• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಂಚನೆ ಕೇಸ್: ಲತಾ ರಜನಿಕಾಂತ್ ಗೆ ಬೆಂಗಳೂರು ಪೊಲೀಸರಿಂದ ನೋಟಿಸ್

|

ಬೆಂಗಳೂರು, ಮೇ 12: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ನೀಡಿದ್ದಾರೆ 2015ರಲ್ಲಿ ದಾಖಲಾಗಿದ್ದ ನಕಲಿ ದಾಖಲೆ ಪತ್ರ ಬಳಕೆ ಕೇಸ್ ಸಂಬಂಧ ಮತ್ತೊಮ್ಮೆ ನೋಟಿಸ್ ಜಾರಿ ಮಾಡಲಾಗಿದೆ.

ಜಾಹೀರಾತು ಕಂಪನಿಯೊಂದಕ್ಕೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಈ ಹಿಂದೆ ಕೂಡಾ ನೋಟಿಸ್ ನೀಡಲಾಗಿತ್ತು. ಎರಡು ಬಾರಿ ವಿಚಾರಣೆಗೆ ಹಾಜರಾಗಿರಲಿಲ್ಲ.

ರಜನಿಕಾಂತ್ 33 ಸೀಟಿಗಿಂತ ಹೆಚ್ಚು ಗೆಲ್ಲಲ್ಲ : ಇಂಡಿಯಾ ಟುಡೇ ಸಮೀಕ್ಷೆ

ಮೇ20ರ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ರಜನಿ ಪತ್ನಿ ಲತಾ ಉತ್ತರ ನೀಡಿದ್ದಾರೆ. ಮೇ20 ರಂದು ಹಲಸೂರು ಗೇಟ್ ಠಾಣೆ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಬೇಕು.

ರಜನಿಕಾಂತ್ ಅವರ ಕೊಚಾಡಿಯಾನ್ ಚಿತ್ರದ ಸೋಲು, ಅದರಿಂದ ಉಂಟಾದ ಆರ್ಥಿಕ ನಷ್ಟ ಇನ್ನೂ ರಜನಿಕಾಂತ್ ಕುಟುಂಬವನ್ನು ಕಾಡುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ವಿತರಕರಿಗೆ ಆಗಿರುವ ಕಷ್ಟ ನಷ್ಟಗಳ ಕುರಿತು ಕೋರ್ಟಿಗೆ ಲತಾ ಅವರು ವಿವರಣೆ ನೀಡುವ ಸಂದರ್ಭದಲ್ಲಿ ನಕಲಿ ಲೆಟರ್ ಹೆಡ್ ದಾಖಲೆ ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಲತಾ ಅವರು ನೀಡಿದ್ದ ಲೆಟರ್ ಹೆಡ್ ನಕಲಿ

ಲತಾ ಅವರು ನೀಡಿದ್ದ ಲೆಟರ್ ಹೆಡ್ ನಕಲಿ

2014ರ ನವೆಂಬರ್ ತಿಂಗಳಿನಲ್ಲಿ ಆಡ್ ಬ್ಯೂರೋ ಮೊಟ್ಟ ಮೊದಲಿಗೆ ಲತಾ ಅವರು ನೀಡಿದ್ದ ಲೆಟರ್ ಹೆಡ್ ನಕಲಿ ಎಂದು ಆರೋಪಿಸಿತು. ಕೊಚಾಡಿಯಾನ್ ಸಿನಿಮಾದ ಹಕ್ಕುಗಳನ್ನು ಎರಡು ಬಾರಿ ಮಾರಾಟ ಮಾಡಿದ್ದು, ಆರ್ಥಿಕ ವ್ಯವಹಾರದ ವಿವರಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಇದನ್ನು ನಂತರ ಎಲ್ಲಾ ಟಿವಿ, ವೆಬ್ ಸೈಟ್ ಹಾಗೂ ದಿನಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ಮಾಡಲಾಯಿತು.

