ್ತು ತಾತ್ಕಾಲಿಕ ನೀರಿನ ಹೊಂಡಗಳಲ್ಲಿ ಸೆಪ್ಟಂಬರ್ 4ರ ಭಾನುವಾರ ಒಂದೇ ದಿನ ನಗರದಲ್ಲಿ ಒಟ್ಟು 97,477 ಗಣೇಶ ಮೂರ್ತಿಗಳು ವಿಜಸರ್ಜನೆಗೊಂಡಿವೆ ಎಂದು ಬಿಬಿಎಂಪಿ ತಿಳಿಸಿದೆ.

ಕೋವಿಡ್ ನಂತರ ಈ ವರ್ಷ ಬೆಂಗಳೂರಿನಲ್ಲಿ ಸಂಭ್ರಮದಿಂದ ಗಣೇಶ ಚತುರ್ಥಿ ನಡೆದಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಹೆಚ್ಚೆಚ್ಚು ಪ್ರತಿಷ್ಠಾಪಿಸಲಾಗಿದೆ. ಆಗಸ್ಟ್ 31ರಂದು ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಅದರ ಅಂಗವಾಗಿ ಐದನೇ ದಿನ ಅಂದರೆ ಭಾನುವಾರ ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 97,477 ಗಣೇಶ ಮೂರ್ತಿಗಳು ವಿಸರ್ಜನೆ ಆಗಿವೆ.

ಈ ಬಾರಿ ಗಣೇಶೋತ್ಸವದಲ್ಲಿ ಜನರು ಹೆಚ್ಚು ಮಣ್ಣಿನ ಗಣೇಶ ಮೂರ್ತಿ ಮೊರೆ ಹೋಗಿದ್ದಾರೆ. ಜನರಲ್ಲಿ ಪರಿಸರ ಕಾಳಜಿ ಮೂಡಿದೆ. ಹೀಗಾಗಿ ಭಾನುವಾರ ವಿಸರ್ಜನೆಗೊಂಡ ಗಣೇಶ ಪೈಕಿ ಅನೇಕ ಮೂರ್ತಿಗಳು ಮಣ್ಣಿನ ಮೂರ್ತಿಗಳೇ ಆಗಿವೆ. ಪೂರ್ವ, ಪಶ್ಚಿಮ, ಮಹಾದೇವಪುರ ಮತ್ತು ಯಲಹಂಕ ವಲಯಗಳಲ್ಲಿ ಒಂದೂ ಪಿಓಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿ ನೀರಿಗೆ ಬಿಟ್ಟ ಬಗ್ಗೆ ವರದಿ ಆಗಿಲ್ಲ.

Ganesh Chaturthi 97,477 Ganesh idol dissolved in Bengaluru on Sunday

ಪಶ್ಚಿಮ ವಲಯದಲ್ಲಿ 10,557 ಗಣೇಶ ವಿಸರ್ಜನೆ

ಪಶ್ಚಿಮ ವಲಯದಲ್ಲಿ ಭಾನುವಾರದಂದು 7,720 ಮಣ್ಣಿನ ಗಣೇಶ ಮೂರ್ತಿಗಳು ವಿಸರ್ಜನೆಗೊಂಡಿವೆ. ಇದರ ಹೊರತು ಈ ಭಾಗದಲ್ಲಿ ಒಂದೇ ಒಂದು ಪ್ಲಾಸ್ಟರ್ ಆಫ್‌ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ವಿಸರ್ಜನೆ ಮಾಡಲಾಗಿಲ್ಲ. ದಕ್ಷಿಣ ವಲಯದಲ್ಲಿ 21,470 ಮಣ್ಣಿನ ಗಣೇಶ ಮೂರ್ತಿಗಳು ಹಾಗೂ ಕೇವಲ 1,250 ಪ್ಲಾಸ್ಟರ್ ಆಫ್‌ ಪ್ಯಾರಿಸ್ ಗಣೇಶ ಮೂರ್ತಿಗಳು ವಿಸರ್ಜನೆ ಆಗಿವೆ. ಇನ್ನೂ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ 1,202 ಮಣ್ಣಿನ ಗಣೇಶ ಮೂರ್ತಿ ಮತ್ತು 208 ಪ್ಲಾಸ್ಟರ್ ಆಫ್‌ ಪ್ಯಾರಿಸ್ ಗಣೇಶನನ್ನು ಭಕ್ತರು ವಿಸರ್ಜಿಸಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಲಹಂಕ ವಲಯದಲ್ಲಿ 5,805 ಮಣ್ಣಿನ ಗಣೇಶ ನೀರಿಗೆ ಬಿಡಲಾಗಿದ್ದು, ಪಿಓಪಿ ಗಣೇಶ ಮೂರ್ತಿ ವಿಸರ್ಜನೆಯಾಗಿಲ್ಲ ಎಂದು ತಿಳಿದು ಬಂದಿದೆ. ಮಹದೇವಪುರದಲ್ಲಿ 3,007 ಮಣ್ಣಿನ ಗಣೇಶ ಮೂರ್ತಿ ವಿಸರ್ಜಿಸಲಾಗಿದೆ.

ಪೂರ್ವ ವಲಯದಲ್ಲಿ 43,901 ಮೂರ್ತಿ ವಿಸರ್ಜನೆ

ಅದೇ ರೀತಿ ಪೂರ್ವ ವಲಯದಲ್ಲಿ 43,901 ಮಣ್ಣಿನ ಗಣೇಶ ಮೂರ್ತಿಗಳು ನೀರಿಗೆ ಬಿಡಲಾಗಿದ್ದು, ಇಲ್ಲಿ ಒಂದೂ ಪಿಓಪಿ ಗಣೇಶ ಮೂರ್ತಿ ವಿಸರ್ಜನೆಯಾಗಿಲ್ಲ. ಇಲ್ಲಿ ಕೇವಲ ಮಣ್ಣಿನ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸಲಾಗಿತ್ತು. ರಾಜರಾಜೇಶ್ವರಿ ನಗರ (ಆರ್‌ಆರ್‌ನಗರ) ದಲ್ಲಿ 10,814 ಮಣ್ಣಿನ ಗಣಪ, ಜತೆಗೆ 191 ಪಿಓಪಿ ಗಣೇಶನನ್ನು ನೀರಿಗೆ ಬಿಡಲಾಯಿತು.

Ganesh Chaturthi 97,477 Ganesh idol dissolved in Bengaluru on Sunday

ಬಿಬಿಎಂಪಿಯು ಗಣೇಶೋತ್ಸವಕ್ಕೂ ಮೊದಲೇ ನಗರಾದ್ಯಂತ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಸೂಕ್ತ ವ್ಯವಸ್ಥೆ ಮಾಡಿತ್ತು. ಕಲ್ಯಾಣಿ, ಮೊಬೈಲ್‌ ಟ್ಯಾಂಕರ್ ಸೇರಿದಂತೆ ತಾತ್ಕಾಲಿಕ ನೀರಿನ ಹೊಂಡ ನಿರ್ಮಿಸಲಾಗಿದೆ. ಎಲ್ಲಿಯೂ ವಿಸರ್ಜನೆ ಸಂಬಂಧ ಜನರಲ್ಲಿ ಗೊಂದಲ ಉಂಟಾಗಿಲ್ಲ ಎನ್ನಲಾಗಿದೆ.\

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+