Lalbagh Flower Show: ನಮ್ಮ ಮೆಟ್ರೋ ಟೋಕನ್ ಮಾರಾಟಕ್ಕೆ 3ದಿನ ನಿರ್ಬಂಧ, ಪೇಟರ್ ಟಿಕೆಟ್ ವಿತರಣೆ
ಬೆಂಗಳೂರು, ಆಗಸ್ಟ್ 12: ಸ್ವಾಂತತ್ರೋತ್ಸವ ಪ್ರಯುಕ್ತ ಬೆಂಗಳೂರು ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಈ ವರ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಥೀಮ್‌ನಲ್ಲಿ 'ಫಲಪುಷ್ಪ ಪ್ರದರ್ಶನ 2024' (Lalbagh Flower Show) ಹಮ್ಮಿಕೊಳ್ಳಲಾಗಿದೆ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ಪೇಪರ್ ಟಿಕೆಟ್ ವಿತರಣೆ ಮಾಡುವುದಾಗಿ ತಿಳಿಸಿದೆ.
ಲಾಲ್‌ಬಾಗ್ ಉದ್ಯಾನದಲ್ಲಿ 'ಫಲಪುಷ್ಪ ಪ್ರದರ್ಶನ' ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಸ್ವಾತಂತ್ರೋತ್ಸವ ದಿನ ಆಗಸ್ಟ್ 15, 17 ಮತ್ತು 18ರಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ತ್ವರಿತ ಸಂಚಾರಕ್ಕೆ ಅನುಕೂಲವಾಗುವಂತೆ ಟೋಕನ್ ಬದಲಾಗಿ ಪೇಪಟ್ ಟಿಕೆಟ್ ನೀಡುತ್ತಿದೆ.

ಈ ನಿಗದಿತ ದಿನಗಳಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಬೆಳಗ್ಗೆ 10.00 ರಿಂದ ರಾತ್ರಿ 08.00 ರವರೆಗೆ ಟೋಕನ್‌ಗಳ ಬದಲಿಗೆ ರಿಟರ್ನ್ ಪ್ರಯಾಣಕ್ಕೆ ಪ್ರಯಾಣಿಕರಿಗೆ ರೂ 30/ ಬೆಲೆ ಪೇಪರ್ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ನಮ್ಮ ಮೆಟ್ರೋ ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.
ಈ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ಖರೀದಿಸಿದ ದಿನದಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ.
ಬೇರೆ ಬೇರೆ ನಿಲ್ದಾಣಗಳಿಂದ ಬರುವ ಸಾರ್ವಜನಿಕರು ಟೋಕನ್, ಕಾರ್ಡ್, ಕ್ಯೂಆರ್ ಟಿಕೆಟ್‌ಗಳ ಮೂಲಕ ಲಾಲ್‌ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಬಹುದು. ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್ ನೀಡಲಾಗುತ್ತಿದೆ. ನೀವು ಕಾರ್ಡ್, ಮತ್ತು ಕ್ಯೂಆರ್ ಟಿಕೆಟ್ ಮೂಲಕ ಪ್ರಯಾಣಿಸಬಹುದು.
ಈ ಮೂಲಕ ನಮ್ಮ ಮೆಟ್ರೋ ಅಧಿಕಾರಿಗಳು ಮೇಲೆ ತಿಳಿಸಿದ ದಿನಗಳಲ್ಲಿ ಹಾಗೂ ಅವಧಿಯಲ್ಲಿ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್‌ಗಳನ್ನು ನೀಡಲಾಗುವುದಿಲ್ಲ.
ಟಿಕೆಟ್‌ಗಳನ್ನು ಖರೀದಿಸಲು ಕಾಯುವ ಸಮಯವನ್ನು ತಪ್ಪಿಸಲು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಫ್ಲಾವರ್ ಶೋಗೆ ಜನಸಾಗರ: 21ಲಕ್ಷ ರೂ. ಸಂಗ್ರಹ
ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಈ 216ನೇ ಫ್ಲಾವರ್ ಶೋಗೆ ಆಗಸ್ಟ್ 08ರಂದು ಸಿಎಂ ಸಿದ್ದರಾಮಯ್ಯ ಚಾಲೆನೆ ನೀಡಿದರು. ಮುಂದಿನ ಆಗಸ್ಟ್ 20ರವರೆಗೂ ಈ ಪ್ರದರ್ಶನ ಇರಲಿದೆ. ಮೊದಲ ದಿನ ಕಳೆದ ಭಾನುವಾರ ಅಪಾರ ಸಂಖ್ಯೆಯಲ್ಲಿ ಜನರು ಲಾಲ್ ಬಾಗ್‌ಗೆ ಆಗಮಿಸಿ ವೀಕ್ಷಿಸಿದ್ದಾರೆ.
ಬರೋಬ್ಬರಿ 32ಲಕ್ಷ ತರಹೇವಾರಿ ಹೂಗಳಿಂದ ಈ ಫ್ಲಾವರ್ ಶೋ ಸಿದ್ಧಪಡಿಸಲಾಗಿದೆ. ಮೊದಲ ದಿನವೇ ಆಗಮಿಸಿದ ಜನರಿಂದ 21ಲಕ್ಷ ರೂಪಾಯಿ ಸಂಗ್ರಹವಾಗಿದೆ. ಗುರುವಾರ ಆಗಸ್ಟ್ 15ರಂದು ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ. ಲಾಲ್ ಬಾಗ್ ಸುತ್ತಮುತ್ತ ಜನ, ವಾಹನ ದಟ್ಟಣೆ ಉಂಟಾಗಿದೆ.












Click it and Unblock the Notifications