ಬೆಂಗಳೂರಿನಲ್ಲಿ ಮತ್ತೆ ರಾರಾಜಿಸಿದ 'Free Kashmir' ಗೋಡೆ ಬರಹ

ಬೆಂಗಳೂರು, ಮಾರ್ಚ್ 2: ಪಾಕ್ ಪರ ಘೋಷಣೆ, ಪಾಕ್ ಪರ ಗೋಡೆ ಬರಹ, ಫ್ರೀ ಕಾಶ್ಮೀರ ಗೋಡೆ ಬರಹಗಳ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ.

ಕಳೆದ ತಿಂಗಳು ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಫ್ರೀ ಕಾಶ್ಮೀರ ಹಾಗೂ ಸಿಎಎ ವಿರೋಧಿ, ಮೋದಿ ಅಮಿತ ಷಾ ವಿರುದ್ಧ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿತ್ತು. ಈಗ ಅಂತಹದೇ ಘಟನೆ ಮರುಕಳಿಸಿದೆ. ಬೆಂಗಳೂರಿನ ಶಿವಾಜಿನಗರದ ರಸ್ತೆಯ ಗೋಡೆಗೆ ಫ್ರೀ ಕಾಶ್ಮೀರ ಎಂದು ಇಂಗ್ಲೀಷ್‌ನಲ್ಲಿ ಗೋಡೆ ಬರಹ ಬರೆಯಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಡಿಸಿಪಿ ಶರಣಪ್ಪ ಅವರು, ಪ್ರಚೋಧನಕಾರಿ ಗೋಡೆ ಬರಹವನ್ನು ಅಳಿಸಿ ಹಾಕಲಾಗಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

Free Kashmir Posts On Shivaji Nagar Street Walls

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಚರ್ಚ್​ ಸ್ಟ್ರೀಟ್​ನ ಗೋಡೆಗಳ ಮೇಲೆ ರಾತ್ರೋರಾತ್ರಿ ಫ್ರೀ ಕಾಶ್ಮೀರ, ನಾನು ಯಾವುದೇ ದಾಖಲೆ ತೋರಿಸುವುದಿಲ್ಲ ಎಂಬ ಬರಹಗಳನ್ನು ಬರೆಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಗೋಡೆ ಬರಹ ಬರೆದವರೂ ಮಾತ್ರ ಪತ್ತೆಯಾಗಿಲ್ಲ.

ಈ ಕುರಿತು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್​​ ಮಾತನಾಡಿ, "ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಸುವ ಉದ್ದೇಶದಿಂದ ಕೆಲವರು ಈ ಕೃತ್ಯವೆಸಗಿದ್ದಾರೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ನಾವೇ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+