200 ಬಡ ಹೃದ್ರೋಗಿಗಳಿಗೆ ಜಯದೇವ ಆಸ್ಪತ್ರೆಯಿಂದ ಉಚಿತ ಸ್ಟೆಂಟ್

ಬೆಂಗಳೂರು, ಸೆಪ್ಟೆಂಬರ್ 19: ಹೃದ್ರೋಗದಂಥ ದುಬಾರಿ ಕಾಯಿಲೆ ಬಡವರಿಗೆ ತಟ್ಟಿದರೆ ಅವರ ಪಾಡು ದೇವರಿಗೇ ಪ್ರೀತಿ! ಅದಕ್ಕೆಂದೇ ಬಡವರಿಗೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡುವ ಕೆಲಸವನ್ನು ಬೆಂಗಳೂರಿನ ಜವದೇವ ಹೃದ್ರೋಗ ಆಸ್ಪತ್ರೆ ಮಾಡುತ್ತ ಬಂದಿದೆ.

ಇದೀಗ ಇದರದೇ ಮುಂದುವರಿದ ಭಾಗವಾಗಿ 200 ಬಡವರಿಗೆ ಉಚಿತ ಸ್ಟೆಂಟ್ ಅಳವಡಿಸುವ ಮೂಲಕ ಅವರಿಗೆ ಹೊಸ ಬದುಕು ನೀಡಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಮುಂದಾಗಿದೆ.

Free coronary stenting for Poors by Jayadeva hospital in Bengaluru and Mysuru

ಅಕ್ಟೋಬರ್ 10 ಮತ್ತು 11 ರಂದು ಬೆಂಗಳೂರಿನ ಜಯದೇವ ಆಸ್ಪತ್ರೆ ಮತ್ತು ಅಕ್ಟೋಬರ್ 12 ಮತ್ತು 13ರಂದು ಮೈಸೂರಿನ ಹೃದ್ರೋಗ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಕಾರ್ಯಗಾರ ಏರ್ಪಡಿಸಿ, ಈಗಾಗಲೇ ಆಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳಿಗೆ ಉಚಿತ ಸ್ಟೆಂಟ್ ಅಳವಡಿಸಲಾಗುತ್ತದೆ.

ಬಡ ರೋಗಿಗಳು, ಬಡತನರೇಖೆಗಿಂತ ಕೆಳಗಿರುವ ರೋಗಿಗಳು, ಹಿರಿಯ ನಾಗರಿಕರು ಸೌಲಭ್ಯಪಡೆಯಬಹುದಾಗಿದೆ. ದಾಖಲಾತಿ ಸಮಯದಲ್ಲಿ ರೋಗಿಗಳು ಬಿಪಿಎಲ್ ಪಡಿತರ ಚೀಟಿ ಅಥವಾ ಆದಾಯ ಪ್ರಮಾಣ ಪತ್ರ ಹಾಜರುಪಡಿಸಬೇಕಾಗುತ್ತದೆ. ಸೌಲಭ್ಯ ಪಡೆಯುವವರು ಅಕ್ಟೋಬರ್ 8 ರೊಳಗೆ ಹೆಸರು ನೋಂದಾಯಿಸುವಂತೆ ಕೋರಲಾಗಿದೆ.

ಸಂಪರ್ಕಕ್ಕೆ: ನಿರ್ದೇಶಕರ ಕಚೇರಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9 ನೇ ಬ್ಲಾಕ್, ಬೆಂಗಳೂರು- 560 069
ದೂರವಾಣಿ: 080-22977433

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+