ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯಿಂದಾಗಿ ಬಯಲಾಯ್ತೇ 'ನಮ್ಮ ಮೆಟ್ರೋ' ಕಾಮಗಾರಿ ಸಾಚಾತನ?

ಮಳೆಯಿಂದಾಗಿ ಸೋರುತ್ತಿರುವ ನಮ್ಮ ಮೆಟ್ರೋ ನಿಲ್ದಾಣಗಳು. ಮೆಟ್ರೋ ಕಾಮಗಾರಿಯನ್ನು ಪ್ರಶ್ನಿಸುತ್ತಿವೆ ಈ ವಾಟರ್ ಲೀಕೇಜ್.

|
Google Oneindia Kannada News

ಬೆಂಗಳೂರು, ಆಗಸ್ಟ್ 28: 'ನಮ್ಮ ಮೆಟ್ರೋ' ಮಾರ್ಗಗಳು ಉದ್ಘಾಟನೆಯಾದಾಗ ಬೆಂಗಳೂರಿಗರಾದ ನಾವು ಹಿರಿಹಿರಿ ಹಿಗ್ಗಿದೆವು. ವಿಶ್ವಮಟ್ಟದ ಸಂಪರ್ಕ ಸೌಲಭ್ಯವೊಂದು ನಮ್ಮಲ್ಲೂ ತಲೆಯಿತ್ತೆಂದು ಬೀಗಿದೆವು. ಮೆಟ್ರೋ ರೈಲಿನಲ್ಲಿ ಸಂಚರಿಸಿ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದೆವು. ಆದರೆ, ಈ ಎಲ್ಲಾ ಖುಷಿ, ಹಿರಿಮೆ, ಸಂಭ್ರಮಗಳು ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಅಗಾಧ ಮಳೆಗೆ ಕೊಚ್ಚಿಕೊಂಡು ಹೋಗಿವೆ.

Recommended Video

Namma Metro North to South Bengaluru connectivity by April | OneIndia Kannada

ಇವು 'ನಮ್ಮ ಮೆಟ್ರೋ'ದ ಸುಂದರ, ವಿರೂಪ, ಕುರೂಪ ಚಿತ್ರಗಳು!ಇವು 'ನಮ್ಮ ಮೆಟ್ರೋ'ದ ಸುಂದರ, ವಿರೂಪ, ಕುರೂಪ ಚಿತ್ರಗಳು!

ಹೌದು. ನಾವು ವಿಶ್ವಮಟ್ಟದ ಸೌಲಭ್ಯವೆಂದು ಕಲ್ಪಿಸಿಕೊಂಡಿದ್ದ ನಮ್ಮ ಮೆಟ್ರೋ ನಿರ್ಮಾಣದಲ್ಲಿನ ಲೋಪ ದೋಷಗಳು ಈಗ ಕಣ್ಣಿಗೆ ರಾಚುತ್ತಿವೆ. ಅಗಾಧ ಮಳೆಯಿಂದಾಗಿ, ಹಲವಾರು ಮೆಟ್ರೋ ನಿಲ್ದಾಣಗಳಲ್ಲಿರುವ ಮೇಲ್ಛಾವಣೆಗಳು ಸೋರುತ್ತಿವೆ. ಫ್ಲಾಟ್ ಫಾರಂನೊಳಗೆ ನೀರು ನುಗುತ್ತಿವೆ. ನೆಲ ಮಟ್ಟದಿಂದ ಕೆಳಗಿರುವ ಮೆಟ್ರೋ ನಿಲ್ದಾಣಗಳಿಗೆ ಮಳೆ ನೀರು ನುಗ್ಗಿ ನಿಲ್ದಾಣಗಳಲ್ಲಿ ನೀರು ನಿಲ್ಲುವಂತಾಗುತ್ತಿದೆ.

Flaws in Namma Metro contruction as Rain water leakage in various stations

ಇದು, ನಮ್ಮ ಮೆಟ್ರೋ ಬಗ್ಗೆ ಜನರಿಗೆ ಭ್ರಮ ನಿರಸನವಾಗುವಂತೆ ಮಾಡಿದೆ. ಎಂ.ಜಿ. ರಸ್ತೆ ನಿಲ್ದಾಣ, ಕಬ್ಬನ್ ಪಾರ್ಕ್ ನಿಲ್ದಾಣ ಸೇರಿದಂತೆ ಹಲವರು ಮೆಟ್ರೋ ಸ್ಟೇಷನ್ ಗಳ ಮೇಲ್ಛಾವಣೆ ಸೋರುತ್ತಿವೆ ಅಥವಾ ನಿಲ್ದಾಣದೊಳಗ್ಗೆ ನೀರು ಬಂದು ನಿಲ್ಲುತ್ತಿದೆ. ಟಿಕೆಟ್ ಕೌಂಟರ್ ಗಳು, ಫ್ಲಾಟ್ ಫಾರಂಗಳು - ಹೀಗೆ ಎಲ್ಲೆಲ್ಲೂ ನೀರು ಸೋರುತ್ತಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ತಂದಿದೆ.

ನಮ್ಮ ಮೆಟ್ರೋ ಪ್ರಯಾಣಿಕರೇ, 10 ನಿಮಿಷ ಮೊದಲೇ ನಿಲ್ದಾಣಕ್ಕೆ ಬನ್ನಿ!ನಮ್ಮ ಮೆಟ್ರೋ ಪ್ರಯಾಣಿಕರೇ, 10 ನಿಮಿಷ ಮೊದಲೇ ನಿಲ್ದಾಣಕ್ಕೆ ಬನ್ನಿ!

ಅಷ್ಟೇ ಅಲ್ಲ, ನಮ್ಮ ಮೆಟ್ರೋದ ಪ್ರಮುಖಾತಿ ಪ್ರಮುಖ ನಿಲ್ದಾಣವಾದ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಕೂಡ ಇಂಥ ಲೋಪದೋಷಗಳಿಂದ ಹೊರತಾಗಿಲ್ಲ. ಹಸಿರು ಹಾಗೂ ನೇರಳೆ ಮಾರ್ಗಗಳಿಗೆ ಜಂಕ್ಷನ್ ಇದಾಗಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ 3ನೇ ಹಾಗೂ 4ನೇ ಫ್ಲಾಟ್ ಫಾರಂ ನ ಮೇಲ್ಛಾವಣೆಯು ಈಗಾಗಲೇ ಲೀಕ್ ಆಗುತ್ತಿದೆ.

ಸುಮಾರು 7.5 ಎಕರೆ ವಿಸ್ತೀರ್ಣದಲ್ಲಿ 500 ಕೋಟಿ ರು. ವೆಚ್ಛದಲ್ಲಿ ಕಟ್ಟಲಾಗಿರುವ ಈ ನಿಲ್ದಾಣವು 2016ರ ಏಪ್ರಿಲ್ ನಲ್ಲಿ ಭಾಗಶಃ ಉದ್ಘಾಟನೆಗೊಂಡಿತ್ತು. ಇದೇ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಜನಸೇವೆಗೆ ಲಭ್ಯವಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಜನರಿಗೆ ತೆರೆದುಕೊಂಡ ನಂತರದ ಕೆಲವೇ ತಿಂಗಳುಗಳಲ್ಲೇ ಇಂಥ ದುಸ್ಥಿಗೆ ಬಂದಿರುವುದು ಶೋಚನೀಯ ಎಂದು ಮೆಟ್ರೋ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

English summary
Leaking roofs, puddles and bins — this is not the ‘world class’ Namma Metro we had hoped for.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X