ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಆಹಾರ ಉತ್ಸವ, ಇದು ತಿಂಡಿ ಪೋತರ ಅಡ್ಡ

|
Google Oneindia Kannada News

ಬೆಂಗಳೂರು, ನವೆಂಬರ್ 21 : ಬಾಯಲ್ಲಿ ನೀರೂರಿಸುವ ಬಗೆ ಬಗೆಯ ಖಾದ್ಯಗಳನ್ನು ಹೊತ್ತು ತರುತ್ತಿದೆ ರುಚಿ ಸಂತೆ . ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಫುಡ್ ಫೆಸ್ಟಿವಲ್( ಆಹಾರ ಉತ್ಸವ) ನವೆಂಬರ್ 24ರಿಂದ ಪ್ರಾರಂಭವಾಗಲಿದೆ. ಬಿಗ್ಗೆಸ್ಟ್ ಫುಡ್ ಕಾರ್ನಿವಲ್- ತಿಂಡಿ ಪೋತರ ಅಡ್ಡ ಎನ್ನುವ ವಿಶೇಷ ಉತ್ಸವ ನಡೆಯಲಿದೆ.

ಆಹಾರ ಉತ್ಸವ ನ.24ರಿಂದ 26ರವರೆಗೆ ನಡೆಯಲಿದೆ. ಆಹಾರ ಮಾತರವಲ್ಲದೆ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿದೆ. ನ.24ರಂದು ಡೊಳ್ಳು ಕುಣಿತ, ವಾಸು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬರಲಿದೆ. ಅಷ್ಟೇ ಅಲ್ಲದೆ ಮಕ್ಕಳಿಗಾಗಿ ವಿಶೇಷ ವೇದಿಕೆಯನ್ನು ಸಿದ್ದಪಡಿಲಾಗುತ್ತಿದೆ.

Foodies will have great festival in Bengaluru

ನ.25ರಂದು ಶನಿವಾರ ಅಡುಗೆ ತಯಾರಿಕೆಯ ಸ್ಪರ್ಧೆ, ಫ್ಯಾಷನ್ ಶೋ, ಬೆಲ್ಲಿ ಡ್ಯಾನ್ಸ್ ಹಾಗೂ ಸಂಗೀತ ಕಾರ್ಯಕ್ರಮವಿರುತ್ತದೆ. ನ.26ರಂದು ಚಾರ್ವಿ ಮುರಳೀಧರ್ ಅವರಿಂದ ಸಂಗೀತ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭ, ಮಕ್ಕಳ ಫ್ಯಾಷನ್ ಶೋ ನಡೆಯಲಿದೆ.

ಫುಡ್ ಸ್ಟಾಲ್ ಗಳಲ್ಲಿ ವೇಗನ್, ಇಟಾಲಿಯನ್, ಅಮೆರಿಕನ್, ಇಂಡಿಯನ್, ಚೈನೀಸ್, ಫ್ರೆಂಚ್, ಮೆಡಿಟರೇನಿಯನ್, ಮ್ಯಾಕ್ಸಿಕನ್, ಫ್ಯೂಜನ್ ಆಹಾರಗಳು ಲಭ್ಯವಿರಲಿದೆ. ಆಸಕ್ತಿ ಇರುವವರು ಸ್ಟಾಲ್ ಬುಕಿಂಗ್ ಮಾಡಬಹುದು. ವಿಶೇಷ ಆಹಾರವನ್ನು ಸವಿಯಲಿಚ್ಛಿಸುವವರು ಆಹಾರ ಉತ್ಸವದಲ್ಲಿ ಪಾಲ್ಗೊಳ್ಳಬಹುದು.

English summary
Bengaluru's biggest food carnival will be held from November 24 to 26 at Freedom Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X