ವಿನೋದ್ ರಾಯ್ ಕ್ಷಮೆಯಾಚಿಸಲಿ: ದಿನೇಶ್ ಗುಂಡೂರಾವ್
ಬೆಂಗಳೂರು, ಡಿಸೆಂಬರ್ 22 : 2 ಜಿ ಸ್ಪೆಕ್ಟ್ರಂ ಸಿಬಿಐ ವಿಶೇಷ ಕೋರ್ಟ್ ತೀರ್ಪುನ್ನು ಸ್ವಾಗತಿಸುತ್ತೇನೆ. 2 ಜಿ ಹಗರಣ ನಮ್ಮ ಪಕ್ಷಕ್ಕೆ ಸಾಕಷ್ಟು ಮುಜುಗರ ತಂದಿತ್ತು ಮಾಜಿ ಸಿಎಜಿ ವಿನೋದ್ ರಾಯ್ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ವಿನೋದ್ ರಾಯ್ ಹಗರಣ ನಡೆದಿದೆ ಎಂದು ಆರೋಪಿಸಿದ್ದರು ಕೋರ್ಟ್ ತೀರ್ಪು ಹಗರಣವೇ ಆಗಿಲ್ಲವೆಂದಿದೆ ಹೀಗಿರುವಾಗ ರಾಯ್ ಗೆ ಹಲವು ಹುದ್ದೆಗಳು ಬೇಕೇ ಕೇಂದ್ರ ಸರ್ಕಾರದ ಪ್ರಶಸ್ತಿ ಬೇಕೆ, ಬಿಸಿಸಿಐ ಹುದ್ದೆಗಳು ಬೇಕೇ ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
2 ಜಿ ಸ್ಪೆಕ್ಟ್ರಂ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ 1 ಲಕ್ಷ 76 ಸಾವಿರ ಕೋಟಿ ಲೂಟಿಯಾಗಿದೆ ಎಂಬು ಆರೋಪ ಸುಳ್ಳಾಗಿದೆ. ಡಿಎಂಕೆ,ಕಾಂಗ್ರೆಸ್ ಗೆ ದೊಡ್ಡ ಹಾನಿಯಾಗಿತ್ತು. ಆಗ ಸಾಕಷ್ಟು ಸ್ಪಷ್ಟೀಕರಣ ನೀಡಿದರು ಜನ ಒಪ್ಪಿರಲಿಲ್ಲ ಆದರೆ ಈಗ ಕೋರ್ಟ್ ತೀರ್ಪು ಹಗರಣವೇ ಇಲ್ಲವೆಂದಿದೆ 2 ಜಿ ಸ್ಪೆಕ್ಟ್ರಂ ಹಗರಣವೇ ಅಲ್ಲ ಅಂತ ಜಡ್ಜ್ ಹೇಳಿದ್ದಾರೆ ಭ್ರಷ್ಟಾಚಾರದ ಆರೋಪ ತೀರ್ಪಿನಲ್ಲಿ ಅಲ್ಲಗಳೆಯಲಾಗಿದೆ ಸುಮ್ಮನೆ ಏಳು ವರ್ಷ ಕೇಸ್ ನಡೆಸಲಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಯೋಗಿ ಆದಿತ್ಯನಾಥ್ ಹೇಳಿಕೆ ವಿಚಾರ ರಾಜ್ಯದ ಬಿಜೆಪಿ ನಾಯಕರಿಗೆ ಮಾನ ಮರ್ಯಾದಿ ಇಲ್ಲವೇ ರಾಜ್ಯದ ಮರ್ಯಾದೆಯನ್ನು ಯೋಗಿ ಹೀಯಾಳಿಸಿದ್ದಾರೆ. ಯೋಗಿ ಹೇಳಿಕೆ ಕೇಳಿಕೊಂಡು ರಾಜ್ಯದ ಬಿಜೆಪಿ ನಾಯಕರು ನಗುತ್ತಾ ಕುಳಿತಿದ್ದಾರೆ ಇವರಿಗೆ ಸ್ವಲ್ಪವೂ ಮರ್ಯಾದೆಯಿಲ್ಲವೇ ಯುಪಿ ಸಿಎಂ ಕರೆಸಿ ನಮ್ಮ ರಾಜ್ಯ ಹೀಯಾಳಿಸೋಕೆ ಇವರು ಯಾರು ಎಂದು ಪ್ರಶಸ್ನಿಸಿದರು.
ತೆರಿಗೆ ಹಣ ಸಂಗ್ರಹಣೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದ್ದೇವೆ ತೆರಿಗೆ ಸಂಗ್ರಹದಲ್ಲಿ ನೂರು ಪರ್ಸೆಂಟ್ ಮುಂದಿದ್ದೇವೆ ಯುಪಿಯದ್ದು ಯಾವ ಸ್ಥಾನದಲ್ಲಿದೆ ಎಫ್ ಡಿಐ ನಲ್ಲಿ 19 ರಷ್ಟು ಸಾಧನೆಯಾಗಿದೆ ಇಡೀ ದೇಶದ ಎಫ್ ಡಿಐನಲ್ಲಿ ನಮ್ಮ ಪಾಲು 19 ರಷ್ಟು ಗುಜರಾತ್ 1.6 ಹೂಡಿಕೆ ಮಾತ್ರ ಆಗಿದೆ ನಮಗೆ ವಿದೇಶಿ ಬಂಡವಾಳ ಡಬಲ್ ಆಗಿದೆ ಇದನ್ನ ಯೋಗಿ ಆದಿತ್ಯನಾಥ್ ತಿಳಿದುಕೊಳ್ಳಲಿ ಎಂದು ಹೇಳಿದರು.
ಮಹದಾಯಿ ನದಿ ನೀರು ಹಂಚಿಕೆ ವಿವಾದ ವಿಚಾರ ಬಿಜೆಪಿಯವರು ಈ ಮಟ್ಟಕ್ಕೆ ಇಳಿಯುತ್ತಾರೆಂಬುದು ಗೊತ್ತಿರಲಿಲ್ಲ ಚುನಾವಣೆ ಹತ್ತಿರ ಬಂದಾಗ ಇಟ್ಟುಕೊಂಡಿದ್ದಾರೆ. ನಾವು ಪ್ರಧಾನಿ ಬಳಿಗೆ ನಿಯೋಗ ಹೋಗಿದ್ದೆವು. ಆಗ ಸಹಕಾರ ಸಿಗಲಿಲ್ಲ ಆ ಸಂದರ್ಭದಲ್ಲಿ ಯಾರೂ ಕೂಡ ಮಾತನಾಡಿರಲಿಲ್ಲ. ರಾಜ್ಯದ ಹಿತ ಇವರಿಗೆ ಮುಖ್ಯವಲ್ಲ ಚುನಾವಣಾ ಹಿತ ಇವರಿಗೆ ಮುಖ್ಯವಾಗಿದೆ ಎಂದರು.
-
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು












Click it and Unblock the Notifications