• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೇನಾ ಸ್ಮಾರಕ ಎಲ್ಲರಿಗೂ ಸ್ಫೂರ್ತಿ : ಅನಂತ್ ಕುಮಾರ್

|

ಬೆಂಗಳೂರು, ಜ.24 : ದೇಶದಲ್ಲಿಯೇ ಅತಿ ದೊಡ್ಡದಾದ ತ್ರಿವರ್ಣ ಧ್ವಜವನ್ನು ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಅನಾವರಣಗೊಳಿಸಿರುವುದು ಬೆಂಗಳೂರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಮತ್ತು ಸಂಸದ ಅನಂತ್ ಕುಮಾರ್ ಹೇಳಿದ್ದಾರೆ. ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ವಂದನೆ ಸಲ್ಲಿಸಿ ಮಾತನಾಡಿದ ಅವರು, ಸೈನಿಕ ಸ್ಮಾರಕ ನಿರ್ಮಾಣದ ರೂವಾರಿ ರಾಜೀವ್ ಚಂದ್ರಶೇಖರ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ವಂದನೆ ಸಲ್ಲಿಸಿ ಮಾತನಾಡಿದ ಅನಂತ್ ಕುಮಾರ್, ದೇಶದಲ್ಲಿಯೇ ಅತಿ ದೊಡ್ಡದಾದ ತ್ರಿವಣ ಧ್ವಜ ಬೆಂಗಳೂರಿನಲ್ಲಿ ಹಾರಾಡುತ್ತಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು. [ಬೆಂಗಳೂರಿನಲ್ಲಿ ಬೃಹತ್ ರಾಷ್ಟ್ರಧ್ವಜ]

ರಾಷ್ಟ್ರೀಯ ಸೈನಿಕ ಸ್ಮಾರಕ ಇಂದಿನ ಯುವ ಜನಾಂಗ ಮತ್ತು ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಬೆಂಗಳೂರಿನಲ್ಲಿ ಇದನ್ನು ನಿರ್ಮಾಣ ಮಾಡಲು ಶ್ರಮಿಸಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ ಎಂದು ಅವರು ಹೇಳಿದರು. [ಚಿತ್ರಗಳಲ್ಲಿ ನೋಡಿ ಸೇನಾ ಸ್ಮಾರಕ]

ಬೆಂಗಳೂರಿನಲ್ಲಿ ನಾವು ಈಗಾಗಲೇ ಹಲವಾರು ಪಾರಂಪರಿಕ ಸ್ಥಳಗಳನ್ನು ಹೊಂದಿದ್ದೇವೆ. ಸೈನಿಕ ಸ್ಮಾರಕ ನಗರಕ್ಕೆ ಮತ್ತೊಂದು ಹೆಮ್ಮೆಯ ಸ್ಥಳವಾಗಿದೆ ಎಂದರು. ಯುವಕರು, ಶಾಲಾ ಮಕ್ಕಳು ಸ್ಮಾರಕಕ್ಕೆ ಭೇಟಿ ನೀಡಿ ನಮ್ಮ ದೇಶವನ್ನು ಉಳಿಸಲು ಹೋರಾಡಿ ಮಡಿದ ಯೋಧನ ತ್ಯಾಗ ಬಲಿದಾನಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

210 ಅಡಿ ಎತ್ತರದ ಧ್ವಜ ಸ್ತಂಭಕ್ಕೆ ಕಟ್ಟಲಾಗಿರುವ ತ್ರಿವರ್ಣಧ್ವಜಾರೋಹಣವನ್ನು ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ನೆರವೇರಿಸಿದರು. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore South MP and BJP National General Secretary Ananth Kumar on Thursday commended MP Rajeev Chandrashekar for coming up with India’s first National Military Memorial and remarked that more such monuments were the need of the hour. The National Military Memorial is home to the nation’s tallest flag mast. This is a proud moment for all of us he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more