'ಇದೇನು ಗೋಪಾಲಪ್ಪನ ಛತ್ರವೇ?'ಎಂದು ಪ್ರಶ್ನಿಸಿದ ಸಚಿವ ಗೋಪಾಲಯ್ಯ'
ಬೆಂಗಳೂರು, ಫೆ. 24: ಕನ್ನಿಂಗ್ ಹ್ಯಾಮ್ ರಸ್ತೆಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ದಿಢೀರ್ ಭೇಟಿ ಕೊಟ್ಟು ಆಹಾರ ಸಚಿವ ಕೆ. ಗೋಪಾಲಯ್ಯ ಪರಿಶೀಲನೆ ನಡೆಸಿದ್ದಾರೆ.
ಸಚಿವ ಗೋಪಾಲಯ್ಯ ಅವರು ಕಚೇರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಶೇಕಡಾ 50ರಷ್ಟು ನೌಕರರು ಗೈರುಹಾಜರು ಹಾಗೂ ತಡವಾಗಿ ಬಂದಿದ್ದರು. ಇದರಿಂದ ಸಿಟ್ಟಿಗೆದ್ದ ಸಚಿವರು, ಇದೇನು ಗೋಪಾಲಪ್ಪನ ಛತ್ರವೇ? ಯಾವಾಗ ಬೇಕಾದರೂ ಬರಬಹುದು, ಹೋಗಬಹುದು ಎಂದುಕೊಂಡಿದ್ದೀರ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಜೊತೆಗೆ ಗೈರುಹಾಜರಾದವರಿಂದ ಸ್ಪಷ್ಟನೆ ಪಡೆದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಬಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications