ಜನಾರ್ದನ ರೆಡ್ಡಿ ಪ್ರಕರಣದ ಮುಕ್ತ ತನಿಖೆ, ಅಧಿಕಾರ ದುರ್ಬಳಕೆ ಇಲ್ಲ: ಸಿಎಂ
ಬೆಂಗಳೂರು, ನವೆಂಬರ್ 9: ಜನಾರ್ದನ ರೆಡ್ಡಿ ಬಹುಕೋಟಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಗಲು ರಾತ್ರಿ ರೆಡ್ಡಿ ಹುಡುಕಾಟದಲ್ಲಿದ್ದಾರೆ. ಜನಾರ್ದನ ರೆಡ್ಡಿ ತನಿಖೆಗೆ ಪೊಲೀಸರಿಗೆ ಮುಕ್ತವಾದ ಅವಕಾಶ ನೀಡಲಾಗುತ್ತದೆ, ಅಧಿಕಾರ ದುರ್ಬಳಕೆ ಇಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧದ 20 ಕೋಟಿ ರೂ ಡೀಲ್ ಪ್ರಕರಣದಲ್ಲಿ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಕಂಪನಿಯೊಂದು ನಾನಾ ಆಮಿಷವೊಡ್ಡಿ ವಿಶೇಷವಾಗಿ ಅಲ್ಪಸಂಖ್ಯಾತ ಕುಟುಂಬಗಳಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ದೋಖಾ ಮಾಡಿದೆ ಇದು ಕಾನೂನು ಬಾಹಿರ ಎಂದಿದ್ದಾರೆ.
ಈ ಅಕ್ರಮದಲ್ಲಿ ಪ್ರಮುಖ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಈ ಕುರಿತು ಸಾರ್ವಜನಿಕರು ದೂರು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾರ್ವಜನಿರಿಂದ ಹಣ ಸಂಗ್ರಹಿಸಿ ವಂಚನೆ ಮಾಡಿ ಹಲವು ಬಡ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ. ಈ ಕಂಪನಿಯ ಹಿನ್ನೆಲೆ, ಹಣಕಾಸು ವಹಿವಾಟು, ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.












Click it and Unblock the Notifications