ಮಾಜಿ ಗೃಹ ಸಚಿವರ ಮನೆಯಲ್ಲಿ ವಿದೇಶಿ ಕರೆನ್ಸಿ ಸೇರಿ ಇತರ ವಸ್ತು ಕಳ್ಳತನ

ಬೆಂಗಳೂರು, ಆಗಸ್ಟ್01: ನಗರದಲ್ಲಿ ಕೆಲಸಕ್ಕೆ ಜನರು ಸಿಗುವುದು ಬಹಳ ಕಷ್ಟವಾಗುತ್ತಿದೆ. ಅದರಲ್ಲೂ ಕನ್ನಡಿಗರು ಕೆಲಸಕ್ಕೆ ಬಂದರೆ ದುಬಾರಿ ಹಣವನ್ನು ಕೇಳುತ್ತಾರೆ ಅನ್ನೋದು ಇನ್ನೊಂದು ಕಾರಣ. ಇದಕ್ಕಾಗಿ ಹೊರರಾಜ್ಯದಿಂದ ಬಂದವರಿಗೆ ಕೆಲಸವನ್ನು ನೀಡುತ್ತಾರೆ.

ಕೆಲಸ ಮಾಡುವ ನೆಪದಲ್ಲಿ ವಿಶ್ವಾಸದಿಂದ ಇದ್ದು ಆ ನಂತ ಮನೆಯನ್ನೇ ದೋಚಿ ಬಿಡುವ ಘಟನೆಗಳು ನಡೆದಿವೆ. ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್ ಮನೆಯಲ್ಲೂ ಇಂತಹ ಘಟನೆ ನಡೆದು ಕೋಟಿ ಬೆಲೆಯ ಕರೆನ್ಸಿ, ವಿವಿಧ ವಸ್ತುಗಳನ್ನು ದೋಚಲಾಗಿದೆ.

ಕಾಂಗ್ರೆಸ್ ನಾಯಕ ಎಂ. ಬಿ. ಪಾಟೀಲ್‌ ಮನೆಯಲ್ಲಿ ಹತ್ತಾರು ಜನ ಕೆಲಸ ಮಾಡುತ್ತಾರೆ. ಆದರೆ ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ಎಂ. ಬಿ. ಪಾಟೀಲ್ ಆಗಾಗ ತಮ್ಮ ಸ್ವಕ್ಷೇತ್ರಕ್ಕೆ ತೆರಳುತ್ತಿರುತ್ತಾರೆ.

ಎಂ. ಬಿ. ಪಾಟೀಲರು ಮನೆಯಲ್ಲಿಲ್ಲದ ವೇಳೆಯಲ್ಲಿ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೇ ಕಳ್ಳತನವನ್ನು ಮಾಡಿರುವುದು ತಿಳಿದುಬಂದಿದೆ. ಆದರೆ ಕಳ್ಳತನ ನಡೆದು ವಾರದ ಬಳಿಕ ಸದಾಶಿವನಗರ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿ ಬಂಧಿಸಿದ್ದಾರೆ.

ವಿದೇಶಿ ಕರೆನ್ಸಿ , ವಾಚುಗಳು ನಾಪತ್ತೆ

ವಿದೇಶಿ ಕರೆನ್ಸಿ , ವಾಚುಗಳು ನಾಪತ್ತೆ

ಮಾಜಿ ಗೃಹ ಸಚಿವ, ಕಾಂಗ್ರೆಸ್ ಮುಖಂಡ ಎಂ. ಬಿ. ಪಾಟೀಲ್‌ ಸದಾಶಿವನಗರ ನಿವಾಸ ನಂದನವನದಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಎಂ. ಬಿ. ಪಾಟೀಲ್‌ರ ಬಟ್ಟೆಯನ್ನು ಐರನ್ ಮಾಡುತ್ತಿದ್ದ ವ್ಯಕ್ತಿಯೇ ಕಳ್ಳತನವನ್ನು ಮಾಡಿದ್ದಾನೆ. ಉತ್ತರ ಭಾರತ ಮೂಲದ ವ್ಯಕ್ತಿನ್ನು ಲಾಂಡ್ರಿ ಕೆಲಸಕ್ಕೆ ಇಟ್ಟುಕೊಳ್ಳಲಾಗಿತ್ತು. ಎಂ. ಬಿ. ಪಾಟೀಲರ ರೂಮಿನಲ್ಲಿದ್ದ ಬೆಲೆಬಾಳುವ ವಾಚು ಸೇರಿದಂತೆ ವಿದೇಶಿ ಕರೆನ್ಸಿಯನ್ನು ಕಳವು ಮಾಡಲಾಗಿತ್ತು.

