ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಸರ್ಕಾರದಲ್ಲಿ ಯಾರು ಸೇಫ್ ಇಲ್ಲ: ರಮ್ಯಾ

ದಿವ್ಯಸ್ಪಂದನ ಅವರು ಕೂಡಾ ಕಮಲ ಪಕ್ಷ ಸೇರುತ್ತಾರೆ ಎಂಬ ಗುಸುಗುಸು ಪಿಸುಪಿಸು ಆರಂಭವಾಗಿತ್ತು. ಇದಕ್ಕೆ ರಮ್ಯಾ ಅವರ ತಾಯಿ ರಂಜಿತಾ ಅವರು ಪ್ರತಿಕ್ರಿಯಿಸಿದ್ದರು. ಈಗ ರಮ್ಯಾ ಅವರು ತಮ್ಮ ಟ್ವೀಟ್ಸ್ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಮಾಜಿ ಸಂಸದೆ, ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಕೂಡಾ ಕಮಲ ಪಕ್ಷ ಸೇರುತ್ತಾರೆ ಎಂಬ ಗುಸುಗುಸು ಪಿಸುಪಿಸು ಆರಂಭವಾಗಿತ್ತು. ಇದಕ್ಕೆ ರಮ್ಯಾ ಅವರ ತಾಯಿ ರಂಜಿತಾ ಅವರು ಪ್ರತಿಕ್ರಿಯಿಸಿದ್ದರು. ಈಗ ರಮ್ಯಾ ಅವರು ತಮ್ಮ ಟ್ವೀಟ್ಸ್ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದರ ಜತೆಗೆ ಮೋದಿ ಸರ್ಕಾರದಲ್ಲಿ ಯಾರು ಸೇಫ್ ಇಲ್ಲ ಎಂದಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ. ಅನಾರೋಗ್ಯದ ನಿಮಿತ್ತ ನಾನು ವಿಶ್ರಾಂತಿ ಪಡೆಯುತ್ತಿದ್ದೇನೆ. ಅದರಿಂದಾಗಿ ಸ್ವಲ್ಪ ದೂರದಲ್ಲಿದ್ದೇನೆ. ಮುಂದಿನ ಮೇ ನಿಂದ ಸಕ್ರಿಯ ರಾಜಕಾರಣಕ್ಕೆ ಮರಳುತ್ತೇನೆ. ನಾನು ಬಿಜೆಪಿಗೆ ಸೇರುವ ಸುದ್ದಿ ಎಲ್ಲಾ ಸುಳ್ಳು ಎಂದು ರಮ್ಯಾ ಅವರು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.[ರಮ್ಯಾ ಕಾಂಗ್ರೆಸ್ ಬಿಡ್ತಾರಾ? ಅವರ ತಾಯಿ ಉತ್ತರ ಹೀಗಿದೆ]

ಕೇಂದ್ರ ಸರ್ಕಾರದ ವಿರುದ್ಧ ರಮ್ಯಾ ಅವರು ಟ್ವಿಟರ್, ಫೇಸ್‍ ಬುಕ್‍ ನಲ್ಲಿ ಹರಿಹಾಯ್ದಿದ್ದಾರೆ. ಛತ್ತೀಸ್‍ಗಡದ ಸುಕ್ಮಾದಲ್ಲಿ ನಕ್ಸಲರ ಅಟ್ಟಹಾಸದಿಂದ 25 ಸಿಆರ್‍ಪಿಫ್ ಯೋಧರು ಮೃತಪಟ್ಟ ಘಟನೆ ಬಗ್ಗೆ ಕಿಡಿಕಾರಿದ್ದಾರೆ. ಈ ದುರ್ಘಟನೆಗೆ ಕೇಂದ್ರದ ಗುಪ್ತಚರ ನಿರ್ವಹಣೆ ವಿಫಲವೇ ಕಾರಣ, ಇನ್ನೂ ಆಧಾರ್ ಸೇರಿದಂತೆ ಸರ್ಕಾರಿ ಸೌಲತ್ತುಗಳನ್ನು ಪಡೆಯಲು ನಾಗರಿಕರಿಗೆ ಗೊಂದಲಮಯ ನಿಯಮಗಳನ್ನು ತಂದು ಹಿಂಸಿಸಲಾಗುತ್ತಿದೆ ಎಂದಿದ್ದಾರೆ.

ರಮ್ಯಾ ಟ್ವೀಟ್ಸ್

ರಮ್ಯಾ ಟ್ವೀಟ್ಸ್

ಇನ್ನೂ ಆಧಾರ್ ಸೇರಿದಂತೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ನಾಗರಿಕರಿಗೆ ಗೊಂದಲಮಯ ನಿಯಮಗಳನ್ನು ತಂದು ಹಿಂಸಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಸುಕ್ಮಾ ದುರಂತಕ್ಕೆ ಮಿಡಿದ ರಮ್ಯಾ

ಸುಕ್ಮಾ ದುರಂತಕ್ಕೆ ಮಿಡಿದ ರಮ್ಯಾ ಅವರು ಟ್ವೀಟ್ ಮಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮೋದಿ ಸರ್ಕಾರದಲ್ಲಿ ಯಾರು ಸೇಫಿಲ್ಲ

ಯೋಧರಿಗೆ ಯಾರು ರಕ್ಷಣೆ, ಈ ದುರಂತಕ್ಕೆ ಯಾರು ಹೊಣೆ, ನಾಗರಿಕರು, ಆಧಾರ್ ಮಾಹಿತಿ ಯಾವುದೋ ಇಲ್ಲಿ ಸುರಕ್ಷಿತವಾಗಿಲ್ಲ. ಕೇಂದ್ರ ಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೇ?

ಮೋದಿ-ಕನ್ನಡ ಬಳಕೆ ಬಗ್ಗೆ

ನಮ್ಮ ಭಾಷೆಯಲ್ಲಿ ಟ್ವೀಟ್ ಮಾಡಿ ವೈವಿಧ್ಯತೆ ಮರೆಯುತ್ತೀರಿ, ಇನ್ನೊಂದೆಡೆ ಹಿಂದಿ ಹೇರಿಕೆ ಮಾಡುತ್ತೀರಿ ಏಕೆ?

ಕಾಂಗ್ರೆಸ್ ಬಿಡುತ್ತಿಲ್ಲ

ರಮ್ಯಾ ಅವರು ಸೇರುತ್ತಿಲ್ಲ ಎಂಬುದು ತಿಳಿದು ಬಂದಿತು. ಇದರಿಂದ ಅನೇಕ ಕಾರ್ಯಕರ್ತರ ಅವಮಾನದಿಂದ ರಕ್ಷಿಸಿದ್ದೀರಿ.

English summary
Former Mandya MP and Actress Ramya not joining BJP and will be active in Congress from May first week this is the news we got via tweets and replies from Ramya alias Divya Spandana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X