'ಆಪರೇಶನ್ ಕಮಲಕ್ಕೆ ಆಪರೇಶನ್, ರಾಜ್ಯಕ್ಕೆ ಹಿಂದಿರುಗಿದ ಶಾಸಕರು'

ಬೆಂಗಳೂರು. ಮಾ. 04: ಮಧ್ಯಪ್ರದೇಶದಲ್ಲಿ ಬಿಜೆಪಿ ಆಪರೇಷನ್ ಕಮಲ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿದ್ದ ನಾಲ್ವರು ಕಾಂಗ್ರೆಸ್ ಶಾಸಕರು ಹಿಂದಿರುಗುತ್ತಿದ್ದು, ಬಿಜೆಪಿಯ ಆಪರೇಷನ್ ಕಮಲ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಇಲ್ಲಿಗೆ ಬಂದಿದ್ದು ಗೊತ್ತಿತ್ತು. ನಾವು ಅದರ ಬಗ್ಗೆ ಪರಿಶೀಲನೆ ಮಾಡಿದ್ದೆವು. ಆದರೆ ಅವರ ಆಪರೇಷನ್ ಸಫಲವಾಗಿಲ್ಲ. ನನಗೆ ಬೆಳಗ್ಗೆಯೇ ದಿಗ್ವಿಜಯ್ ಸಿಂಗ್ ದೂರವಾಣಿ ಕರೆ ಮಾಡಿದ್ದರು. ನಾವು ಎಲ್ಲವನ್ನೂ ನೋಡಿಕೊಳ್ತೇವೆ ಎಂದಿದ್ದರು. ಹೀಗಾಗಿ ನಮಗೇ ಮೊದಲೇ ಬಿಜೆಪಿಯವರ ಪ್ರಯತ್ನ ವಿಫಲವಾಗಿದ್ದರ ಬಗ್ಗೆ ಗೊತ್ತಾಗಿತ್ತು. ನಮ್ಮವರು ಮತ್ತೆ ಮಧ್ಯಪ್ರದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಹೀಗೆಲ್ಲ ಮಾಡಿದ್ದಾರೆ.

Four Madhya Pradesh MLAs are back in their state and BJPs Operation Lotus has failed

Breaking; ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಶಾಸಕ

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಬೆಂಗಳೂರಿನ ಯು.ಬಿ. ಸಿಟಿಯಲ್ಲಿ ಅಲ್ಲಿನ ನಾಲ್ವರು ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದರು. ಶಾಸಕರಾದ ಸುರೇಂದ್ರ ಸಿಂಗ್ ಶೆರಾ, ರಘುರಾಜ್ ಕನ್ಸಾನ್, ಹರದೀಪ್ ಸಿಂಗ್ ಡುಂಗಾ ಹಾಗೂ ಶಾಸಕ ಬಿಸಾಹುಲ್ ಲಾಲ್ ಸಿಂಗ್ ಬೆಂಗಳೂರಿನಲ್ಲಿದ್ದರು. ಈ ಮಧ್ಯೆ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು ಕಾಂಗ್ರೆಸ್ ಪಕ್ಷದ 12 ಶಾಸಕರನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದು ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+