ಬೆಂಗಳೂರಿನ ಕೋರ್ಟಿನಿಂದ gag order

ಬೆಂಗಳೂರಿನ ಕೋರ್ಟಿನಿಂದ gag order

ಕೊಚಾಡಿಯನ್ ಆರ್ಥಿಕ ಸಂಕಷ್ಟದ ಬಗ್ಗೆ ಸುದ್ದಿ ಪ್ರಸಾರ ಮಾಡದಂತೆ ತಡೆ ಒಡ್ಡುವಂತೆ ಬೆಂಗಳೂರಿನ ಕೋರ್ಟಿನಿಂದ gag order(ಏನಿದು ಇಲ್ಲಿ ಓದಿ) ಪಡೆಯುವಲ್ಲಿ ಲತಾ ಯಶಸ್ವಿಯಾದರು. ಅದರೆ, ನಂತರ ಮದ್ರಾಸ್ ಹೈಕೋರ್ಟಿನಲ್ಲಿ ಇದೇ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿತ್ತು. ಅಲ್ಲಿನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ ಮೇಲೆ ಇಲ್ಲೂ ಅದು ಮುಂದುವರೆಯಿತು.

ಎಫ್ ಐಆರ್ ಹಾಕುವಂತೆ ಪೊಲೀಸರಿಗೆ ಆದೇಶ ನೀಡಲಾಗಿತ್ತು

ಎಫ್ ಐಆರ್ ಹಾಕುವಂತೆ ಪೊಲೀಸರಿಗೆ ಆದೇಶ ನೀಡಲಾಗಿತ್ತು

ಬೆಂಗಳೂರಿನ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜೂ.9ರಂದು ಲತಾ ವಿರುದ್ಧ ನಕಲಿ ದಾಖಲೆ ಒದಗಿಸಿದ (ಬೆಂಗಳೂರಿನ ಕೋರ್ಟಿಗೆ) ಆರೋಪದ ಮೇಲೆ ಪ್ರಕರಣ ದಾಖಲಿಸಿ, ಎಫ್ ಐಆರ್ ಹಾಕುವಂತೆ ಪೊಲೀಸರಿಗೆ ಆದೇಶ ನೀಡಲಾಗಿತ್ತು.

ರಜನಿ ಕುಟುಂಬವನ್ನು ಕಾಡುತ್ತಿರುವ ಕೊಚಾಡಿಯನ್

ರಜನಿ ಕುಟುಂಬವನ್ನು ಕಾಡುತ್ತಿರುವ ಕೊಚಾಡಿಯನ್

ಆಡ್ ಬ್ಯೂರೋ ಕಂಪನಿ ನೆರವಿನಿಂದ ಕೋಚಾಡಿಯಾನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪೂರ್ತಿಗೊಳ್ಳಲು ಸಾಧ್ಯವಾಯಿತು. ಸುಮಾರು 10 ಕೋಟಿ ರು ಗೂ ಅಧಿಕ ನೆರವು ಲತಾ ರಜನಿಕಾಂತ್ ಅವರಿಗೆ ಸಿಕ್ಕಿದೆ. ಆಡ್ ಬ್ಯೂರೋ ಕಂಪನಿಯ ಅಭಿರ್ ಚಂದ್ ನಹಾರ್ ಗೆ ಕೊಚಾಡಿಯನ್ ನಿರ್ಮಾಣ ಸಂಸ್ಥೆ ಮೀಡಿಯಾ ಒನ್ ಎಂಟರ್ ಟೇನ್ಮೆಂಟ್ ಲಿ ಸಂಸ್ಥೆ 6.84 ಕೋಟಿ ರು ಬಾಕಿ ಉಳಿಸಿಕೊಂಡಿದೆ. ಕೊಚಾಡಿಯಾನ್ ಚಿತ್ರ ರಜನಿ ಕುಟುಂಬವನ್ನು ಎಡಬಿಡದೆ ಕಾಡುತ್ತಿದೆ.

English summary
Bengaluru police serve notice to Latha Rajinikanth in a fraud case. Bengaluru police registering an FIR against super star Rajinikanth's wife Latha for allegedly producing fake documents in a court in Bengaluru to get a gag order on the media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X