ಪೊಲೀಸರಿಗೆ ದೂರು ನೀಡುತ್ತೀವಿ ಎಂದಾಗ ಪರಾರಿ

ಪೊಲೀಸರಿಗೆ ದೂರು ನೀಡುತ್ತೀವಿ ಎಂದಾಗ ಪರಾರಿ

ಎಂ. ಬಿ. ಪಾಟೀಲ್ ಮನೆಯಲ್ಲಿ ಕೆಲಸ ಮಾಡುವವರೇ ಕಳ್ಳತನ ಮಾಡಿರುವುದು ಮೆಲ್ನೋಟಕ್ಕೆ ಗೊತ್ತಾಗಿತ್ತು. ಈ ಕುರಿತು ಎಲ್ಲಾ ಕೆಲಸಗಾರನ್ನು ವಿಚಾರಿಸಲಾಗಿತ್ತು. ಆದರೆ ಯಾರು ಕಳ್ಳತನದ ತಪ್ಪು ಒಪ್ಪಿಕೊಂಡಿರಲಿಲ್ಲ. ಜೂನ್ 30ರಂದು ಕೆಲಸದವರ ಮುಂದೆ ಪೊಲೀಸರಿಗೆ ದೂರನ್ನು ಕೊಡುವುದಾಗಿ ಹೇಳಲಾಗಿತ್ತು. ಇದಾದ ಮರುದಿನವೇ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಜಯಂತ್ ದಾಸ್ ಎಂಬಾತ ಮನೆಯಲ್ಲಿದ್ದ ತನ್ನ ಲಗೇಜ್ ಸಹಿತ ಎಸ್ಕೇಪ್ ಆಗಿದ್ದ. ಎರಡು ದಿನ ಆತಬರುತ್ತಾನೆ ಎಂದು ಕಾಯ್ದ ಬಳಿಕ ಆತನೇ ಕದ್ದಿದ್ದಾನೆ ಎಂದು ತಿಳಿದು ಸದಾಶಿವ ನಗರ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ.

ಎಂ. ಬಿ. ಪಾಟೀಲರ ಹೆಸರು ಉಲ್ಲೇಖವಿಲ್ಲ ಏಕೆ?

ಎಂ. ಬಿ. ಪಾಟೀಲರ ಹೆಸರು ಉಲ್ಲೇಖವಿಲ್ಲ ಏಕೆ?

ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್ ಮನೆಯಲ್ಲಿ ಕಳೆದ ತಿಂಗಳು 85 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಮತ್ತು ಲಕ್ಷ ಲಕ್ಷ ಬೆಲೆಯ 6 ಬ್ರಾಂಡೆಡ್ ವಾಚ್ ಗಳು ಕಳ್ಳತನ ಆಗಿತ್ತು. ಎಂ. ಬಿ. ಪಾಟೀಲ್ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡ್ತಿದ್ದ ಜಯಂತ್ ದಾಸ್ ಎಂಬುವನು ಕದ್ದು ಒಡಿಸ್ಸಾಗೆ ಪರಾರಿಯಾಗಿದ್ದ. ಮಾಹಿತಿ ತಿಳಿದು ಮಾಜಿ ಗೃಹಮಂತ್ರಿಗಳು ತಮ್ಮ‌ ಅಡಿಗೆಯವರ ಮುಖೇನ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ದೂರಿನನ್ವಯ ಸದಾಶಿವನಗರ ಪೊಲೀಸರು ಆರೋಪಿ ಜಯಂತ್ ಬಂಧಿಸಿ ಕರೆ ತಂದಿದ್ದಾರೆ. ಸದ್ಯ ಐದು ದಿನ‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನೂ ಜಯಂತ್ ದಾಸ್ ಕಳೆದ ಐದು ವರ್ಷದಿಂದ ಎಂ‌. ಬಿ. ಪಾಟೀಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸದಾಶಿವನಗರ ಪೊಲೀಸರಿಂದ ತನಿಖೆ

ಸದಾಶಿವನಗರ ಪೊಲೀಸರಿಂದ ತನಿಖೆ

ಎಫ್‌ಐಆರ್ ದಾಖಲು ಮಾಡುವ ವೇಳೆ ಎಷ್ಟು ವಿದೇಶಿ ಕರೆನ್ಸಿ ಕಳ್ಳತನವಾಗಿದೆ. ಎಷ್ಟು ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ ಎಂಬುದನ್ನು ನಮೂದಿಸಿಲ್ಲ. ನಮ್ಮ ಸಾಹೇಬರು ಊರಿನಲ್ಲಿಲ್ಲದ ಕಾರಣ ಅವರು ಬಂದ ಬಳಿಕ ಮೌಲ್ಯವನ್ನು ತಿಳಿಸಲಾಗುತ್ತದೆ. ಜಯಂತ್ ದಾಸ್‌ನನ್ನು ಬಂಧಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಎಂ. ಬಿ. ಪಾಟೀಲರು ಲಕ್ಷ ಲಕ್ಷ ಮೊತ್ತದ ವಿದೇಶಿ ಕರೆನ್ಸಿಯನ್ನೇಕೆ ಮನೆಯಲ್ಲಿಟ್ಟುಕೊಂಡಿದ್ದರು. ಬ್ಲಾಕ್ ಮನಿ ಏನಾದರು ಇತ್ತ ಅನ್ನೋ ಬಗ್ಗೆಯೂ ಅನುಮಾನ ಉಂಟಾಗಿದ್ದು. ಸದಾಶಿವನಗರ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಬಯಲಿಗೆ ಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+