ಬೆಂಗಳೂರು ತೊರೆದ ಮಾಜಿ ಸಿಎಂ ಸಿದ್ದರಾಮಯ್ಯ!
ಬೆಂಗಳೂರು, ಡಿಸೆಂಬರ್ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ನಾಲ್ಕೈದು ದಿನಗಳ ಕಾಲ ಬೆಂಗಳೂರಿನಿಂದ ಅನಾಮದೇಯ ಸ್ಥಳಕ್ಕೆ ತೆರಳಲಿದ್ದಾರೆ. ಕಳೆದ ವಾರ ಅವರು ಬೆಂಗಳೂರಿನ ವೇಗಾಸ್ ಆಸ್ಪತ್ರೆಯಲ್ಲಿ ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸೋಮವಾರ ಮನೆ ಸೇರಿದ್ದರು.
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸಿದ್ದರಾಮಯ್ಯ ಅವರಿಗೆ ಇನ್ನೂ ಕೆಲಕಾಲ ವಿಶ್ರಾಂತಿಯನ್ನು ವೈದ್ಯರು ಸೂಚಿಸಿದ್ದರು. ಆದರೆ, ಅವರ ಅಭಿಮಾನಿಗಳು, ಬೆಂಬಲಿಗರು, ಹಿತೈಸಿಗಳು ಅವರನ್ನು ಭೇಟಿಯಾಗಲು ತಂಡೋಪತಂಡವಾಗಿ ಬರುತ್ತಿರುವುದರಿಂದ ಅವರಿಗೆ ಪೂರ್ಣ ಪ್ರಮಾಣದ ವಿಶ್ರಾಂತಿ ಸಿಗುತ್ತಿಲ್ಲ.
ಅವರು ಬೆಂಗಳೂರು ತೊರೆದು ನಾಲ್ಕೈದು ದಿನ ಬೆಂಗಳೂರಿನಿಂದ ಹೊರಗಡೆ ಸಂಪೂರ್ಣ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ಮುಂದಿನ ನಾಲ್ಕು ದಿನ ಲಭ್ಯರಿರುವುದಿಲ್ಲ. ನಂತರ ಎಂದಿನಂತೆ ಭೇಟಿಯಾಗಲಿದ್ದಾರೆ ಎಂದು ಅವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಕ್ಷಣ; ಟಗರು ಭೇಟಿಯಾದ ಹುಲಿಯ!
ಕಳೆದ ಹತ್ತು ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ವೇಗಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು, ಹೃದಯದ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯನ್ನು ಸಿದ್ದರಾಮಯ್ಯ ಅವರಿಗೆ ಯಶಸ್ವಿಯಾಗಿ ಮಾಡಿದ್ದರು. ಅವರು ಅದೇ ಆಸ್ಪತ್ರೆಯಲ್ಲಿ ಒಂದು ವಾರ ವಿಶ್ರಾಂತಿ ಪಡೆದು ಸೋಮವಾರ ಮನೆಗೆ ತೆರಳಿದ್ದರು.












Click it and Unblock the Notifications