ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಪ್ರವೇಶ ದುಬಾರಿ

ಬೆಂಗಳೂರು, ಜುಲೈ31: ಈ ಬಾರಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆ.4ರಿಂದ ಆರಂಭವಾಗಲಿದೆ. ಪ್ರವೇಶ ಶುಲ್ಕವನ್ನು 70 ರೂ.ಗೆ ಏರಿಸಲಾಗಿದೆ.

ದರ ಏರಿಕೆಯು ರಜೆ ಮತ್ತು ವಾರದ ಎಲ್ಲಾ ದಿನಗಳಿಗೆ ಅನ್ವಯವಾಗಲಿದೆ. ಮಕ್ಕಳಿಗೆ ಎಲ್ಲಾ ದಿನಗಳಲ್ಲೂ 20 ರೂ. ನಿಗದಿಯಾಗಿದೆ. ಮನರಂಜೆನಗೂ ತೆರಿಗೆ ಅನ್ವಯವಾಗುವುದರಿಂದ ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಹಾಗೂ ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಫಲಪುಷ್ಪ ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ಶುಲ್ಕ ಹೆಚ್ಚಳದ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಪ್ರತಿ ವರ್ಷ ಶುಲ್ಕವನ್ನು ಏರಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುತ್ತಿಲ್ಲ, ಪ್ರದರ್ಶನದ ವೇಳೆ ನಡೆಯುವ ಅವ್ಯವಸ್ಥೆಗಳ ಬಗೆಗೂ ಆಯೋಜಕರು ಹೆಚ್ಚು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಬಾರಿ ಲಾಲ್‌ ಬಾಗ್‌ ಫ್ಲವರ್‌ ಶೋ ಇನ್ನುಷ್ಟು ಆಕರ್ಷಕವಾಗಿರಲಿದೆ. ಭಾರತೀಯ ಸೇನೆಯ ಸಾಮರ್ಥ್ಯವನ್ನು ಬಿಂಬಿಸುವ ಪುಷ್ಪ ಪ್ರದರ್ಶನ ಇದಾಗಿರಲಿದೆ.

Flora show at Lalbagh will be more cost on this I-Day!

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ರಕ್ಷಣಾ ಇಲಾಖೆಯ ಮೂರು ವಿಭಾಗಗಳಾದ ವಾಯುಸೇನೆ, ಭೂ ಸೇನೆ ಹಾಗೂ ನೌಕಾಪಡೆಯ ಸಾಧನೆ, ಸಾಮರ್ಥ್ಯ ಹಾಗೂ ನೌಕಾಪಡೆಯ ಶೌರ್ಯ ಅನಾವರಣಗೊಳ್ಳಲಿದೆ.

ಕಾಷ್ಟ್ರಕವಿ ಕುವೆಂಪು ಹಾಗೂ ಬಾಹುಬಲಿಯನ್ನು ನಿರ್ಮಿಸಿ ಜನರ ಗಮನಸೆಳೆದಿದ್ದ ತೋಟಗಾರಿಕೆ ಇಲಾಖೆ ದೇಶದ ರಕ್ಷಣೆಗಾಗಿ ಬಲಿದಾನ ಮಾಡಿದ ಹುತಾತ್ಮರ ಜೀವನದ ಸಂಪೂರ್ಣ ವಿವರಗಳನ್ನು ಗಾಜಿನ ಮನೆಯಲ್ಲಿ ಪ್ರದರ್ಶಿಸಲಿದೆ. ಈ ಕುರಿತು ಮೈಸೂರು ಉದ್ಯಾನ ಕಲಾಸಂಘ ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+